More

    ನಿರಾಣಿ ಫೌಂಡೇಶನ್‌ದಿಂದ ನೆರವು

    ಬಾಗಲಕೋಟೆ: ಕರೊನಾ ಹರಡದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಾಕಷ್ಟು ಮುಂಜಾಗೃತ ಕ್ರಮ ತೆಗೆದುಕೊಂಡಿವೆ. ಲಾಕ್‌ಡೌನ್‌ನಿಂದ ಅನೇಕ ಜನರು ಸಂಕಷ್ಟಕ್ಕೆ ಸಿಲುಕಿದ್ದರು. ಹೀಗಾಗಿ ನಿರಾಣಿ ಫೌಂಡೇಶನ್ ಮೂಲಕ ಸಾವಿರಾರು ಜನರಿಗೆ ಸಹಾಯ ಹಸ್ತ ಚಾಚಲಾಗಿದೆ ಎಂದು ವಿಧಾನ ಪರಿಷತ್ತ ಸದಸ್ಯ ಹನುಮಂತ ನಿರಾಣಿ ಹೇಳಿದರು.

    ನಿರಾಣಿ ಫೌಂಡೇಶನ್ ವತಿಯಿಂದ ಬೀಳಗಿ ಮತಕ್ಷೇತ್ರದ ಗ್ರಾ.ಪಂ. ಮಟ್ಟದಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತರು, ಗ್ರಾ.ಪಂ. ಡಿ. ದರ್ಜೆ ನೌಕರರಿಗೆ ಆಹಾರಧಾನ್ಯ ಕಿಟ್, ಮಾಸ್ಕ, ಸ್ಯಾನಟೈಜರ್ ಹಾಗೂ ಅಲೆಮಾರಿ, ಅರೆ ಅಲೆಮಾರಿ, ಬಡ ಕುಟುಂಬಗಳಿಗೆ ಅಂದಾಜು 9500 ಆಹಾರ ಕಿಟ್‌ಗಳನ್ನು, ಕಾಯಿಪಲ್ಲೆ ವಿತರಿಸಲಾಗಿದೆ. ಮತಕ್ಷೇತ್ರದಲ್ಲಿ ಒಟ್ಟು 25 ಸಾವಿರ ಮಾಸ್ಕ್ ಗಳನ್ನು ವಿತರಿಸಲಾಗಿದೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಇನ್ನು ಗೋವಾದಲ್ಲಿ ನೆಲೆಸಿರುವ ಬೀಳಗಿ ಕ್ಷೇತ್ರದ ಕಾರ್ಮಿಕರಿಗೆ 500 ಆಹಾರ್ ಕಿಟ್‌ಗಳನ್ನು ಪೂರೈಸಲಾಗಿದೆ. 50 ಅಲೆಮಾರಿ ಕುಟುಂಬಗಳಿಗೆ ಬಟ್ಟೆ, ಹಾಸಿಗೆ, ಹೊದಿಕೆಗಳನ್ನು ನೀಡಲಾಗಿದೆ. ಕ್ಷೇತ್ರದ 263 ಬೂತಗಳಿಗೆ ತಲಾ 20 ಲೀಟರದಂತೆ ಸ್ಯಾನಿಟೈಜರ್ ನೀಡಿ. ನಗರ ಹಾಗೂ ಗ್ರಾಮೀಣ ಭಾಗದ ಪ್ರತಿಯೊಂದು ಕುಟುಂಬಕ್ಕೆ ಸ್ಯಾನಿಟೈಜರ್ ತಲುಪುವಂತೆ ಮಾಡಲಾಗಿದೆ. ಬೀಳಗಿ ಪಟ್ಟಣದ ಪೌರ ಕಾರ್ಮಿಕರು, ಅಂಗನವಾಡಿ ಕಾರ್ಯಕರ್ತರಿಗೆ ಆಹಾರ್ ಕಿಟ್‌ಗಳನ್ನು ವಿತರಿಸಲಾಗಿದೆ ಎಂದರು.

    ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರಿಗೆ 60 ಸಾವಿರ ರೂ.ಗಳ ವೆಚ್ಚದಲ್ಲಿ ಪಿಪಿಇ ಕಿಟ್, ಟೆಂಪ್ರೆಚರ್ ಗನ್, ಎನ್. 90 ಮಾಸ್ಕಗಳನ್ನು ಉಚಿತವಾಗಿ ವಿತರಿಸಲಾಗಿದೆ, ಬೇರೆ ರಾಜ್ಯ ಮತ್ತು ಜಿಲ್ಲೆಗಳಿಂದ ಆಗಮಿಸಿದ ಕ್ಯಾರಂಟೈನ್‌ನಲ್ಲಿ ಇರುವ ಕಾರ್ಮಿಕ ಕುಟುಂಬಗಳಿಗೆ ಆಹಾರ ಕಿಟ್‌ಗಳನ್ನು ನಿರಾಣಿ ೌಂಡೇಶನ್ ವಿತರಿಸಿದೆ ಎಂದು ತಿಳಿಸಿದರು.

    ಗ್ರಾಮ ಪಂಚಾಯಿತಿಗಳ ಆಡಳಿತ ಅವಧಿ ಮುಗಿದಿದೆ. ಕೊರನಾ ಹಿನ್ನಲೆಯಲ್ಲಿ ಚುನಾವಣೆ ನಡೆಸಲು ಸಾಧ್ಯವಾಗುವದಿಲ್ಲ. ಹೀಗಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಗ್ರಾ.ಪಂಗಳಿಗೆ ನಾಮ ನಿರ್ದೇಶಿತ ಸದಸ್ಯರನ್ನು ನೇಮಿಸಲು ಸರ್ಕಾರ ನಿರ್ಧರಿಸಿದೆ. ಇದರಲ್ಲಿ ಯಾವುದು ತಪ್ಪಿಲ್ಲ. ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ವಿಷಯದಲ್ಲಿ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ. ಅತಿಥಿ ಉಪನ್ಯಾಸಕರ ಸಂಬಳವನ್ನು ಸರ್ಕಾರ ಬಿಡುಗಡೆ ಮಾಡಿದೆ ಎಂದು ಹೇಳಿದರು.

    ಜಿ.ಪಂ. ಸದಸ್ಯ ಹೂವಪ್ಪ ರಾಠೋಡ, ಬೀಳಗಿ ಪಟ್ಟಣ ಪಂಚಾಯಿತಿ ಸದಸ್ಯ ಮುತ್ತು ಬೋರ್ಜಿ, ಬೀಳಗಿ ನಗರ ಘಟಕದ ಬಿಜೆಪಿ ಅಧ್ಯಕ್ಷೃ ವೀರಣ್ಣ ಗಿಡ್ಡಪ್ಪಗೋಳ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

    ಲಾಕ್‌ಡೌನ್ ಪರಿಣಾಮ ಅನೇಕ ಜನರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ 20 ಲಕ್ಷ ಕೋಟಿ ಪ್ಯಾಕೇಜ್ ಹಾಗೂ ಸಿಎಂ ಬಿ.ಎಸ್.ಯಡಿಯೂರಪ್ಪ 2 ಸಾವಿರ ಕೋಟಿ ಅಧಿಕ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಲೋಕಲ್ ಸೇ ಗ್ಲೂಬಲ್ ಕಲ್ಪನೆಯಲ್ಲಿ ದೇಶದಲ್ಲಿ ಸದೃಢ ಆರೋಗ್ಯ, ಆರ್ಥಿಕತೆ ನಿರ್ಮಿಸುವುದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಉದ್ದೇಶವಾಗಿದೆ.
    ಹನುಮಂತ ನಿರಾಣಿ ವಿ.ಪ ಸದಸ್ಯ





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts