More

    ಅಧ್ಯಕ್ಷರಾಗಿ ಪ್ರಕಾಶ ತಪಶೆಟ್ಟಿ ಆಯ್ಕೆ

    ಬಾಗಲಕೋಟೆ: ನಗರದ ಪ್ರತಿಷ್ಠಿತ ಬಸವೇಶ್ವರ ಸಹಕಾರಿ ಬ್ಯಾಂಕ್‌ಗೆ 2020-2025ನೇ ಸಾಲಿನ ಅಧ್ಯಕ್ಷರಾಗಿ ಪ್ರಕಾಶ ಈ.ತಪಶೆಟ್ಟಿ, ಉಪಾಧ್ಯಕ್ಷರಾಗಿ ಎಂ.ಜಿ. ವಾಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

    ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ತಲಾ ಒಂದು ನಾಮಪತ್ರ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ, ಬಾಗಲಕೋಟೆ ಎಸಿ ಎಂ. ಗಂಗಪ್ಪ ಶುಕ್ರವಾರ ಘೋಷಿಸಿದರು. ಆಯ್ಕೆ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಶುಭಾಶಯಗಳ ಸುರಿಮಳೆ ಹರಿದು ಬಂದಿತು.

    ಬ್ಯಾಂಕ್ ನಿರ್ದೇಶಕ ವಿ.ವಿ. ಕಲಬುರ್ಗಿ, ಆರ್.ವೈ. ಪಟ್ಟಣದ, ವಿ.ವಿ. ಶಿರಗಣ್ಣವರ, ಎಸ್.ಎಸ್. ಜಿಗಳೂರ, ಎನ್.ಎ್. ಪಲ್ಲೇದ, ಎಸ್.ಸಿ. ಆರಬ್ಬಿ, ಸಿ.ಟಿ. ಪಾಟೀಲ, ಎಸ್.ಎಸ್. ಕಂಕಣಮೇಲಿ, ಎಸ್.ಎಸ್. ಗೋಡಿ, ಬಿ.ಎಂ. ಈಟಿ, ಎಸ್.ಟಿ. ಬಳ್ಳಾರಿ, ಎಚ್.ಎಸ್. ರಾಠೋಡ, ಎಸ್.ಬಿ. ಜಂಗಿ, ಜಯಮ್ಮ ಎಸ್.ಅಬ್ದುಲಪುರ, ಉಷಾ ಎಸ್. ಜಿಗಜಿನ್ನಿ ಹಾಗೂ ಮಾಜಿ ನಿರ್ದೇಶಕ ಮನೋಹರ ಏಳೆಮ್ಮಿ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಅವರಿಗೆ ಹೂ ಮಾಲೆ ಹಾಕಿ ಶುಭಾಶಯ ಕೋರಿದರು.

    ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಎಂ.ಎಚ್. ಕಳ್ಳಿಗುಡ್ಡ, ಸಲಹೆಗಾರರಾದ ಬಿ.ಎಸ್. ನಾವಲಗಿ, ಎಸ್.ಬಿ. ಬದಾಮಿ, ಪಿ.ಎನ್. ಹಳ್ಳಿಕೇರಿ, ಪ್ರಧಾನ ಕಚೇರಿ ವ್ಯವಸ್ಥಾಪಕ ಎಂ.ಬಿ. ಮೋಟಗಿ ಅಧಿಕಾರಿಗಳಾದ ಎಂ.ಎಸ್. ಗುಡಗುಂಟಿ, ಎಸ್.ವಿ. ಹುಬ್ಬಳ್ಳಿ, ವಿ.ಎಂ.ಹಿರೇಮಠ, ಎಸ್.ಎ. ಮೇಟಿ ಹಾಗೂ ಸಿಬ್ಬಂದಿ ಇತರರು ಇದ್ದರು.

    ನೂತನ ದಾಖಲೆ ನಿರ್ಮಾಣ
    ಪ್ರಕಾಶ ತಪಶೆಟ್ಟಿ ಅವರು 1984ರಲ್ಲಿ ಮೊದಲ ಬಾರಿಗೆ ಬ್ಯಾಂಕ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಅಂದಿನಿಂದ ನಿರಂತರವಾಗಿ 36 ವರ್ಷಗಳ ಅಧ್ಯಕ್ಷರಾಗಿ ಆಯ್ಕೆಯಾಗುತ್ತ ಬಂದಿದ್ದಾರೆ. ಇದೀಗ 8ನೇ ಅವಧಿಗೆ ಪ್ರಕಾಶ ತಪಶೆಟ್ಟಿ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಹೊಸ ದಾಖಲೆ ನಿರ್ಮಿಸಿದರು. 1984ರಲ್ಲಿ ಒಂದೇ ಶಾಖೆಗೆ ಸೀಮಿತವಾಗಿದ್ದ ಬಸವೇಶ್ವರ ಸಹಕಾರಿ ಬ್ಯಾಂಕ್ ಪ್ರಕಾಶ ತಪಶೆಟ್ಟಿ ಅಧ್ಯಕ್ಷರಾದ ಬಳಿಕ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. 15 ಜಿಲ್ಲೆಗಳಲ್ಲಿ ತನ್ನ ಕಾರ್ಯಕ್ಷೇತ್ರ ವಿಸ್ತರಣೆ ಮಾಡಿಕೊಳ್ಳುವುದರೊಂದಿಗೆ 5 ಜಿಲ್ಲೆಗಳಲ್ಲಿ 27 ಶಾಖೆಗಳು ಸದ್ಯ ಕಾರ್ಯ ನಿರ್ವಹಿಸುತ್ತಿವೆ. ಕಾಲಾ ಕಾಲಕ್ಕೆ ಬ್ಯಾಂಕ್ ಸೇವೆ, ಆಡಳಿತಕ್ಕೆ ಹೊಸ ಸ್ಪರ್ಶ ನೀಡುತ್ತ ಬಂದಿದ್ದಾರೆ. ನೂತನ ಭವ್ಯವಾದ ಪ್ರಧಾನ ಕಚೇರಿ, ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವ ಬ್ಯಾಂಕ್‌ನ ಶತಮಾನೋತ್ಸವ ಇವೆಲ್ಲವೂ ಪ್ರಕಾಶ ತಪಶೆಟ್ಟಿಯವರ ಸಾಧನೆಗೆ ಹಿಡಿದ ಕೈಗನ್ನಡಿಯಾಗಿವೆ. ಹತ್ತು ಹಲವು ಪ್ರಶಸ್ತಿ ಹಾಗೂ ಗೌರವಕ್ಕೆ ಭಾಜನವಾಗಿರುವ ಬಸವೇಶ್ವರ ಸಹಕಾರಿ ಬ್ಯಾಂಕ್‌ನ್ನು ರಾಜ್ಯದ ಪ್ರತಿಷ್ಠಿತ ಸಹಕಾರಿ ಬ್ಯಾಂಕ್‌ನ್ನಾಗಿ ಮಾಡುವಲ್ಲಿ ಪ್ರಕಾಶ ತಪಶೆಟ್ಟಿ ಅವರ ಪಾತ್ರ ಅವಿಸ್ಮರಣೀಯ.

    ಬ್ಯಾಂಕ್ ಗೌರವಾನ್ವಿತ ಸದಸ್ಯರು, ಗ್ರಾಹಕರು, ವ್ಯಾಪಾರಸ್ಥರು, ಅಭಿಮಾನಿಗಳು, ನನ್ನ ಹಾಗೂ ನಮ್ಮ ತಂಡದ ಮೇಲೆ ಅಪಾರ ಪ್ರೀತಿ-ವಿಶ್ವಾಸ ಇಟ್ಟು ಬೆಂಬಲಿಸಿದ್ದಾರೆ. ನಿರಂತರವಾಗಿ 8ನೇ ಬಾರಿಗೆ ಆಯ್ಕೆ ಮಾಡಿ ಸೇವೆ ಸಲ್ಲಿಸಲು ಅವಕಾಶ ಮಾಡಿ ಕೊಟ್ಟಿದ್ದಕ್ಕಾಗಿ ಧನ್ಯವಾದ ಸಲ್ಲಿಸುತ್ತೇನೆ. ಶಾಖೆಗಳ ವಿಸ್ತರಣೆ, ಬ್ಯಾಂಕ್ ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ಮತ್ತಷ್ಟು ಶಕ್ತಿ ಬಂದಿದೆ.
    ಪ್ರಕಾಶ ಈ. ತಪಶೆಟ್ಟಿ ಬಸವೇಶ್ವರ ಸಹಕಾರಿ ಬ್ಯಾಂಕ್ ಅಧ್ಯಕ್ಷ

    ಬಸವೇಶ್ವರ ಸಹಕಾರಿ ಬ್ಯಾಂಕ್ ಉತ್ತರ ಕರ್ನಾಟಕ ಭಾಗದಲ್ಲಿ ಬಡವರು, ಸಾಮಾನ್ಯ ಜನರ ಆರ್ಥಿಕ ಬೆಳವಣಿಗೆಗೆ ಶ್ರಮಿಸುತ್ತಿದೆ. ರಾಷ್ಟ್ರೀಯ ಬ್ಯಾಂಕ್‌ಗಳಿಗೆ ಪೈಪೋಟಿ ನೀಡುತ್ತಿದೆ. ಪ್ರಕಾಶ ತಪಶೆಟ್ಟಿ ಅವರು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಕಳೆದ 3 ದಶಕಗಳಲ್ಲಿ ಬ್ಯಾಂಕ್ ಗಣನೀಯ ಸಾಧನೆ ಮಾಡಿದೆ.
    ಮಹಾಬಳೇಶ್ವರ ಗುಡಗುಂಟಿ ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕ





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts