More

    ಜಾತಿ ನಿರ್ಮೂಲನೆ ಶ್ರಮಿಸಿದ ಬಾಬೂಜಿ

    ಮೈಸೂರು: ದಲಿತರನ್ನು ಜೀತ ಪದ್ಧತಿಯಿಂದ ಮುಕ್ತಗೊಳಿಸುವುದು ಬಾಬು ಜಗಜೀವನರಾಮ್ ಅವರ ಮಹದಾಸೆಯಾಗಿತ್ತು ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಹೇಳಿದರು.


    ಮೈಸೂರು ವಿಶ್ವವಿದ್ಯಾಲಯದ ಡಾ.ಬಾಬು ಜಗಜೀವನರಾಮ್ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣ ಕೇಂದ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ಡಾ.ಬಾಬು ಜಗಜೀವನರಾಮ್ ಅವರ 117ನೇ ವರ್ಷದ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.


    ದಲಿತರನ್ನು ಜೀತದಿಂದ ಮುಕ್ತರಾಗಿ ಮಾಡಲು ಅವರು ರಾಜಕೀಂು ರಂಗವನ್ನು ಪ್ರವೇಶಿಸಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳುವುದರ ಜತೆಗೆ ಹರಿಜನ ಸೇವಾ ಸಂಘದ ಮೂಲಕ ದಲಿತರ ಉದ್ಧಾರಕ್ಕಾಗಿ ಶ್ರಮಿಸಿದರು ಎಂದು ತಿಳಿಸಿದರು.


    ಬಾಬೂಜಿ ಅವರು ಯಾವುದೇ ಸದ್ದು ಗದ್ದಲವಿಲ್ಲದೆ ಜಾತಿ ನಿರ್ಮೂಲನಾ ಕಾಂರ್ುಕ್ರಮ ಅನುಷ್ಠಾನಕ್ಕೆ ತಂದವರು. ಅವರು ರೈಲ್ವೆ ಸಚಿವರಾಗುವ ಮೊದಲು ರೈಲು ನಿಲ್ದಾಣಗಳಲ್ಲಿ ಕುಡಿಯುವ ನೀರು ಸರಬರಾಜು ವ್ಯವಸ್ಥೆ ಮೇಲ್ವರ್ಗದವರಿಗೆ ವಾತ್ರ ಮೀಸಲಾಗಿತ್ತು. ಅವರು ಯಾವ ಜಾತಿಯವರಾದರೂ ರೈಲು ನಿಲ್ದಾಣಗಳಲ್ಲಿ ನೀರು ಸರಬರಾಜು ವಾಡಬಹುದು ಎಂಬ ಆದೇಶ ಹೊರಡಿಸಿದರು. ರೈಲ್ವೆ ಹೋಟೆಲ್‌ಗಳಲ್ಲಿ ದಲಿತರಿಗೆ ಅವಕಾಶ ಕೊಡದಿದ್ದರೆ ಪರವಾನಗಿ ಕೊಡುವುದಿಲ್ಲ ಎಂಬ ಎಚ್ಚರಿಕೆಂು ಸಂದೇಶವನ್ನು ನೀಡುವ ಮೂಲಕ ರೈಲು ನಿಲ್ದಾಣಗಳನ್ನು ಅಸ್ಪಶ್ಯತಾಮುಕ್ತ ಸ್ಥಳವಾಗಿ ಪರಿವರ್ತನೆ ಮಾಡಿದರು ಎಂದು ಸ್ಮರಿಸಿದರು.


    ಅಸ್ಪಶ್ಯತಾ ನಿವಾರಣೆಯ ಕೆಲಸ ಕಾರ್ಯಗಳನ್ನು ಯಾವ ಹಿಂಸೆಗೂ ಅವಕಾಶವಿಲ್ಲದಂತೆ, ಎಲ್ಲರನ್ನೂ ಒಳಗೊಂಡು ಜಾತಿಯ ಕಟ್ಟುಪಾಡುಗಳನ್ನು ಸಡಿಲಗೊಳಿಸಿ ಸವಾಜದಲ್ಲಿ ಸಮತಾ ಭಾವನೆ ನೆಲೆಗೊಳ್ಳುವಂತೆ ವಾಡಿದರು. ಬಾಬೂಜಿ ನಿರ್ವಹಿಸಿದ ಎಲ್ಲ ಇಲಾಖೆಗಳಲ್ಲಿ ದಲಿತರ, ರೈತರ, ಅಲ್ಪಸಂಖ್ಯಾತರ ಮತ್ತು ಕಾರ್ಮಿಕರ ಅಭಿವೃದ್ಧಿಗೆ ವಿವಿಧ ಕಲ್ಯಾಣ ಕ್ರಮ ತೆಗೆದುಕೊಂಡಿದ್ದರು ಎಂದು ಹೇಳಿದರು.


    ಸ್ವಾತಂತ್ರ್ಯ ಪೂರ್ವದಲ್ಲಿ ಸ್ವಾತಂತ್ರ್ಯ ಸೇನಾನಿಂಾಗಿ, ಸ್ವಾತಂತ್ರ್ಯ ನಂತರ ಅಭಿವೃದ್ಧಿಂು ಹರಿಕಾರರಾಗಿ ಬಾಬೂಜಿ ಕಾರ್ಯ ನಿರ್ವಹಿಸಿದ್ದಾರೆ. ಉಳುವವನಿಗೆ ಭೂಮಿ, ಕೃಷಿ ಕಾರ್ಮಿಕರಿಗೆ ಕನಿಷ್ಠ ವೇತನ, ಮದ್ಯಪಾನ ನಿಷೇಧ ಮತ್ತು ಅಸ್ಪಶ್ಯತಾ ನಿವಾರಣೆ ವಾಡುವ ಮುಖಾಂತರ ಸದೃಢ ಭಾರತವನ್ನು ಕಟ್ಟುವುದು ಅವರ ಕನಸಾಗಿತ್ತು ಎಂದರು.


    ಬಾಬೂಜಿ ಅವರು ವಿದ್ಯಾರ್ಥಿಯಾಗಿದ್ದಾಗಲೇ ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಬಡ ವಿದ್ಯಾರ್ಥಿಗಳಿಗೆ ಪುಸ್ತಕ, ಬಟ್ಟೆ ಮತ್ತು ವಿದ್ಯಾಭ್ಯಾಸಕ್ಕೆ ಅಗತ್ಯವಾದ ಎಲ್ಲ ರೀತಿಯ ನೆರವು ನೀಡುತ್ತಿದ್ದರು ಎಂದು ಸ್ಮರಿಸಿದರು.


    ಸವಾಜ ಕಲ್ಯಾಣ ಇಲಾಖೆಂು ಜಿಲ್ಲಾ ಅಧಿಕಾರಿ ಮುನಿರಾಜು, ಮೈವಿವಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿಶೇಷ ಘಟಕದ ಉಪಕುಲಸಚಿವ ಎಸ್.ಎನ್.ಚಿದಾನಂದ ಮೂರ್ತಿ, ಮೈವಿವಿ ಡಾ.ಬಾಬು ಜಗಜೀವನರಾಮ್ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣ ಕೇಂದ್ರದ ನಿರ್ದೇಶಕ ಪ್ರೊ.ಆರ್.ತಿಮ್ಮರಾಂುಪ್ಪ, ವಿಶೇಷ ತಜ್ಞ ಮುನಿಯಪ್ಪ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts