More

    ಬಾದಾಮಿಗೂ ಬಂತು ಕೋವಿಡ್ ಲಸಿಕೆ

    ಬಾದಾಮಿ: ಜಿಲ್ಲಾಡಳಿತ ಭವನದಿಂದ ಶುಕ್ರವಾರ ಮಧ್ಯಾಹ್ನ ಪಟ್ಟಣಕ್ಕೆ ಆಗಮಿಸಿದ ಕೋವಿಡ್ ಲಸಿಕೆ ವಾಹನಕ್ಕೆ ತಾಲೂಕು ಆಡಳಿತದ ವತಿಯಿಂದ ಅದ್ಧೂರಿ ಸ್ವಾಗತ ಕೋರಲಾಯಿತು.

    ಸಂಗೀತ ವಾದ್ಯಗಳೊಂದಿಗೆ ಬಸ್ ನಿಲ್ದಾಣದಿಂದ ಮೆರವಣಿಗೆ ಮೂಲಕ ವಾಹನವನ್ನು ತಾಲೂಕು ಆಸ್ಪತ್ರೆಗೆ ಕರೆ ತರಲಾಯಿತು. ವಿವಿಧ ಅಲಂಕಾರಿ ವಸ್ತುಗಳಿಂದ ಶೃಂಗರಿಸಲಾಗಿದ್ದ ತಾಲೂಕು ಆಸ್ಪತ್ರೆಯ ಲಸಿಕೆ ಕೊಠಡಿಗೆ ಲಸಿಕೆಯನ್ನು ಆರತಿ ಬೆಳಗಿ ಸ್ವಾಗತಿಸಲಾಯಿತು.

    ತಹಸೀಲ್ದಾರ್ ಸುಹಾಸ ಇಂಗಳೆ, ತಾಲೂಕು ವೈದ್ಯಾಧಿಕಾರಿ ಡಾ.ಎಂ.ಬಿ.ಪಾಟೀಲ, ತಾಲೂಕು ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಬಿ.ಎಚ್. ರೇವಣಸಿದ್ದಪ್ಪ, ಬಿಇಒ ರುದ್ರಪ್ಪ ಹುರಳಿ, ಶಿಶು ಅಭಿವೃದ್ಧಿ ಅಧಿಕಾರಿ ಅನ್ನಪೂರ್ಣ ಕುಬಕಡ್ಡಿ, ಎಲುಬು ಕೀಲು ತಜ್ಞ ಡಾ.ವೀರಣ್ಣ ಶೆಟ್ಟರ, ಹಿರಿಯ ಆರೋಗ್ಯ ನಿರೀಕ್ಷಕ ಪಿ.ಎಚ್. ಮಹಾಲಿಂಗಪುರ, ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಾಜರಿದ್ದರು.

    ಮೊದಲ ಹಂತದಲ್ಲಿ 100 ಜನಕ್ಕೆ ಲಸಿಕೆ
    ತಾಲೂಕಿನಲ್ಲಿ ಮೊದಲ ಹಂತದಲ್ಲಿ 100 ಜನರಿಗೆ ಲಸಿಕೆ ಹಾಕಲಾಗುತ್ತಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ಬಿ.ಪಾಟೀಲ ತಿಳಿಸಿದರು. ಈ ಕುರಿತು ಮಾಹಿತಿ ನೀಡಿದ ಅವರು, ವೈದ್ಯರು, ಲ್ಯಾಬ್ ಟೆಕ್ನಿಷಿಯನ್, ಅಂಗನವಾಡಿ ಕಾರ್ಯಕರ್ತೆಯರು, ಡಿ ದರ್ಜೆ ನೌಕರರಿಗೆ ಸೇರಿ 100 ಜನರಿಗೆ ಜ.16 ರಂದು ಶನಿವಾರ ಬೆಳಗ್ಗೆ 11.30 ಗಂಟೆಯ ನಂತರ ಲಸಿಕೆ ಹಾಕಲಾಗುವುದು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts