More

    ಕರೊನಾ ಪರಿಸ್ಥಿತಿಯ ಗಂಭೀರತೆ ಅರಿತುಕೊಳ್ಳಿ

    ಬಾಗಲಕೋಟೆ: ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಎಷ್ಟೇ ಕಠಿಣ ನಿಯಮ ತಂದರೂ ಸಾರ್ವಜನಿಕ ವಲಯದಿಂದ ನಿರೀಕ್ಷಿತ ಪ್ರಮಾಣದಲ್ಲಿ ಸ್ಪಂದನೆ ಇನ್ನೂ ಸಿಗುತ್ತಿಲ್ಲ. ಮಾಸ್ಕ್, ಸಾನಿಟೈಜಿಂಗ್, ದೈಹಿಕ ಅಂತರದ ಕಡೆಗೆ ಒತ್ತು ಕೊಡದಿರುವುದು ಎಲ್ಲೆಡೆ ಕಂಡು ಬರುತ್ತಿದೆ. ಇದೀಗ ಬಾಗಲಕೋಟೆ ನಗರದ 8 ವರ್ಷದ ಬಾಲಕಿ ವಿಡಿಯೋ ಮೂಲಕ ಇಂತಹ ಜನರಿಗೆ ಜಾಗೃತಿಯ ಮಾತುಗಳನ್ನು ಹೇಳಿದ್ದಾಳೆ.

    ನಗರದ ವೈಷ್ಣವಿ ಬಾದವಾಡಗಿ ಎನ್ನುವ ಬಾಲಕಿ, ವಿಡಿಯೋ ಮೂಲಕ ಸಾರ್ವಜನಿಕರಿಗೆ ಕರೊನಾ ಜಾಗೃತಿ ಪಾಠದ ಜತೆಗೆ ನಿಯಮ ಉಲ್ಲಂಘಿಸುವ ಜನರಿಗೆ ಮಾತಿನ ಮೂಲಕವೇ ಚಾಟಿ ಬೀಸಿದ್ದಾಳೆ.

    ಕಳೆದ ವರ್ಷವೂ ನಾನು ಮೊದಲನೇ ವಿಡಿಯೋದಲ್ಲೂ ಕರೊನಾ ಮುಂಜಾಗ್ರತಾ ಕ್ರಮಗಳ ಬಗ್ಗೆ ಹೇಳಿದ್ದೆ. ಈಗ ಎರಡನೇ ಅಲೆ ದಾಳಿ ಇಟ್ಟಿದೆ. ಆದರೂ ಜನರು ಕರೊನಾ ನಿಯಮ ಪಾಲಿಸುತ್ತಿಲ್ಲ. ಪರಿಸ್ಥಿತಿ ಗಂಭೀರತೆ ಅರ್ಥ ಮಾಡಿಕೊಳ್ಳಿ. ಕರೊನಾ ಬಂದವರಿಗೆ ಆಸ್ಪತ್ರೆಯಲ್ಲೂ ಬೆಡ್, ಆಕ್ಸಿಜನ್ ಸಿಗುತ್ತಿಲ್ಲ. ಸತ್ತರೆ ಸುಡೋದಕ್ಕೂ ಜಾಗ ಇಲ್ಲವಾಗಿದೆ. ಇಂತಹ ಪರಿಸ್ಥಿತಿ ಅರ್ಥ ಮಾಡಿಕೊಂಡು ನಿಯಮ ಪಾಲಿಸಿ ಎಂದು ಮನವಿ ಮಾಡಿದ್ದಾಳೆ.

    ಸಾರ್ವಜನಿಕರು ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಗೆ ಹೋಗಿ. ತರಕಾರಿ, ದಿನಸಿ ತರಲು ಮಾತ್ರ ಹೊರಗಡೆ ಹೋಗಿ. ಮನೆಯಿಂದ ಹೋಗುವಾಗ ಮಾಸ್ಕ್ ಹಾಕಿಕೊಳ್ಳಿ. ಸ್ಯಾನಿಟೈಸರ್ ಜತೆಯಲ್ಲಿ ಇರಲಿ, ದೈಹಿಕ ಅಂತರ ಕಾಯ್ದುಕೊಳ್ಳಿ ಎಂದು ಸಲಹೆ ನೀಡಿದ್ದಾಳೆ. ಬಾಲಕಿ ವೈಷ್ಣವಿ ಬಾಗಲಕೋಟೆ ನ್ಯಾಯಾಲಯದ ಸಿಬ್ಬಂದಿ ಬಸವರಾಜ ಬಾದವಾಡಗಿ ಅವರ ಪುತ್ರಿ.

    
    
    Community-verified icon

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts