More

    ಬೀಚ್​​ನಲ್ಲಿ ಪತ್ತೆಯಾದವು ಡೈನೋಸಾರ್​ ಮರಿಗಳು: ಭಾರೀ ವೈರಲ್​ ಆದ ಈ ವಿಡಿಯೋದಲ್ಲಿರುವ ಪ್ರಾಣಿ ಯಾವುದು?

    ಮೆಕ್ಸಿಕೋ: ಸಮುದ್ರದ ತೀರಲ್ಲಿ ಡೈನೋಸಾರ್ ಮರಿಗಳು ಸಾಲಾಗಿ ಓಡಿಹೋಗತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿತ್ತು. ಅಲ್ಲದೇ ನಿಜವಾಗಿಯೂ ಇದು ಡೈನೋಸಾರ್​ ಮರಿಗಳೇ ಇರಬಹುದು ಎಂದು ಈ ವಿಡಿಯೋ ನೋಡಿದವರು ಅಚ್ಚರಿ ವ್ಯಕ್ತಪಡಿಸಿದ್ದರು.

    ಓರ್ವ ಟ್ವಿಟಿಗ ಈಗಷ್ಟೇ ಡೈನೋಸಾರ್ ಮರಿಗಳು ಸಮುದ್ರದ ಬೀಚ್​ನಲ್ಲಿ ಓಡಾಡುತ್ತಿವೆ ಎಂಬ ಶೀರ್ಷಿಕೆ ನೀಡಿ ವಿಡಿಯೋ ಹಾಕಿಕೊಂಡಿದ್ದರು. ಇದನ್ನು ನೋಡಿದ ಜನರು ಶಾಕ್​ ಆಗಿದ್ದಲ್ಲದೇ ನಿಜವಾಗಿಯೂ ಇದು ಡೈನೋಸಾರ್​ ಇರಬಹುದು ಎಂದೇ ನಂಬಿದ್ದರು. 14 ಸೆಕೆಂಡ್​ ಇರುವ ಈ ವಿಡಿಯೋವನ್ನು 9.8ಮಂದಿ ವೀಕ್ಷಿಸಿದ್ದು, 47ಸಾವಿರ ಲೈಕ್ಸ್​ ಸಿಕ್ಕಿದೆ.

    ನಂತರ ಇದಕ್ಕೆ ಉತ್ತರಿಸಿರುವ ಅವರು ಹೌದು… ಡೈನೋಸಾರ್ ಗಳು ಹಲವು ವರ್ಷಗಳ ಹಿಂದೆ ಇದ್ದವು ಎಂಬುದನ್ನು ತನ್ನ ಮಗನಿಗೆ ತೋರಿಸಲು ಸಂಜೆ ವೇಳೆಯಲ್ಲಿ ಓಡಾಡುತ್ತಿದ್ದ ಈ ಪ್ರಾಣಿಯನ್ನು ವಿಡಿಯೋ ಮಾಡಿದ್ದೆ. ಇವು ಕ್ಯಾಮೆರಾದಲ್ಲಿ ಅದೇ ರೀತಿ ಸೆರೆಯಾಗಿವೆ. ಆದರೆ ಇದು ಡೈನೋಸಾರ್ ಅಲ್ಲ ಎಂದು ಸ್ಪಷ್ಡಪಸಿದ್ದಾರೆ.

    ಹಾಗಾದರೆ ಅದರಂತೆಯೇ ಇರುವ ಈ ಜೀವಿಗಳು ಯಾವುವು ಎಂಬುದಕ್ಕೆ ಇಲ್ಲಿದೆ ಉತ್ತರ. ದಕ್ಷಿಣ ಹಾಗೂ ಮಧ್ಯ ಅಮೆರಿಕ ಮತ್ತು ಮೆಕ್ಸಿಕೋದಲ್ಲಿ ಕಾಣ ಸಿಗುವ ಕೊಟಿಸ್​ ಎಂಬ ಪ್ರಾಣಿ ಇದು ಓಡುವಾಗ ಡೈನೊಸಾರ್​ ಅಂತೆಯೇ ಕತ್ತು ಮೇಲೆತ್ತಿ ಓಡುತ್ತವೆ. ಇದರ ಬಾಲ ಉದ್ದವಿರುವುದರಿಂದ ಅವು ಡೈನೋಸಾರ್ ಮರಿಗಳಂತೆಯೇ ಕಾಣುತ್ತವೆ. ಅಸಲಿಗೆ ಇದು ಡೈನೋಸಾರ್ ಗಳಲ್ಲ ಎಂಬುದು ಸ್ಪಷ್ಟವಾಗಿದೆ.

    ಇವು 33 ರಿಂದ 68 ಇಂಚು ಎತ್ತರವಿದ್ದು, 2 ರಿಂದ 8 ಕೆ.ಜಿ.ಯವರೆಗೆ ತೂಕವಿರಲಿದೆ.

    ಮಂಗಳವಾರ ಕರಾವಳಿ ತೀರಕ್ಕೆ ಪ್ರವೇಶಿಸಲಿದೆ ವರ್ಷದ ಮೊದಲ ಚಂಡಮಾರುತ: ಒಡಿಶಾ ಸರ್ಕಾರದಿಂದ ಮುನ್ನೆಚ್ಚರಿಕೆ ಕ್ರಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts