More

    ತರಬೇತಿ ಹಾಜರಿಗೆ ವಿನಾಯಿತಿ ನೀಡಿ

    ಬಾದಾಮಿ: ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ವಿದ್ಯಾಗಮ ಯೋಜನೆ ಹೊರತುಪಡಿಸಿ ಉಳಿದ ಎಲ್ಲ ತರಬೇತಿಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿ ಶಿಕ್ಷಕರು ತರಬೇತಿಗಳಿಗೆ ಹಾಜರಾಗದಿರಲು ವಿನಾಯಿತಿ ನೀಡಬೇಕು ಎಂದು ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದವರು ದೈಹಿಕ ಶಿಕ್ಷಣ ಪರಿವೀಕ್ಷಕ ವಿ.ಎಸ್. ಮೇಟಿ ಅವರಿಗೆ ಮನವಿ ಸಲ್ಲಿಸಿದರು.

    ಪಟ್ಟಣದ ದೈಹಿಕ ಶಿಕ್ಷಣ ಪರಿವೀಕ್ಷಕರ ಕಚೇರಿ ಮುಂಭಾಗ ಸಂಘದ ಅಧ್ಯಕ್ಷ ವೈ.ಎಸ್. ಮಜ್ಜಗಿ ಮಾತನಾಡಿ, ಈಗಾಗಲೇ ಜಿಲ್ಲೆಯಲ್ಲಿ ವ್ಯಾಪಕವಾಗಿ ಹಬ್ಬುತ್ತಿರುವ ಕೋವಿಡ್-19 ಸೋಂಕಿಗೆ ಐದಾರು ಶಿಕ್ಷಕರು ಬಲಿಯಾಗಿದ್ದಾರೆ. ಆದರೆ ಶಿಕ್ಷಕರಿಗೆ ತರಬೇತಿಗಳಲ್ಲಿ ಪಾಲ್ಗೊಳ್ಳಲು ಸೂಚಿಸುತ್ತಿರುವುದರಿಂದ ಕರೋನಾ ಭಯದಿಂದ ಪಾಲ್ಗೊಳ್ಳಲು ಕಷ್ಟ ಸಾಧ್ಯವಾಗುತ್ತಿದೆ. ಎಷ್ಟೆಲ್ಲ ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡರೂ ಒಂದಲ್ಲ ಒಂದು ರೀತಿಯಲ್ಲಿ ಕರೊನಾ ಸೋಂಕು ತಗುಲುತ್ತಿರುವುದರಿಂದ ಶಿಕ್ಷಕರಲ್ಲಿ ಆತಂಕ ಮೂಡಿಸಿದೆ ಎಂದು ಹೇಳಿದರು.

    ಸದ್ಯದ ನಲಿಕಲಿ ತರಬೇತಿಯಲ್ಲಿ ಒಂದು ಶಾಲೆಯಲ್ಲಿರುವ ಎಲ್ಲ ನಲಿಕಲಿ ಶಿಕ್ಷಕರು ಪಾಲ್ಗೊಳ್ಳುವುದರಿಂದ ವಿದ್ಯಾಗಮ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ತೀವ್ರ ತೊಂದರೆಯಾಗುತ್ತಿದೆ. ಅಲ್ಲದೆ ಕೆಲವು ಶಿಕ್ಷಕರಿಗೆ ಸೋಂಕು ತಗುಲಿದ್ದ ವೇಳೆ ರೋಗ ನಿರೋಧಕ ಶಕ್ತಿಯಿಂದ ಗುಣಮುಖರಾದರೂ ಅವರ ಕುಟುಂಬದಲ್ಲಿನ ವೃದ್ಧರಿಗೆ ಸೋಂಕು ತಗುಲಿ ತೀವ್ರ ಕಷ್ಟವಾಗುವ ಸಾಧ್ಯತೆ ಇದೆ ಎಂದು ಹೇಳಿದರು.

    ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ತಹಸೀಲ್ದಾರ್ ಅವರಿಗೂ ಶಿಕ್ಷಕರ ಸಂಘದವರು ಮನವಿ ಸಲ್ಲಿಸಿದರು. ಸಂಘದ ಗೌರವಾಧ್ಯಕ್ಷ ಎಂ.ಎ. ಕೇಸರಿ, ಪ್ರಧಾನ ಕಾರ್ಯದರ್ಶಿ ಎಚ್.ಎಂ. ಯತ್ನಟ್ಟಿ, ಕೆ.ಎಂ. ಮುತ್ತಲಗೇರಿ, ಡಿ.ಡಿ. ಬಾಗಲಕೋಟ, ಬಿ.ವೈ. ರಜಪೂತ, ಎಸ್.ವಿ. ತೋಟಗೇರ, ಎಚ್.ಎಂ. ಹರದೊಳ್ಳಿ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts