More

    ಸರ್ವ ಕ್ಷೇತ್ರಗಳಲ್ಲಿ ಮಹಿಳೆ ಸಶಕ್ತಳು

    ಬಾಗಲಕೋಟೆ: ಪುರುಷ ಪ್ರಧಾನವಾದ ಸಮಾಜದಲ್ಲಿ ಇಂದು ಹೆಣ್ಣು ಸರ್ವ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಸಶಕ್ತಳು ಎನ್ನುವುದು ಸಾಬೀತಾಗಿದೆ. ಸಂಸಾರ ತೋಗಿಸುವಲ್ಲಿ ಮಹಿಳೆಯರ ಶ್ರಮ, ತ್ಯಾಗ ಅವಿಸ್ಮರಣೀಯ ಎಂದು ಜಿ.ಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಬಣ್ಣಿಸಿದರು.

    ನವನಗರದ ಜಿಲ್ಲಾ ಪಂಚಾಯಿತಿ ನೂತನ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಮಹಿಳೆ ಪುರುಷರಷ್ಟೇ ಸಮಾನಳು. ಇಂದು ಖಾಸಗಿ, ಸರ್ಕಾರಿ ಕ್ಷೇತ್ರದಲ್ಲಿ ಪ್ರಮುಖ ಹುದ್ದೆ ಅಲಂಕರಿಸಿ ತನ್ನ ಸಾಮರ್ಥ ದೃಢಪಡಿಸಿದ್ದಾಳೆ. ಎಷ್ಟೇ ಕಷ್ಟ ಬಂದರೂ ಎದುರಿಸುವ ಶಕ್ತಿ ಮಹಿಳೆಯರಲ್ಲಿದ್ದು, ಇಂದು ಮಹಿಳೆ ಕೇವಲ ಅಡಿಗೆ ಮನೆಗೆ ಸೀಮಿತವಾಗಿರದೇ ವಿವಿಧ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸುತ್ತಿದ್ದಾರೆ. ಮಹಿಳೆಯರು ತಾವು ಬೆಳೆಯುವ ಮೂಲಕ ಇತರರಿಗೆ ಸ್ಪೂರ್ತಿಯಾಗುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಸರ್ಕಾರ ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸಿದೆ. ಅನೇಕ ಯೋಜನೆ ರೂಪಿಸಿದ್ದು, ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

    ತಾ.ಪಂ ಅಧ್ಯಕ್ಷ ಚನ್ನನಗೌಡರ ಪರನಗೌಡರ ಮಾತನಾಡಿ, ಮಹಿಳೆ ಅಸಾಯಕಿ ಅಲ್ಲ, ಸಬಲೆಯಾಗಿದ್ದು, ಅವರಿಗೆ ನೀಡಿರುವ ಸಮಾನತೆ, ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಸುಧಾಮೂರ್ತಿ, ಸಾಲುಮರದ ತಿಮ್ಮಕ್ಕ ಹಾಗೂ ಗಂಗೂಬಾಯಿ ಹಾನಗಲ್ಲ ರಂತಹ ಮಹಿಳೆಯರು ಸಮಾಜಕ್ಕೆ ತಮ್ಮದೇಯಾದ ಕೊಡುಗೆ ನೀಡಿದ್ದಾರೆ. ಶಿಕ್ಷಣ ಮತ್ತು ಪ್ರೋತ್ಸಾಹ ದೊರೆತಲ್ಲಿ ಹೆಚ್ಚಿನ ಸಾಧನೆಗೆ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

    ಬುಡಾ ಅಧ್ಯಕ್ಷ ಬಸಲಿಂಗಪ್ಪ ನಾವಲಗಿ ಮಾತನಾಡಿ, ಅಮೆರಿಕೆ, ಇಂಗ್ಲೆಂಡ್ ಸರ್ಕಾರದಲ್ಲಿ ಭಾರತೀಯ ಮೂಲದ ಹೆಣ್ಣು ಮಕ್ಕಳು ಉನ್ನತ ಹುದ್ದೆ ಅಲಂಕರಿಸಿದ್ದಾರೆ. ವಿದೇಶಗಳಲ್ಲಿ ನಮ್ಮ ದೇಶದ 25 ಸಾವಿರ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

    ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿ.ಭೂಬಾಲನ ಮಾತನಾಡಿ, ವರ್ಷದಲ್ಲಿ ಒಂದು ಮಹಿಳಾ ದಿನಾಚರಣೆ ಆಚರಿಸುವದರ ಬದಲು ವರ್ಷವೀಡಿ ಆಚರಿಸುವಂತಾಗಬೇಕು. ನನ್ನ ತಾಯಿ, ಸಹೋದರಿಯ ಸ್ಪೂರ್ತಿಯಿಂದ ಈ ಹುದ್ದೆ ಅಲಂಕರಿಸುವಂತಾಯಿತು. ಗಾಂಧೀಜಿಯವರ ಕನಸಿನಂತೆ ಮಹಿಳೆ ಎಲ್ಲ ರೀತಿಯ ಸ್ಥಾನ ಮಾನ ಹಾಗೂ ಸಹಕಾರ ದೊರೆತಲ್ಲಿ ಉತ್ತಮ ಬೆಳವಣಿಗೆ ಹೊಂದಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

    ಪ್ರಾರಂಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧ್ದಿ ಇಲಾಖೆಯ ಉಪ ನಿರ್ದೇಶಕ ಎ.ಕೆ.ಬಸಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿ.ಪಂ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಎನ್.ಹೇಮಾವತಿ, ರಾಷ್ಟ್ರ ಪ್ರಶಸ್ತಿ ವಿಜೇತೆ ಗೌರಮ್ಮ ಸಂಕಿನ, ಜಿ.ಪಂ ಸದಸ್ಯ ಶಶಿಕಲಾ ಯಡಹಳ್ಳಿ ಸೇರಿದಂತೆ ಜಿ.ಪಂ ಸದಸ್ಯರು ಉಪಸ್ಥಿತರಿದ್ದರು.

    ಮಹಿಳೆ ಸಹನೆಗೆ ಸ್ಪೂರ್ತಿ. ನಮ್ಮ ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾಳೆ. ಮೀಸಲಾತಿಯಲ್ಲಿ ಸಮಾನ ಅವಕಾಶ ಪಡೆದುಕೊಂಡು ಆರ್ಥಿಕ, ಸಾಮಾಜಿಕ ಹಾಗೂ ಉದ್ಯಮ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿದ್ದಾಳೆ.
    – ಕೆ.ರಾಜೇಂದ್ರ ಜಿಲ್ಲಾಧಿಕಾರಿ

    ಸಾಂಸ್ಕೃತಿಕ ಕಾರ್ಯಕ್ರಮ
    ಕಾರ್ಯಕ್ರಮದಲ್ಲಿ ಜಾನಪದ, ಡೊಳ್ಳಿನ ಪದ, ಲಂಬಾಣಿ, ನೃತೃಗಳು ಜರುಗಿದವು. ಜಿ.ಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಲಂಬಾಣಿ ವೇಷ ಧರಿಸಿ ನೃತ್ಯ ಮಾಡಿದ್ದು ಗಮನ ಸಳೆಯಿತು. ಜಿ.ಪಂ ಮಹಿಳಾ ಸದಸ್ಯರು, ಅಧಿಕಾರಿಗಳು ಹೆಜ್ಜೆ ಹಾಕಿ ಕಾರ್ಯಕ್ರಮಕ್ಕೆ ಮೆರಗು ತಂದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts