More

    ಮತ್ತೆ 3 ಹೊಸ ಪ್ರಕರಣ ಪತ್ತೆ

    ಬಾಗಲಕೋಟೆ: ಜಿಲ್ಲೆಯ ಬಾದಾಮಿ ತಾಲೂಕಿನ ಢಾಣಕಶಿರೂರ ಗ್ರಾಮದಲ್ಲಿ ಮತ್ತೆ ಮೂವರಿಗೆ ಕೋವಿಡ್ ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿತ ಸಂಖ್ಯೆ 51ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಕೆ.ರಾಜೇಂದ್ರ ತಿಳಿಸಿದ್ದಾರೆ.

    ಢಾಣಕಶಿರೂರ ಗ್ರಾಮದ 55 ವರ್ಷದ ಮಹಿಳೆ ಪಿ-702, 80 ವರ್ಷದ ವೃದ್ಧೆ 703 ಹಾಗೂ 19 ವರ್ಷದ ಮಹಿಳೆ ಪಿ-704 ಇವರಿಗೆ ಸೋಂಕು ದೃಢಪಟ್ಟಿದ್ದು, ಈ ಮೂವರು ಪಿ-607 ಸೋಂಕಿತ ವ್ಯಕ್ತಿಯ ಸಂಪರ್ಕ ಹೊಂದಿದ್ದರು. ಜಿಲ್ಲೆಯಿಂದ ಕಳುಹಿಸಲಾಗಿದ್ದ ಒಟ್ಟು 189 ಸ್ಯಾಂಪಲ್‌ಗಳ ಪೈಕಿ 176 ಸ್ಯಾಂಪಲ್‌ಗಳ ವರದಿ ನೆಗೆಟಿವ್, 3 ಪಾಸಿಟಿವ್ ಬಂದಿದ್ದು, ಸೋಂಕಿತರನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು 10 ಸ್ಯಾಂಪಲ್‌ಗಳ ವರದಿ ಬರಬೇಕಾಗಿದೆ. ಮತ್ತೆ 266 ಸ್ಯಾಂಪಲ್‌ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.

    ಜಿಲ್ಲಾ ಆಸ್ಪತ್ರೆಯಿಂದ 17, ಕುಮಾರೇಶ್ವರ ಆಸ್ಪತ್ರೆಯಿಂದ 1, ಬಾದಾಮಿಯಿಂದ 55, ಮುಧೋಳದಿಂದ 111, ಜಮಖಂಡಿಯಿಂದ 70, ಹುನಗುಂದದಿಂದ 8 ಹಾಗೂ ಇಳಕಲ್ಲನಿಂದ 4 ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಲಾಗಿದೆ. ಬಾಕಿ ಉಳಿದ 13 ಸ್ಯಾಂಪಲ್ ಹಾಗೂ ಹೊಸದಾಗಿ 222 ಸ್ಯಾಂಪಲ್ ಸೇರಿ ಒಟ್ಟು 276 ವರದಿ ಬರಬೇಕಾಗಿದೆ. ಜಿಲ್ಲೆಯಿಂದ ಇಲ್ಲಿವರೆಗೆ ಒಟ್ಟು 4021 ಸ್ಯಾಂಪಲ್‌ಗಳನ್ನು ಕಳುಹಿಸಲಾಗಿದ್ದು, ಈ ಪೈಕಿ 3689 ನೆಗೆಟಿವ್ ಪ್ರಕರಣ, 51 ಪಾಸಿಟಿವ್ ಪ್ರಕರಣ, 1 ಮೃತ ಪ್ರಕರಣ ವರದಿಯಾಗಿವೆ. 6 ಸ್ಯಾಂಪಲ್‌ಗಳು ರಿಜೆಕ್ಟ್ ಆಗಿವೆ. ಪ್ರತ್ಯೇಕವಾಗಿ ಮನೆಯಲ್ಲಿ ನಿಗಾದಲ್ಲಿ ಇರುವವರು ಒಟ್ಟು 1858 ಇದ್ದಾರೆ. ಇಲ್ಲಿವರೆಗೆ ಒಟ್ಟು 18 ಜನ ಕೋವಿಡ್‌ನಿಂದ ಗುಣಮುಖರಾಗಿದ್ದಾರೆ. 198 ವ್ಯಕ್ತಿಗಳು 28 ದಿನಗಳ ಹೋಮ್ ಕ್ವಾರಂಟೈನ್‌ನಿಂದ ಬಿಡುಗಡೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts