More

    ಜಾಗೃತಿ ಜಾಥಾ, ಚಿತ್ರಕಲಾ ಪ್ರದರ್ಶನ


    ಮೈಸೂರು:
    69ನೇ ವನ್ಯಪ್ರಾಣಿ ಸಪ್ತಾಹದ ಆಚರಣೆ ಅಂಗವಾಗಿ ಸೋಮವಾರ ಚಾಮರಾಜೇಂದ್ರ ಮೃಗಾಲಯದಿಂದ ಜಾಗೃತಿ ಜಾಥಾ ಹಾಗೂ ಚಿತ್ರಕಲಾ ಪ್ರದರ್ಶನ ಆಯೋಜಿಸಲಾಗಿತ್ತು.


    ವನ್ಯಜೀವಿಗಳ ಮಹತ್ವ ತಿಳಿಸಲು ಅರಮನೆ ಬಲರಾಮ ದ್ವಾರದಿಂದ ಮೃಗಾಲಯದವರೆಗೆ ಜಾಗೃತಿ ಜಾಥಾ ನಡೆಯಿತು. ವಿದ್ಯಾರ್ಥಿಗಳು, ಅರಣ್ಯ ಇಲಾಖೆ ಮತ್ತು ಮೃಗಾಲಯ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಸ್ವಯಂಸೇವಕರು ಜಾಥಾದಲ್ಲಿ ಪಾಲ್ಗೊಂಡು ವನ್ಯಪ್ರಾಣಿಯ ಮಹತ್ವ ಸಾರಿದರು.
    ಚಿತ್ರಕಲಾ ಪ್ರದರ್ಶನ: ಮೃಗಾಲಯದ ಆ್ಯಂಫಿ ಥಿಯೇಟರ್‌ನಲ್ಲಿ ವನ್ಯಜೀವಿಗಳ ಚಿತ್ರಕಲಾ ಪ್ರದರ್ಶನ ಆಯೋಜಿಸಲಾಗಿತ್ತು. ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ಪ್ರದರ್ಶನಕ್ಕೆ ಚಾಲನೆ ನೀಡಿ, ವನ್ಯಜೀವಿಗಳ ಪ್ರಾಮುಖ್ಯತೆ ಬಗ್ಗೆ ತಿಳಿಸಿಕೊಟ್ಟರು.

    ದೊಡ್ಡ ಬೆಕ್ಕು ಜಾತಿಯ ಪ್ರಾಣಿಗಳ ಅಭಿಯಾನ ಕಾರ್ಯಕ್ರಮದಡಿ 5 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಚಿತ್ರಕಲೆ ಸ್ಪರ್ಧೆಯನ್ನು 3 ವಿಭಾಗಗಳಲ್ಲಿ ನಡೆಸಲಾಯಿತು. 235 ವಿದ್ಯಾರ್ಥಿಗಳು ಹಾಗೂ ಛಾಯಾಗ್ರಹಣ ಸ್ಪರ್ಧೆಯಲ್ಲಿ 52 ಛಾಯಾಗ್ರಾಹಕರು ಪಾಲ್ಗೊಂಡಿದ್ದರು. ಎಚ್.ವಿ. ಸಂತೃಪ್ತ್ ಹಾಗೂ ಯಶಸ್‌ನಾರಾಯಣ್ ತೀರ್ಪುಗಾರರಾಗಿದ್ದರು.

    ಅ.8ರಂದು ಬೆಳಗ್ಗೆ 10.30ಕ್ಕೆ ನಡೆಯುವ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುವುದು ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಡಿ. ಮಹೇಶ್‌ಕುಮಾರ್ ತಿಳಿಸಿದರು. ಡಿಸಿಎಫ್‌ಗಳಾದ ಬಸವರಾಜ್ ಹಾಗೂ ಸೌರಭ್‌ಕುಮಾರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts