More

    ರಾಮಮಂದಿರ ಹಿಂದುಗಳ ಭಾವನೆಯ ಪ್ರತೀಕ

    ಬಾಳೆಹೊನ್ನೂರು: ಆಯೋಧ್ಯೆ ರಾಮಮಂದಿರ ಪ್ರತಿಯೊಬ್ಬ ಹಿಂದುಗಳ ಭಾವನೆಯ ಪ್ರತೀಕ ಎಂದು ಮಂದಿರ ನಿರ್ವಣದ ನಿಧಿ ಸಂಗ್ರಹ ಅಭಿಯಾನದ ಮುಖಂಡ ಗಣೇಶ್ ರಾವ್ ಹೇಳಿದರು.

    ಪಟ್ಟಣದ ಮಾರ್ಕಾಂಡೇಶ್ವರ ದೇವಸ್ಥಾನದ ಆವರಣದಲ್ಲಿ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿಯಿಂದ ರಾಮಮಂದಿರ ನಿರ್ವಣಕ್ಕೆ ನೀಡಿದ ಚೆಕ್ ಸ್ವೀಕರಿಸಿ ಮಾತನಾಡಿದ ಅವರು, ರಾಮಮಂದಿರ ನಿರ್ವಣಕ್ಕಾಗಿ ಐದು ಶತಮಾನಗಳ ಹಿಂದೆಯೇ ಹೋರಾಟ ಆರಂಭವಾಗಿತ್ತು. ಪ್ರಸ್ತುತ ಎಲ್ಲ ವಿವಾದಗಳು ಇತ್ಯರ್ಥಗೊಂಡು ಮಂದಿರ ನಿರ್ವಣದ ಶುಭ ಕಾಲ ಕೂಡಿಬಂದಿದೆ ಎಂದರು.

    ಜನರ ಸೇವಾಭಾವನೆಗೆ ಬೆಲೆ ಕೊಡಬೇಕೆಂಬ ಉದ್ದೇಶದಿಂದ ಮಂದಿರ ನಿರ್ಮಾಣ ಟ್ರಸ್ಟ್ ದೇಶದ ಮೂಲೆ ಮೂಲೆಗಳ ಮನೆಗಳಿಂದಲೂ ನಿಧಿ ಸಂಗ್ರಹಿಸುತ್ತಿದೆ. ಈ ಅಭಿಯಾನದ್ದು ಕೇವಲ ಹಣ ಸಂಗ್ರಹಣೆ ಉದ್ದೇಶವಲ್ಲ. ಜನರ ಮನಸ್ಸನ್ನು ಗೆಲ್ಲುವ ಗುರಿಯಾಗಿದೆ ಎಂದು ಮಾಹಿತಿ ನೀಡಿದರು.

    ವಿಹಿಂಪ ಜಿಲ್ಲಾ ಕಾರ್ಯದರ್ಶಿ ಆರ್.ಡಿ.ಮಹೇಂದ್ರ ಮಾತನಾಡಿ, ಬಾಳೆಹೊನ್ನೂರು ದುರ್ಗಾ ಸಮಿತಿಯ ಆಜೀವ ಸದಸ್ಯರಿಂದ ತಲಾ 1001 ರೂ.ನಂತೆ ಒಟ್ಟು 155 ಸದಸ್ಯರಿಂದ 1,55,155 ರೂ. ಚೆಕ್ ಅನ್ನು ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ಚೆಕ್ ಮೂಲಕ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದರು.

    ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿ ಅಧ್ಯಕ್ಷ ಎಚ್.ಡಿ.ನಾಗೇಶ್ ಹೆಗ್ಡೆ, ಕಾರ್ಯಾಧ್ಯಕ್ಷ ವೈ.ಮೋಹನ್​ಕುಮಾರ್, ಕೋಶಾಧಿಕಾರಿ ಭಾಸ್ಕರ್ ವೆನಿಲ್ಲಾ, ಪ್ರಧಾನ ಕಾರ್ಯದರ್ಶಿ ಎಚ್.ಆರ್.ಆನಂದ್, ಸಹ ಖಜಾಂಚಿ ಚೈತನ್ಯ ವೆಂಕಿ, ಸಮಿತಿ ಸದಸ್ಯರಾದ ಪ್ರಸನ್ನಾ ಜಿ.ಭಟ್, ಪ್ರಭಾಕರ್ ಪ್ರಣಸ್ವಿ, ದಯಾಕರ್ ಸುವರ್ಣ, ಗಿರೀಶ್, ಬಿ.ಜಗದೀಶ್ಚಂದ್ರ, ಕೆ.ಟಿ.ವೆಂಕಟೇಶ, ಕೃಷ್ಣ ಭಟ್, ಟಿ.ಆರ್.ನಾಗಪ್ಪ ಗೌಡ, ಉಪೇಂದ್ರ, ಮನುಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts