More

    ನೇಕಾರರ ಹಿತ ಕಾಯಲು ಬದ್ಧ

    ಬಾಗಲಕೋಟೆ: ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನೂತನ ಆಡಳಿತ ಮಂಡಳಿ ಚುನಾವಣೆಯಲ್ಲಿ ನನ್ನ ಗೆಲುವು ಇಡೀ ನೇಕಾರ ಸಮುದಾಯದ ಸಂಘಟಿತ ಹೋರಾಟಕ್ಕೆ ಸಿಕ್ಕ ಜಯವಾಗಿದೆ ಎಂದು ಬಿಡಿಸಿಸಿ ಬ್ಯಾಂಕ್ ನೂತನ ನಿರ್ದೇಶಕ ಮುರುಗೇಶ ಕಡ್ಲಿಮಟ್ಟಿ ಹೇಳಿದರು.

    ಬಿಡಿಸಿಸಿ ಬ್ಯಾಂಕ್ ಚುನಾವಣೆಗೆ ಸ್ಪರ್ಧಿಸುವ ಆಸಕ್ತಿ ವಹಿಸಿದಾಗ ಈ ಹಿಂದೆ ಮೂರು ಸಾರಿ ಅವಕಾಶದಿಂದ ವಂಚಿತನಾಗಿದ್ದೆ. ಈ ಬಾರಿಯೂ ಅದೇ ರೀತಿಯ ವಾತಾವರಣ ನಿರ್ಮಾಣವಾದಾಗ ನಮ್ಮೆಲ್ಲ ಹಿತೈಷಿಗಳು, ಸ್ನೇಹಿತರು, ಜಿಲ್ಲೆಯ ಸಮಸ್ತ ನೇಕಾರ ಸಮುದಾಯದ ಮುಖಂಡರು ಒತ್ತಾಯ ಮಾಡಿ ಕಣದಲ್ಲಿ ಉಳಿಸಿದರು. ಅಲ್ಲದೆ, ನನ್ನ ಪರವಾಗಿ ತಿಂಗಳ ಕಾಲ ಶ್ರಮವಹಿಸಿದ ಪರಿಣಾಮದಿಂದ ಚುನಾವಣೆಯಲ್ಲಿ ಸುಲಭವಾಗಿ ಗೆಲ್ಲಲು ಸಾಧ್ಯವಾಯಿತು ಎಂದು ಜಿಲ್ಲೆಯ ಕಮತಗಿ ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಬಿಡಿಸಿಸಿ ಬ್ಯಾಂಕ್‌ನಿಂದ ಶೂನ್ಯ ಬಡ್ಡಿದರಲ್ಲಿ ನೇಕಾರರಿಗೆ ಸಾಲ ಸೌಲಭ್ಯ, ಸಾಲವನ್ನು ಮರುಪಾವತಿ ಮಾಡುವ ಅವಧಿ ನೇಕಾರರಿಗೆ 1 ವರ್ಷವಿದ್ದು, ಅದನ್ನು 3 ವರ್ಷಕ್ಕೆ ಹೆಚ್ಚಿಸುವುದು, ನೇಕಾರ ಸಹಕಾರ ಸಂಘಗಳ ಕಟ್ಟಡಗಳಿಗೆ ಬಿಡಿಸಿಸಿ ಬ್ಯಾಂಕ್‌ನಿಂದ ನೀಡುವ 2 ಲಕ್ಷ ರೂ. ಕಟ್ಟಡ ಸಹಾಯ ನಿಧಿಯನ್ನು 5 ಲಕ್ಷ ರೂ. ವರೆಗೆ ಹೆಚ್ಚಿಸುವುದು, ನೇಕಾರರು ಗೃಹ ನಿರ್ಮಾಣಕ್ಕೆ ಅಗತ್ಯವಿರುವ ಸಾಲ ಸೌಲಭ್ಯದ ನಿಯಮಗಳನ್ನು ಸರಳೀಕರಣಗೊಳಿಸಲಾಗುವುದು, ನೇಕಾರ ಸಮುದಾಯ ವಿದ್ಯಾರ್ಥಿಗಳಿಗೆ ಬಿಡಿಸಿಸಿ ಬ್ಯಾಂಕ್‌ನಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಪ್ರತಿಭಾ ಪುರಸ್ಕಾರ ಪ್ರಾಮಾಣಿಕವಾಗಿ ಕಾರ್ಯರೂಪದಲ್ಲಿ ತರುತ್ತೇನೆ. ಒಟ್ಟಾರೆ ಬಿಡಿಸಿಸಿ ಬ್ಯಾಂಕ್ ಹಾಗೂ ಜಿಲ್ಲಾ ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ನೇಕಾರರಿಗೆ ದೊರೆಯಬಹುದಾದ ಎಲ್ಲ ಸೌಲಭ್ಯಗಳನ್ನು ದೊರಕಿಸಿಕೊಡುವಲ್ಲಿ ಶ್ರಮಿಸುತ್ತೇನೆ ಎಂದರು.

    ನೇಕಾರ ಸಮುದಾಯದ ಮುಖಂಡರಾದ ಬಸವರಾಜ ಕುಂಬಳಾವತಿ, ಹುಚ್ಚಪ್ಪ ಸಿಂಹಾಸನ, ಕಮಲಪ್ಪ ಕಡ್ಲಿಮಟ್ಟಿ, ರಮೇಶ ಜಮಖಂಡಿ, ಸಿದ್ದಪ್ಪ ಭಾಪ್ರಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts