More

    ಮಾರುಕಟ್ಟೆಯಲ್ಲಿ ಆಯುಧ ಪೂಜೆಯ ಖರೀದಿ ಭರಾಟೆ

    ರಾಯಚೂರು: ಬರದ ಛಾಯೆಯ ನಡುವೆಯೂ ಜನರು ದಸರಾ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ಮುಂದಾಗಿದ್ದು, ಆಯುಧ ಪೂಜೆಗಾಗಿ ಹೂವು, ಹಣ್ಣು ಮತ್ತಿತರ ಸಾಮಗ್ರಿಗಳ ಖರೀದಿಗೆ ಭಾನುವಾರ ಜನರು ಮಾರುಕಟ್ಟೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು.
    ದಸರಾ ಹಬ್ಬ ನಮ್ಮ ಜನರಿಗೆ ವಿಶೇಷವಾಗಿದ್ದು ಒಂಭತ್ತು ದಿನಗಳ ಕಾಲ ವಿಶೇಷ ಪೂಜೆ ಪುನಸ್ಕಾರಗಳನ್ನು ನಡೆಸಲಾಗುತ್ತಿದೆ. ಮಠ ಮಾನ್ಯಗಳಲ್ಲಿ ಪುರಾಣ ಪ್ರವಚನ ಹಾಗೂ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
    ನವರಾತ್ರಿಯ ಹಬ್ಬದ 8ನೇ ದಿನವಾದ ಆಯುಧಪೂಜೆಯಂದು ವ್ಯಾಪಾರಸ್ಥರು ತಮ್ಮ ಸಾಮಗ್ರಿಗಳಿಗೆ ಹಾಗೂ ಕೈಗಾರಿಕೆಗಳಲ್ಲಿ ಯಂತ್ರೋಪಕರಣಗಳಿಗೆ ತಳಿರು ತೋರಣಗಳಿಂದ ಅಲಂಕರಿಸಿ ವಿಶೇಷ ಪೂಜೆ ನಡೆಸುವ ಮೂಲಕ ಯಾವುದೇ ವಿಘ್ನಗಳು ಬಾರದಿರಲಿ ಎಂದು ಕೋರಲಾಗುತ್ತದೆ.
    ಪೂಜೆಗಾಗಿ ಮಾರುಕಟ್ಟೆಯಲ್ಲಿ ಹೂವು, ಹಣ್ಣು, ಮಾವಿನ ಎಲೆ, ಬಾಳೆ ದಿಂಡು ಹಾಗೂ ಕುಂಬಳಕಾಯಿ ಖರೀದಿ ಹೆಚ್ಚಿನ ಪ್ರಮಾಣದಲ್ಲಿ ನಡೆದಿತ್ತು. ಹತ್ತು ದಿನಗಳಿಂದ ಹೂವು, ಹಣ್ಣಿನ ದರದಲ್ಲಿ ಏರಿಕೆಯಾಗುತ್ತಾ ಬಂದಿದ್ದು, ಭಾನುವಾರ ದುಪ್ಪಟ್ಟು ದರಕ್ಕೆ ಮಾರಾಟ ನಡೆಸಲಾಗುತ್ತಿತ್ತು.
    ಹೀಗಾಗಿ ಮಾರುಕಟ್ಟೆಯಲ್ಲಿ ಹೂವು, ಹಣ್ಣಿನ ದಾಸ್ತಾನು ಹೆಚ್ಚಿನ ಪ್ರಮಾಣದಲ್ಲಿದ್ದರೂ ಜನರು ದರ ಹೆಚ್ಚಾಗಿರುವ ಕಾರಣದಿಂದ ಅಲ್ಪ ಪ್ರಮಾಣದಲ್ಲಿ ಖರೀದಿ ಮಾಡುತ್ತಿರುವುದು ಕಂಡು ಬರುತ್ತಿತ್ತು. ಜತೆಗೆ ಬಟ್ಟೆ ಅಂಗಡಿಗಳಲ್ಲಿಯೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಗೆ ನೆರೆದಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts