More

    ಬಾಬಾ ಕಾ ಢಾಬಾ: ಗ್ರಾಹಕರಿಲ್ಲ ಎಂಬಂತಿದ್ದ ಸ್ಥಳದಲ್ಲೀಗ ಸ್ಟಿಕ್ಕರ್ ಹಚ್ಚೋಕೂ ಜಾಗ ಇಲ್ಲ!

    ನವದೆಹಲಿ: ಕೆಲವೇ ದಿನಗಳ ಹಿಂದೆ ಭಾರಿ ಸುದ್ದಿಯಲ್ಲಿದ್ದ ಬಾಬಾ ಕಾ ಢಾಬಾ ಈಗ ಮತ್ತೆ ಸುದ್ದಿಯಾಗುತ್ತಿದೆ. ಹಾಗಂತ ಈ ಸುದ್ದಿ ಈಗ ಬಾಬಾನಿಗೆ ಮತ್ತೆ ಸಹಾಯ ಬೇಕಾಗಿ ಅಲ್ಲ. ಈಗ ದೊಡ್ಡ ದೊಡ್ಡ ಕಂಪನಿಗಳೇ ಬಾಬಾ ಸಹಾಯವನ್ನು ತೆಗೆದುಕೊಳ್ಳುತ್ತಿದ್ದಾರೆ!

    ದಕ್ಷಿಣ ದೆಹಲಿಯ ಮಾಳವೀಯ ನಗರದಲ್ಲಿ ವಯೋವೃದ್ಧ ಕಾಂತ ಪ್ರಸಾದ್​ (ಬಾಬಾ) ದಂಪತಿ ನಡೆಸುವ ‘ಬಾಬಾ ಕಾ ಢಾಬಾ’ದಲ್ಲಿ ಗ್ರಾಹಕರೇ ಇಲ್ಲ ಎಂಬ ಕಾರಣಕ್ಕೆ ಬಾಬಾ ಅತ್ತಿದ್ದ ವಿಡಿಯೋ ಕೆಲವು ದಿನಗಳ ಹಿಂದೆ ವೈರಲ್​ ಆಗಿತ್ತು. ಪರಿಣಾಮ ಮಾರನೇ ದಿನವೇ ಅಲ್ಲಿ ಜನಜಂಗುಳಿ ಸೃಷ್ಟಿಯಾಗಿತ್ತು.

    ಇದೀಗ ಅದು ಒಂದು ದೆಹಲಿಗರ ಫೇವರಿಟ್​ ಈಟೌಟ್​ ಎಂಬಂತಾಗಿದ್ದು, ನಿತ್ಯವೂ ಸಾರ್ವಜನಿಕರ ದಂಡು ಅಲ್ಲಿ ಸೇರಿರುತ್ತದೆ. ಮಾತ್ರವಲ್ಲ ಅದೀಗ ದೊಡ್ಡ ದೊಡ್ಡ ಕಂಪನಿಗಳ ಜಾಹೀರಾತು ತಾಣವೂ ಆಗಿದೆ. ತುಂಬ ಕಂಪನಿಗಳವರು ‘ಬಾಬಾ ಕಾ ಢಾಬಾ’ವನ್ನು ತಮ್ಮ ಜಾಹೀರಾತಿಗೆ, ಪ್ರಮೋಷನಲ್​ ಆ್ಯಕ್ಟಿವಿಟೀಸ್​ಗೆ ಬಳಸಿಕೊಳ್ಳುತ್ತಿದ್ದಾರೆ. ಎಷ್ಟರಮಟ್ಟಿಗೆ ಎಂದರೆ ಅಲ್ಲಿ ಈಗ ವಿವಿಧ ಕಂಪನಿಗಳ ಜಾಹೀರಾತುಗಳು ಆವರಿಸಿದ್ದು, ಒಂದು ಸ್ಟಿಕ್ಕರ್ ಅಂಟಿಸಲು ಅಥವಾ ಪೋಸ್ಟರ್ ಹಚ್ಚಲೂ ಜಾಗ ಹುಡುಕುವಂತಾಗಿದೆ. ಇನ್ನು ಜನರು ಕೂಡ ಇಲ್ಲಿ ನಿಂತು ಢಾಬಾ ಮುಂದೆ, ಬಾಬಾ ಜತೆ ಸೆಲ್ಫೀ ತೆಗೆಯುವಂಥ ಕ್ರೇಜ್​ ಕೂಡ ಸೃಷ್ಟಿಯಾಗಿದೆ.

    ಬಾಬಾ ಕಾ ಢಾಬಾ: ಗ್ರಾಹಕರಿಲ್ಲ ಎಂಬಂತಿದ್ದ ಸ್ಥಳದಲ್ಲೀಗ ಸ್ಟಿಕ್ಕರ್ ಹಚ್ಚೋಕೂ ಜಾಗ ಇಲ್ಲ!

    ‘ನಾನು ಮೊದಲು ಬರೀ ಮುಕ್ಕಾಲು ಕೆ.ಜಿ. ಅಕ್ಕಿಯ ಅನ್ನ ಮಾರಲು ಪರದಾಡುತ್ತಿದ್ದೆ. ಇದೀಗ ಅರ್ಧ ದಿನದಲ್ಲಿ 5 ಕೆ.ಜಿ. ಅಕ್ಕಿಯ ಅನ್ನ ಮಾರಾಟವಾಗುತ್ತಿದೆ. ಗ್ರಾಹಕರು ಹೆಚ್ಚಾಗಿರುವುದರಿಂದ ಇನ್ನೊಬ್ಬರು ಯಾರನ್ನಾದರೂ ಕೆಲಸಕ್ಕೆ ತೆಗೆದುಕೊಳ್ಳಬೇಕು’ ಎನ್ನುತ್ತಾರೆ ಬಾಬಾ. ಇನ್ನು ಜಾಹೀರಾತಿನ ಬಗ್ಗೆ ಮಾತನಾಡುವ ಅವರು, ‘ಅದು ಸಹಾಯ ಹಾಗೂ ಜಾಹೀರಾತು ಕೂಡ. ನನಗೆ ಈಗ ಸಹಾಯ ಬೇಕಾಗಿಲ್ಲ, ಬೇರೆಯವರಿಗಾದರೂ ಸಹಾಯವಾಗಲಿ’ ಎನ್ನುತ್ತಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts