More

    ಮತ್ತೆ ಲಾಕ್‌ಡೌನ್ ಮಾಡುವ ಪ್ರಸ್ತಾಪ ಇಲ್ಲ

    ಚಿಕ್ಕೋಡಿ: ರಾಜ್ಯದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದರೂ ಮತ್ತೆ ಲಾಕ್‌ಡೌನ್ ಮಾಡುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ. ಕರೊನಾ ಹೊಡೆದೋಡಿಸಲು ದೇಶದ ಜನರಿಗೆ ಭಗವಂತ ದೊಡ್ಡ ಶಕ್ತಿ ಕೊಟ್ಟಿದ್ದಾನೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

    ಚಿಕ್ಕೋಡಿ ಪಟ್ಟಣದ ಮರಡಿ ಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವಸ್ಥಾನ ಜೀರ್ಣೋದ್ಧಾರಕ್ಕೆ ಮಂಜೂರಾದ 2 ಕೋಟಿ ರೂ. ಆದೇಶ ಪತ್ರವನ್ನು ಶನಿವಾರ ವಿತರಿಸಿ ಮಾತನಾಡಿದ ಅವರು, ಕರೊನಾ ನಿಯಂತ್ರಿಸಲು ಕೇಂದ್ರ ಸರ್ಕಾರ ಹೊರಡಿಸಿದ್ದ ಆದೇಶದಂತೆ ಎರಡು ತಿಂಗಳು ಲಾಕ್‌ಡೌನ್ ಮಾಡಲಾಗಿತ್ತು. ಇದರಿಂದ ದೇಶ ಹಾಗೂ ರಾಜ್ಯದ ಜನರಿಗೆ ತೊಂದರೆಯಾಗಿದ್ದು ನಿಜ. ಕಾರ್ಖಾನೆಗಳು, ಕಂಪನಿಗಳು, ಹೋಟೆಲ್ ಉದ್ಯಮ ನಿಂತುಹೋಗಿದೆ. ಇದೊಂದು ಸಂದಿಗ್ಧತೆಯ ಕಾಲ ಎಂದರು.

    ನಿಯಂತ್ರಣ ಸಾಧ್ಯ: ಜನರಿಗೆ ಎರದುರಾದ ತೊಂದರೆ ನೀಗಿಸಲು ಕೇಂದ್ರ ಸರ್ಕಾರ ಆತ್ಮ ನಿರ್ಭರ ಭಾರತ ಯೋಜನೆ ಜಾರಿಗೆ ತಂದು 20 ಲಕ್ಷ ಕೋಟಿ ರೂ. ಪ್ಯಾಕೇಜ್ ಘೋಷಣೆ ಮಾಡಿದೆ. ಇದರಲ್ಲಿ 4,300 ಕೋಟಿ ರೂ. ರಾಜ್ಯಕ್ಕೆ ಪ್ಯಾಕೇಜ್ ಬಂದಿದೆ. ಲಾಕ್‌ಡೌನ್ ಸಂದರ್ಭದಲ್ಲಿ ಆರ್ಥಿಕವಾಗಿ ತೊಂದರೆ ಅನುಭವಿಸಿದವರನ್ನು ಗುರುತಿಸಿ ನೇರವಾಗಿ ಅವರ ಖಾತೆಗೆ ಹಣ ಜಮಾ ಮಾಡಲಾಗಿದೆ.

    ಕೇಂದ್ರ ಮತ್ತು ರಾಜ್ಯ ಸರ್ಕಾರ ಕರೊನಾ ವೈರಸ್ ನಿಯಂತ್ರಿಸಲು ವಿಧಿಸಿರುವ ಮಾರ್ಗಸೂಚಿ ಪಾಲಿಸಿದರೆ ಸಹಜವಾಗಿಯೇ ಮಾರಕ ವೈರಸ್ ನಿಯಂತ್ರಣಕ್ಕೆ ಬರಲಿದೆ. ಹೀಗಾಗಿ ಎಲ್ಲವೂ ನಮ್ಮ ಜನರ ಕೈಯಲ್ಲಿದೆ ಎಂದರು. ಚಿಕ್ಕೋಡಿ ಪಟ್ಟಣದ ಪ್ರಾಚೀನ ಮರಡಿ ಬಸವೇಶ್ವರ ದೇವಸ್ಥಾನ ಜೀರ್ಣೋದ್ಧಾರಕ್ಕೆ ಮಹಾಂತೇಶ ಕವಟಗಿಮಠ ಅವರು ಹಲವು ದಿನಗಳಿಂದ ಒತ್ತಾಯ ಮಾಡುತ್ತಲೇ ಬಂದಿದ್ದರು.

    ಅವರ ಮನವಿಯ ಮೇರೆಗೆ 2 ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದರು. ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಎನ್.ಎಸ್. ವಂಟಮುತ್ತೆ, ನಾಗರಾಜ ಮೇದಾರ, ಅಕ್ರಮ ಅರ್ಕಾಟೆ, ಸುರೇಶ ಕಾಳಿಂಗೆ, ಸದಾಶಿವ ಮಾಳಿ, ಚಂದ್ರಕಾಂತ ಬುರುಡ, ಶಂಕರ ಬುರುಡ, ಗಣಪತಿ ಬುರುಡ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts