More

    ಬಬ್ಬುಸ್ವಾಮಿ, ಪರಿವಾರ ದೈವಗಳ ಸಿರಿ ಸಿಂಗಾರದ ನೇಮ ಸಂಪನ್ನ

    ಮಂಗಳೂರು: ಅತೀ ಪುರಾತನ ಬಬ್ಬುಸ್ವಾಮಿ ಕ್ಷೇತ್ರಗಳಲ್ಲಿ ಒಂದಾಗಿರುವ ಸೂಟರ್‌ಪೇಟೆಯ ಶ್ರೀ ಕೋರ್ದಬ್ಬು ದೇವಸ್ಥಾನದಲ್ಲಿ ಇತ್ತೀಚೆಗೆ ಶ್ರೀ ಬಬ್ಬುಸ್ವಾಮಿ ಹಾಗೂ ಪರಿವಾರ ದೈವಗಳ ವೈಭವದ ಸಿರಿ ಸಿಂಗಾರದ ನೇಮೋತ್ಸವ ಸಂಪನ್ನಗೊಂಡಿತು.

    ವಿಶಿಷ್ಠ ರೀತಿಯ ಭೂತಾರಾಧನೆಯ ಪರಂಪರೆಯನ್ನು ಉಳಿಸಿಕೊಂಡು ಬಂದಿರುವ ಶ್ರೀ ಕ್ಷೇತ್ರದ ನೇಮೋತ್ಸವಕ್ಕೆ ಊರ ಪರಊರಿನ ಸರ್ವಧರ್ಮದ ಸಾವಿರಾರು ಭಕ್ತರು ಆಗಮಿಸಿ ಶ್ರೀ ಬಬ್ಬುಸ್ವಾಮಿ ಹಾಗೂ ಪರಿವಾರ ದೈವಗಳ ಗಂಧಪ್ರಸಾದ ಸ್ವೀಕರಿಸಿದರು.

    ಧರ್ಮದರ್ಶಿ ಭಾಸ್ಕರ್ ಐತಾಳ್ ಕೊಲ್ಯ ಪೌರೋಹಿತ್ಯದಲ್ಲಿ ಸಾರ್ವಜನಿಕ ಸತ್ಯನಾರಾಯಣ ಪೂಜೆ ನಡೆದು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ನಂತರ ನಾಲ್ಕು ದಿನಗಳ ಕಾಲ ಸ್ಥಳದ ಗುಳಿಗ, ಶ್ರೀಬಬ್ಬುಸ್ವಾಮಿತನ್ನಿಮಾನಿಗ, ರಾಹು ಗುಳಿಗ, ಪಂಜುರ್ಲಿಗುಳಿಗ, ಧರ್ಮದೈವ, ಸುಬ್ಯಮ್ಮ ಸುಬ್ಬಿ ಗುಳಿಗ, ಸಂಕಲೆ ಗುಳಿಗ ಹಾಗೂ ಕೊರಗಜ್ಜ ದೈವಗಳ ನೇಮೋತ್ಸವ ವಿಜೃಂಭಣೆಯಿಂದ ನಡೆಯಿತು. ನೇಮೋತ್ಸವದ ನಾಲ್ಕು ದಿನವೂ ಶ್ರೀ ಕ್ಷೇತ್ರದಲ್ಲಿ ಮಧ್ಯಾಹ್ನ ಹಾಗೂ ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

    ದೈವಸ್ಥಾನದ ಗೌರವ ಸಲಹೆಗಾರ ಕೆ.ಪಾಂಡುರಂಗ, ಎಸ್.ಬಾಬು, ಪ್ರಧಾನ ಕಾರ್ಯದರ್ಶಿ ಎಸ್.ಜಗದೀಶ್ಚಂದ್ರ ಅಂಚನ್, ಕೋಶಾಧಿಕಾರಿ ಎಸ್.ನವೀನ್, ಪ್ರಧಾನ ಅರ್ಚಕ ಎಸ್.ಗಣೇಶ, ಅರ್ಚಕರಾದ ಜಯ, ಪದಾಧಿಕಾರಿ ಎಸ್.ಪವಿತ್ರಾ, ಎಸ್.ಮೋಹನ್, ಬಿ.ವಿಶ್ವನಾಥ್ ಸಾಲ್ಯಾನ್, ಎಸ್.ಜನಾರ್ದನ ಸೇರಿದಂತೆ ಹಲವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts