More

    ಯಡಿಯೂರಪ್ಪ ಬದಲಾವಣೆ ಸಾಧ್ಯವಿಲ್ಲ

    ಬಾಗಲಕೋಟೆ: ಪಂಚಮಸಾಲಿ, ವಾಲ್ಮೀಕಿ, ಕುರುಬ ಮೀಸಲಾತಿ ವಿಚಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗಮನಕ್ಕೆ ಇದೆ. ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡ್ತೀವಿ ಎಂದು ಹೇಳಿದ್ದಾರೆ. ನಮಗೂ (ಕುರುಬ) ಎಸ್.ಟಿ. ಮೀಸಲಾತಿ ಬೇಕು, ಸಿಎಂ ಗಮನಕ್ಕೆ ತಂದಿದ್ದೇವೆ. ಸಿಎಂ ಅನುಮತಿ ತೆಗೆದುಕೊಂಡೆ ಎಸ್.ಟಿ. ಹೋರಾಟದಲ್ಲಿ ಭಾಗಿಯಾಗಿದ್ದೇವೆ ಎಂದು ತೋಟಗಾರಿಕೆ ಸಚಿವ ಆರ್. ಶಂಕರ ಹೇಳಿದರು.

    ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಸರ್ಕಾರದ ಬಗ್ಗೆ ಕೆಲ ಶಾಸಕರ ಬಹಿರಂಗ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನನ್ನ ಬೇಡಿಕೆ ಬಗ್ಗೆ ನಾಲ್ಕು ಗೋಡೆ ಮಧ್ಯೆ ಕುಳಿತು ಚರ್ಚೆ ಮಾಡಿದ್ದೇನೆ. ಬಹಿರಂಗವಾಗಿ ಹೇಳಿಕೆ ನೀಡುವವರ ಬಗ್ಗೆ ಮಾತನಾಡುವ ಜಾಯಮಾನ ನನ್ನದಲ್ಲ. ನನ್ನ ಇಲಾಖೆಗೆ ಸಿಎಂ ಪುತ್ರ ವಿಜಯೇಂದ್ರ ಹಸ್ತಕ್ಷೇಪ ಮಾಡಿಲ್ಲ. ಉಳಿದ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿದ್ದಾರೆ ಎನ್ನುವುದು ಅಪಪ್ರಚಾರ ಎಂದರು.

    ಮಾಜಿ ಸಿಎಂ ಸಿದ್ದರಾಮಯ್ಯ ಕರ್ನಾಟಕದ ಟ್ರಂಪ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಶಂಕರ, ಸಮ್ಮಿಶ್ರ ಸರ್ಕಾರದಲ್ಲಿ ಅವರ ಪರವಾಗಿರೋದು ನನ್ನ ಧರ್ಮವಾಗಿತ್ತು. ಸ್ಥಿರ ಸರ್ಕಾರ ನಿರ್ಮಿಸಬೇಕಿತ್ತು. ಈಗ ಬೇರೆ ಪಕ್ಷದಲ್ಲಿದ್ದೇನೆ. ಸಿದ್ದರಾಮಯ್ಯ ಅವರ ಮೇಲೆ ಗೌರವ ಇದೆ. ಬೇರೆ ಪಕ್ಷದಲ್ಲಿದ್ದಾಗ ಪಕ್ಷಕ್ಕೆ ಗೌರವ ಕೊಡಬೇಕು. ಎಲ್ಲಿ ಹೇಗೆ ಇರಬೇಕು ಹಾಗೇ ಇದ್ದೇನೆ ಎಂದರು.

    ಸಿಎಂ ಬಿ.ಎಸ್. ಯಡಿಯೂರಪ್ಪ ಬದಲಾವಣೆ ಸಾಧ್ಯವಿಲ್ಲ. ಪ್ರಧಾನಮಂತ್ರಿಗೆ ಪತ್ರ ಬರೆದ ತಕ್ಷಣ ಬದಲಾಗುವುದಿಲ್ಲ. ಇವೆಲ್ಲ ಅವಮಾನ ಮೆಟ್ಟಿ ನಿಲ್ಲುವ ಸಾಮರ್ಥ್ಯ ಯಡಿಯೂರಪ್ಪ ಅವರಿಗೆ ಇದೆ. ಆದ್ದರಿಂದ ಹೈಕಮಾಂಡ್ ಬಿ.ಎಸ್. ನಾಯಕತ್ವ ಒಪ್ಪಿಕೊಂಡಿದೆ. 2023ರ ನಂತರವೂ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆ. 2023ರಲ್ಲಿ ಯಡಿಯೂರಪ್ಪ ಸಾರಥ್ಯದಲ್ಲಿ ಚುನಾವಣೆ ನಡೆಯುತ್ತದೆ. ಆ ವೇಳೆಯು ಬಿಜೆಪಿಯಲ್ಲಿ ಇರುತ್ತೇನೆ ಎಂದರು.

    ಎಚ್. ವಿಶ್ವನಾಥ್ ಸಚಿವ ಸ್ಥಾನ ಬಗ್ಗೆ ಕಾಲ, ಪಕ್ಷ ನಿರ್ಧಾರ ಮಾಡುತ್ತದೆ. ನಾನು ಸಿಎಂ ಹೇಳಿದಂತೆ ಚುನಾವಣೆ ಸ್ಪರ್ಧಿಸದೆ ಉಳಿದೆ. ತಡವಾದರೂ ಬಿಎಸ್‌ವೈ ಮಾತಿನಂತೆ ಕೊಡಬೇಕಾಗಿರುವುದನ್ನು ಕೊಟ್ಟಿದ್ದಾರೆ. ವಿಶ್ವನಾಥ ಅವರಿಗೆ ಸಚಿವ ಸ್ಥಾನ ಕೊಡಿ ಎಂದು ಮನವಿ ಮಾಡಿದ್ದೇವೆ ಎಂದರು.

    ತೋವಿವಿ ಅನುದಾನ ಬಗ್ಗೆ ಸಿಎಂ ಬಳಿ ಚರ್ಚೆ ಮಾಡಿದ್ದೇನೆ. ಕರೊನಾ ಕಾರಣದಿಂದ ಅಭಿವೃದ್ಧಿ ಕುಂಠಿತ ಆಗಿದೆ. ತೋಟಗಾರಿಕೆ ಇಲಾಖೆಗೆ ಬಜೆಟ್‌ನಲ್ಲಿ 1600 ಕೋಟಿ ರೂ. ನೀಡಬೇಕು ಎಂದು ಮನವಿ ಮಾಡಲಾಗಿದೆ. ರಾಜ್ಯದಲ್ಲಿ ಕೋವಿಡ್ ಕಡಿಮೆಯಾಗಿದೆ. ಹಂತ ಹಂತವಾಗಿ ಶಾಲೆ ಆರಂಭಿಸಲು ನಿರ್ಧರಿಸಲಾಗಿದೆ. ಜತೆಗೆ ವ್ಯಾಕ್ಸಿನ್ ಕೂಡ ಬಂದಿದೆ. ಹೀಗಾಗಿ ಯಾರು ಹೆದರುವ ಅಗತ್ಯವಿಲ್ಲ.
    ಆರ್. ಶಂಕರ ತೋಟಗಾರಿಕೆ ಸಚಿವ



    ಯಡಿಯೂರಪ್ಪ ಬದಲಾವಣೆ ಸಾಧ್ಯವಿಲ್ಲ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts