More

    ಅಯೋಧ್ಯೆ ಯಾತ್ರೆ ಮುಗಿಸಿ ಮರಳಿದ ಗದಗ ಯಾತ್ರಿಕರು 

    ಗದಗ: ಸುಮಾರು ಐನೂರು ವರ್ಷಗಳ ಹೋರಾಟದ ಫಲವಾಗಿ ಹಾಗೂ ಕರ- ಸೇವಕರ, ರಾಮಭಕ್ತರ ಶ್ರದ್ಧೆಯ ಹೋರಾಟ ಹಾಗೂ ರಾಮ ಭಕ್ತರ ಕನಸು ಅಯೋಧ್ಯೆಯಲ್ಲಿ ಬಾಲ ರಾಮನ  ಪ್ರಾಣ ಪ್ರತಿಷ್ಠೆಯ ದಿನ  ತಮ್ಮ ತಮ್ಮ ಮನೆಯಲ್ಲಿ ಊರಲ್ಲಿ ಆಚರಿಸಿ ಸಂಭ್ರಮಪಟ್ಟಿದ್ದ ಹಲವಾರು ಭಕ್ತರು ಆಸ್ತಾ ವಿಶೇಷ ರೈಲು ಮೂಲಕ ಹಲವಾರು ತಂಡಗಳು  ಅಯೋಧ್ಯೆಯ ಬಾಲ ರಾಮನ ದರ್ಶನ ಪಡೆದಿದ್ದಾರೆ.

    ಅದೇ ರೀತಿ ಗದಗ ಜಿಲ್ಲೆಯ ಭಕ್ತರು ಫೆಬ್ರುವರಿ 28 ರಂದು ವಿಶೇಷ ರೈಲು ಮೂಲಕ ಅಯೋಧ್ಯೆಗೆ ತೆರಳಿ ಶ್ರೀ ಬಾಲರಾಮ ದೇವರ ದರ್ಶನ ಭಾಗ್ಯ ಪಡೆದರು.

     ಅಯೋಧ್ಯೆಯ ವಾಲ್ಮೀಕಿ ರೈಲು ನಿಲ್ದಾಣದಲ್ಲಿ ಇಳಿದು ಕರ್ನಾಟಕಕ್ಕೆ ಮೀಸಲಾಗಿದ್ದ ಜರ್ಮನ್ ಟೆಂಟುಗಳಲ್ಲಿ ವಿಶ್ರಮಿಸಿ, ಪವಿತ್ರ ಸರಯೂ ನದಿಯಲ್ಲಿ ಸ್ನಾನ ಮಾಡಿ  ಶ್ರೀಬಾಲರಾಮದೇವರ ದರ್ಶನ ಪಡೆದದ್ದು ಕರ್ನಾಟಕದ ಜನರಿಗೆ ಹೆಮ್ಮೆಯ ವಿಷಯ.

    ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ ಅವರ ಆಡಳಿತದ  ವೈಖರಿಯನ್ನು ಮಹಿಳೆಯರು ಕೊಂಡಾಡಿದ್ದಾರೆ. ಬಾಲರಾಮನ ದರ್ಶನ ಯೋಗ ನಮಗೆ ರಾಜಯೋಗ, ನಾವು ಪುಣ್ಯವಂತರು ಎಂಬುದು ಸತ್ಯ ಸಂಗತಿ. ರಾಷ್ಟ್ರದ ಒಗ್ಗಟ್ಟನ್ನು ರಾಷ್ಟ್ರೀಯ ಭಾವನೆ, ಗೌರವವನ್ನು ಎತ್ತಿ ಹಿಡಿದು ನ್ಯಾಯಾಲಯದ ತೀರ್ಪಿಗೆ ಅನುಗುಣವಾಗಿ ಶ್ರೀ ಬಾಲರಾಮನ  ದೇವರ ಪ್ರಾಣ ಪ್ರತಿಷ್ಠೆಯನ್ನು ಮಾಡುವ ಮೂಲಕ ಭಾರತಿಯರ  ಹೃದಯ ಮಂದಿರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ವಿರಾಜಮಾನರಾಗಿದ್ದಾರೆ ಎಂದು ಪ್ರಯಾಣಿಕರು ಕೊಂಡಾಡಿದರು.

    ವಿಜಯಪುರ ರೇಲ್ವೆ ನಿಲ್ದಾಣದಲ್ಲಿ ಭಜನೆ ಜಯಕಾರಗಳ ಮೂಲಕ ರಾಮನನ್ನು ಕೊಂಡಾಡಿದರು. ಅಯೋಧ್ಯೆ ಮತ್ತು ಕನ್ನಡ ನಾಡಿನ ಸಂಬಂಧ ಅನ್ಯೋನ್ಯ. ಕನ್ನಡ ನಾಡಿನ ಸಾಲಿಗ್ರಾಮ ಶಿಲೆಯಲ್ಲಿ ಅಡಕವಾಗಿದ್ದ ಶ್ರೀಬಾಲರಾಮನ ಮೂರ್ತಿ ತಯಾರಿಸಿದ ಶಿಲ್ಪಿ ಅರುಣ ಯೋಗಿರಾಜ್ ಕನ್ನಡ ನಾಡಿನವರು. ರಾಮ ಭಕ್ತ ಆಂಜನೇಯ ಕನ್ನಡ ಭೂಮಿ ಪುತ್ರ. ಒಟ್ಟಾರೆ ಹೇಳುವುದಾದರೆ ಈ ಅಯೋಧ್ಯಾ ಯಾತ್ರೆಯ ಆಯೋಜಕರು ಜವಾಬ್ದಾರಿ ಹೊತ್ತಿದ್ದ ಸ್ವಯಂಸೇವಕರು, ಈ ಯಾತ್ರೆ ಯಶಸ್ಸಿಗೆ ಕಾರಣರು.

    ಯಾತ್ರೆಯಲ್ಲಿ ರಾಮ ಭಕ್ತರು, ಭಾಜಪ ಕಾರ್ಯಕರ್ತರು ಗದಗ ಜಿಲ್ಲೆಯ ಮುಖಂಡರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts