More

    ದೇಶದಲ್ಲಿ ಕರೊನಾ 3ನೇ ಹಂತ

    ಬಾಗಲಕೋಟೆ: ದೇಶದಲ್ಲಿ ಕರೊನಾ ಮೂರನೇ ಹಂತಕ್ಕೆ ತಲುಪಿದೆ ಎನ್ನುವ ಆಘಾತಕಾರಿ ವಿಷಯವನ್ನು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರೇ ಹೊರಹಾಕಿದ್ದಾರೆ.

    ಬಾಗಲಕೋಟೆಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರೊನಾ ಮೂರನೇ ಹಂತದಲ್ಲಿದ್ದು, ರಾಜ್ಯದಲ್ಲಿ ಇದನ್ನು ತಡೆಯಲು ಲಾಕ್‌ಡೌನ್‌ಗೆ ಜನರು ಸಹಕರಿಸುತ್ತಿದ್ದಾರೆ. ಕಲಂ 144 ನಿಷೇಧಾಜ್ಞೆ ಹಾಕಿದ್ದರೂ ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ. ಆದರೆ, ಕೆಲವು ಕಿಡಿಗೇಡಿಗಳು ಎಷ್ಟು ಹೇಳಿದರೂ ಪಾಲಿಸುತ್ತಿಲ್ಲ. ಅಂಥವರ ಮೇಲೆ ಕಠಿಣ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ, ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇವೆ. ಅವರು, ಇವರು ಎನ್ನುವ ಪ್ರಶ್ನೆಯೇ ಇಲ್ಲ ಎಂದರು.

    ಸಾಮೂಹಿಕವಾಗಿ ಜನರು ಸೇರಬಾರದು ಎನ್ನುವ ಕಾಳಜಿಯನ್ನು ಎಲ್ಲರೂ ಪಾಲಿಸಬೇಕು. ಇದೊಂದು ಮಾನವ ಕುಲಕ್ಕೆ ಬಂದ ವಿಪತ್ತು. ಇದನ್ನು ನಾವು ಎಲ್ಲರ ಸಹಕಾರದಿಂದ ನಿಭಾಯಿಸಬೇಕಾಗುತ್ತದೆ. ನಮ್ಮದು 130 ಕೋಟಿ ಜನರು ಇರುವ ದೊಡ್ಡ ದೇಶ. ಸಮಾಜದಲ್ಲಿ ಕರೊನಾ ಪಿಡುಗು ಹಬ್ಬಿದರೆ ನಿಯಂತ್ರಿಸುವುದು ಕಷ್ಟ ಆಗುತ್ತದೆ. ಆ ಕಾರಣಕ್ಕಾಗಿಯೇ ಬಿಗಿಯಾದ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ, ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹಲವು ಬಾರಿ ಮನವಿ ಮಾಡಿದ್ದಾರೆ. ಆದೇಶ ಹೊರಡಿಸಿದ್ದಾರೆ. ಆದಾಗ್ಯೂ ಕೆಲವರು ಅಸಹಕಾರ ಮಾಡುತ್ತಿದ್ದಾರೆ. ಅಂಥವರ ವಿರುದ್ಧ ಕಠಿಣ ಕ್ರಮ ಅನಿವಾರ್ಯವಾಗುತ್ತದೆ ಎಂದು ಡಿಸಿಎಂ ಎಚ್ಚರಿಸಿದರು.

    ನಾವು ಈಗಾಗಲೇ ಸಾಮೂಹಿಕ ಪ್ರಾರ್ಥನೆ, ಸಾಮೂಹಿಕವಾಗಿ ದೇವಸ್ಥಾನಕ್ಕೆ ಹೋಗುವುದು, ಜಾತ್ರೆ, ಉತ್ಸವ ಮಾಡದಂತೆ ಹೇಳಿದ್ದರೂ ಅನೇಕರು ಗಲಾಟೆ ಮಾಡುತ್ತಿದ್ದಾರೆಂದು ಶುಕ್ರವಾರ ತಮ್ಮದೇ ಮುಧೋಳ ಕ್ಷೇತ್ರದಲ್ಲಿ ಸಾಮೂಹಿಕ ನಮಾಜ್ ತಡೆದು ಪೊಲೀಸರು ಲಾಠಿ ಬೀಸಿದ ಬಳಿಕ ರಾತ್ರಿ ಸಮುದಾಯದ ನೂರಾರು ಜನರು ಪ್ರತಿಭಟನೆ ನಡೆಸಿದ್ದ ಘಟನೆಯನ್ನು ಸೂಕ್ಷ್ಮವಾಗಿ ಉದಾಹರಿಸಿದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts