More

    ಬಿಜೆಪಿ ದಲಿತ ವಿರೋಧಿಯಲ್ಲ

    ಬಾಗಲಕೋಟೆ: ಬಿಜೆಪಿ ದಲಿತ, ಅಲ್ಪ ಸಂಖ್ಯಾತರ ವಿರೋಧಿಯಲ್ಲ. ದೇಶ ವಿರೋಧಿಸುವವರನ್ನು, ಭಯೋತ್ಪಾದನೆ ಮಾಡುವವರನ್ನು ಬಿಜೆಪಿ ವಿರೋಧ ಮಾಡುತ್ತದೆ ಎಂದು ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಹೇಳಿದರು.

    ಬಹಳ ಶ್ರಮಪಟ್ಟರು ಬಿಜೆಪಿಗೆ ದಲಿತರು ಬರುತ್ತಿರಲಿಲ್ಲ. 70 ವರ್ಷ ಕಾಂಗ್ರೆಸ್, ಜೆಡಿಎಸ್ ದಲಿತರಿಗೆ ಸುಳ್ಳು ಹೇಳಿತು. ಬಿಜೆಪಿ ಕೋಮುವಾದಿ, ದಲಿತ, ಸಂವಿಧಾನ, ಮೀಸಲಾತಿ ವಿರೋಧಿ ಅಂತ ದಿಕ್ಕು ತಪ್ಪಿಸುತ್ತಿತ್ತು. ಇದೀಗ ದಲಿತರಿಗೆ ಯಾವ ಪಕ್ಷ ಸರಿ, ಯಾವ ಪಕ್ಷ ತಪ್ಪು ಅಂತ ಅರ್ಥವಾಗಿದೆ. ಹೀಗಾಗಿ ಬಿಜೆಪಿ ಕಡೆ ದಲಿತರು ಸಾಗರೋಪಾದಿಯಲ್ಲಿ ಬರುತ್ತಿದ್ದಾರೆ. ಕಾಂಗ್ರೆಸ್‌ಗೆ ವಿರೋಧ ಪಕ್ಷ ಸ್ಥಾನ ಕೂಡ ಸಿಗುತ್ತಿಲ್ಲ. ಮುಂದಿನ ದಿನಗಳಲ್ಲಿ ಬಾಗಿಲು ಬಂದ್ ಮಾಡಲಿವೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ದಲಿತರು ಬೆಂಬಲ ನೀಡದೆ ಹೋದರೆ ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 25 ಸ್ಥಾನ ಗೆಲ್ಲುಲು ಸಾಧ್ಯವಾಗುತ್ತಿರಲಿಲ್ಲ. ಈಚೆಗೆ ನಡೆದ ಶಿರಾ ಉಪ ಚುನಾವಣೆ ಇದಕ್ಕೆ ಸಾಕ್ಷಿ. ಶಿರಾದಲ್ಲಿ 70 ಸಾವಿರ ದಲಿತ ಮತಗಳಿವೆ. ಕಳೆದ ಸಾರಿ ನಮ್ಮ ಅಭ್ಯರ್ಥಿ ಠೇವಣಿ ಜಪ್ತಿಯಾಗಿತ್ತು. ಈ ಸಾರಿ ಅಧಿಕ ಮತಗಳಿಂದ ಗೆಲುವು ಸಾಧಿಸಲು ಸಾಧ್ಯವಾಯಿತು. ಬಿಜೆಪಿ ಬಗ್ಗೆ ವಿರೋಧ ಪಕ್ಷಗಳು ಎಷ್ಟೇ ಅಪಪ್ರಚಾರ ಮಾಡಿದರು ಸಹ ದಲಿತರಿಗೆ ಬಿಜೆಪಿ ಮೇಲಿನ ವಿಶ್ವಾಸ, ನಂಬಕೆ ವೃದ್ಧಿಯಾಗುತ್ತಲಿದೆ. ಬಿಜೆಪಿ ವೋಟ್ ಬ್ಯಾಂಕ್ ರಾಜಕಾರಣ ಮಾಡುವುದಿಲ್ಲ. ಬಿಜೆಪಿ ವ್ಯಕ್ತಿತ್ವ ನಿರ್ಮಾಣ ಮಾಡುವ ಗುರಿ ಹೊಂದಿದೆ. ಆದರೆ, ಸುಳ್ಳು ಹೇಳಿ ದಲಿತರ ಮತ ಪಡೆಯುವ ಕೆಲಸ ಮಾಡುವುದಿಲ್ಲ. ಕಾಂಗ್ರೆಸ್ ಅವನತಿಯತ್ತ ಸಾಗುತ್ತಿದ್ದು, ಇದೊಂದು ತ್ಯಾಪೆ ಪಕ್ಷವಾಗಿದೆ ಎಂದು ಲೇವಡಿ ಮಾಡಿದರು.

    ಕಾಂಗ್ರೆಸ್‌ನಲ್ಲಿ ದಲಿತರಿಗೆ ಸ್ಥಾನ ಮಾನ ನೀಡುವುದಿಲ್ಲ. ಡಾ.ಜಿ.ಪರಮೇಶ್ವರ ಅವರಿಗೆ ಮುಖ್ಯಮಂತ್ರಿ ಪಟ್ಟ ತಪ್ಪಿಸಿದ್ದೆ ಇದಕ್ಕೆ ನೈಜ ಉದಾಹರಣೆ. ಚುನಾವಣೆ ಮುನ್ನ ದಲಿತರನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂದು ಪ್ರಚಾರ ಮಾಡಿತು. ಪರಮೇಶ್ವರ ಮುಖ್ಯಮಂತ್ರಿ ಯಾಗುತ್ತಾರೆ ಅಂತ ಚುನಾವಣೆಯಲ್ಲಿ ಕತ್ತು ಹಿಸುಕಿ ಸೋಲಿಸುವ ಮೂಲಕ ಆರು ವರ್ಷದಲ್ಲಿ ಬೇರೆ ಪಕ್ಷದಿಂದ ಬಂದ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಿದರು. ಇನ್ನು ಕಣ್ಣೀರು ಹಾಕಿ ಉಪಮುಖ್ಯಮಂತ್ರಿ ಸ್ಥಾನವನ್ನು ಪಡೆದರು. ಆದರೆ, ಯಾವುದೇ ಬೇಡಿಕೆ ಇಲ್ಲದೆ ಬಿಜೆಪಿ ಗೋವಿಂದ ಕಾರಜೋಳ ಅವರನ್ನು ಉಪ ಮುಖ್ಯಮಂತ್ರಿ ಮಾಡಿತು. ತನ್ಮೂಲಕ ದಲಿತರಿಗೆ ಸ್ಥಾನಮಾನ ನೀಡಿತು. ಅವಕಾಶ ಸಿಕ್ಕರೆ ದಲಿತರಿಗೆ ಸಿಎಂ ಪಟ್ಟ ಕೂಡ ಬಿಜೆಪಿ ನೀಡುತ್ತದೆ ಎಂದರು.

    ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ಮಲ್ಲಯ್ಯ ಮೂಗನೂರ, ನಗರಸಭೆ ಉಪಾಧ್ಯಕ್ಷ ಬಸವರಾಜ ಅವರಾದಿ, ಬಿಟಿಡಿಎ ಸದಸ್ಯ ಶಿವಾನಂದ ಟವಳಿ, ಮುಖಂಡರಾದ ದಿನೇಶ ದಿನಕರಬಾಬು, ಈಶಪ್ಪ ಹಿರೇಮನಿ, ಯಲ್ಲಪ್ಪ ನಾರಾಯಣಿ ಸುದ್ದಿಗೋಷ್ಠಿಯಲ್ಲಿ ಇದ್ದರು.

    ನ.26ರಂದು ರಾಜ್ಯದ 310 ಮಂಡಲಗಳಲ್ಲಿ ಎಸ್‌ಸಿ ಮೋರ್ಚಾದಿಂದ ಸಂವಿಧಾನ ದಿನಾಚರಣೆ ಹಮ್ಮಿಕೊಳ್ಳಲಾಗುವುದು. ಬಿಜೆಪಿ ಕಾರ್ಯಕರ್ತರು, ಮುಖಂಡರು, ಎಸ್‌ಸಿ ಮೋರ್ಚಾ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ದಿನಾಚರಣೆ ನಡೆಯಲಿದೆ.
    ಛಲವಾದಿ ನಾರಾಯಣಸ್ವಾಮಿ ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯಾಧ್ಯಕ್ಷ





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts