More

    ಪೈರ್​​ಸರ್ವೀಸ್, ಹೋಮ್​ಗಾರ್ಡ್ಸ್​, ಸಿವಿಲ್ ಡಿಫೆನ್ಸ್​ ಸಿಬ್ಬಂದಿಗೆ ರಾಷ್ಟ್ರಪತಿ ಪದಕ: ಕರ್ನಾಟಕದ 16 ಸಿಬ್ಬಂದಿಗೆ ಗೌರವ

    ನವದೆಹಲಿ: ಅಗ್ನಿಶಾಮಕ ಸೇವೆ, ಗೃಹ ರಕ್ಷಕ ಸೇವೆ, ಸಿವಿಲ್ ಡಿಫೆನ್ಸ್​ ಸಿಬ್ಬಂದಿಗೆ ನೀಡಲಾಗುವ ರಾಷ್ಟ್ರಪತಿ ಪದಕಕ್ಕೆ ಅರ್ಹರಾದವರ ವಿವರ ಶನಿವಾರ ಪ್ರಕಟವಾಗಿದ್ದು, ಕರ್ನಾಟಕದ 16 ಸಿಬ್ಬಂದಿಗೆ ಈ ಸಲದ ಗಣರಾಜ್ಯೋತ್ಸವ ದಿನಾಚರಣೆ ವೇಳೆ ಗೌರವ ಸಲ್ಲಲ್ಲಿದೆ.
    ಅಗ್ನಿಶಾಮಕ ಸೇವೆಯ ಒಟ್ಟು 104 ಸಿಬ್ಬಂದಿಗೆ ಈ ವರ್ಷ ಫೈರ್ ಸರ್ವೀಸ್​ ಮೆಡಲ್ ಸಿಗಲಿದೆ. ಇದರಲ್ಲಿ ರಾಷ್ಟ್ರಪತಿಯವ ಫೈರ್​ ಸರ್ವೀಸ್​ ಮೆಡಲ್ ಫಾರ್ ಗ್ಯಾಲಂಟರಿ 13 ಸಿಬ್ಬಂದಿಗೆ ಮತ್ತು ಫೈರ್​ ಸರ್ವೀಸ್ ಮೆಡಲ್ ಫಾರ್ ಗ್ಯಾಲಂಟರಿ 29 ಸಿಬ್ಬಂದಿಗೆ, ರಾಷ್ಟ್ರಪತಿಯವರ ಫೈರ್ ಸರ್ವೀಸ್ ಮೆಡಲ್ ಫಾರ್ ಡಿಸ್ಟಿಂಗ್​ವಿಷ್ಡ್​ ಸರ್ವೀಸ್​ 12 ಸಿಬ್ಬಂದಿಗೆ, ಫೈರ್ ಸರ್ವೀಸ್​ ಮೆಡಲ್ ಫಾರ್ ಮೆರಿಟೋರಿಯಸ್​ ಸರ್ವೀಸ್​ 50 ಸಿಬ್ಬಂದಿಗೆ ಸಿಗಲಿದೆ.
    ಇದಲ್ಲದೆ, ಈ ಸಲ ಗಣರಾಜ್ಯೋತ್ಸವದಲ್ಲಿ 49 ಸಿಬ್ಬಂದಿಗೆ ಗೃಹ ರಕ್ಷಕ ದಳ ಮತ್ತು ಸಿವಿಲ್ ಡಿಫೆನ್ಸ್​ ಮೆಡಲ್​ ಗೌರವ ಸಲ್ಲಲ್ಲಿದೆ. ಈ ಪೈಕಿ, ರಾಷ್ಟ್ರಪತಿಯವರ ಹೋಮ್​ಗಾರ್ಡ್ಸ್​ ಮತ್ತು ಸಿವಿಲ್ ಡಿಫೆನ್ಸ್ ಮೆಡಲ್​ ಫಾರ್ ಡಿಸ್ಟಿಂಗ್​ವಿಷ್ಡ್​ ಸರ್ವೀಸ್ ಇಬ್ಬರಿಗೆ, ಹೋಮ್ ಗಾರ್ಡ್ಸ್​ ಮತ್ತು ಸಿವಿಲ್ ಡಿಫೆನ್ಸ್ ಮೆಡಲ್​ ಫಾರ್ ಮೆರಿಟೋರಿಯಸ್​ ಸರ್ವೀಸ್​ 47 ಸಿಬ್ಬಂದಿಗೆ ಸಿಗಲಿದೆ.

    ಕರ್ನಾಟಕದವರ ವಿವರ ಇಂತಿದೆ

    ರಾಷ್ಟ್ರಪತಿಯವರ ಫೈರ್​ ಸರ್ವೀಸ್ ಮೆಡಲ್ ಫಾರ್ ಗ್ಯಾಲಂಟರಿ ವಿಜೇತರು
    1. ರವಿಶಂಕರ್​ ಹಿರಯನಗೌಡ ಜಾವಗಲ್​, ಡೆಪ್ಯುಟಿ ಡೈರೆಕ್ಟರ್​
    2. ನವೀನ್ ಮಲ್ಲಪ್ಪ ಪವಾಡಿ, ಫೈರ್​ಮ್ಯಾನ್
    3. ಅಶೋಕ ಕೆಂಛಪ್ಪ ವಡೇರ್​, ಫೈರ್​ಮ್ಯಾನ್
    4. ಸಿದ್ದಪ್ಪ ರಾಮಪ್ಪ ಉಪ್ಪಾರ, ಫೈರ್​ಮ್ಯಾನ್ ಡ್ರೈವರ್
    5. ಧರಣೇಶ್ ಗೋವಿಂಧಯ್ಯ ಹೊನ್ನೇನಹಳ್ಳಿ, ಫೈರ್​ಮ್ಯಾನ್

    ಫೈರ್​ ಸರ್ವೀಸ್ ಮೆಡಲ್​ ಫಾರ್ ಮೆರಿಟೋರಿಯಸ್ ಸರ್ವೀಸ್ ವಿಜೇತರು
    1. ಮಹೇಶ್ ರೇಣುಕಾರಾಧ್ಯ, ರೀಜಿನಲ್ ಫೈರ್ ಆಫೀಸರ್
    2. ಎಂ.ಗೋಪಾಲ, ಅಸಿಸ್ಟಂಟ್ ಫೈರ್ ಸ್ಟೇಷನ್ ಆಫೀಸರ್
    3. ಕುರುಬರು ರೇವಣ್ಣ ಸಿದ್ದಪ್ಪ, ಲೀಡಿಂಗ್ ಫೈರ್​ಮ್ಯಾನ್
    4. ಮೊಯ್ದುಕುಂಌ ಕುಂಟಪದವು, ಫೈರ್​ಮ್ಯಾನ್

    ರಾಷ್ಟ್ರಪತಿಯವರ ಹೋಮ್ ಗಾರ್ಡ್ಸ್​ ಮತ್ತು ಸಿವಿಲ್ ಡಿಫೆನ್ಸ್ ಮೆಡಲ್ ಫಾರ್​ ಡಿಸ್ಟಿಂಗ್​ವಿಷ್ಡ್ ಸರ್ವೀಸ್ ವಿಜೇತರು
    1. ಎಸ್.ಮುರುಗೇಶನ್, ಯುನಿಟ್​ ಆಫೀಸರ್ (ಹೋಮ್​ ಗಾರ್ಡ್ಸ್​)
    2. ಕೆ.ರಾಜಾಪೀರ್​ ಪ್ಲಟೂನ್​ ಕಮಾಂಡರ್ (ಹೋಮ್​ ಗಾರ್ಡ್ಸ್​)
    3. ಹನುಮಂತರಾಯ ಈರಣ್ಣ ಇಲಗೇರ್​, ಕಂಪನಿ ಸಾರ್ಜೆಂಟ್ ಮೇಜರ್ (ಹೋಮ್​ ಗಾರ್ಡ್ಸ್)
    4. ಡಾ.ಬಿ.ಎಚ್​.ವೀರಪ್ಪ, ಕಮಾಂಡೆಂಟ್ ( ಹೋಮ್ ಗಾರ್ಡ್ಸ್)
    5. ಇಮ್ತಿಯಾಜ್​ ಅಲ್ಲಾಬಕ್ಷ್ ಕಮದೋಡ್, ಡ್ರೈವರ್ (ಹೋಮ್​ ಗಾರ್ಡ್ಸ್​)
    6. ಹುಲ್ಲನಸ ತುಳಜನಸ ತುಲಸಿಕಟ್ಟಿ, ಪ್ಲಟೂನ್ ಸಾರ್ಜೆಂಟ್ (ಹೋಮ್ ಗಾರ್ಡ್ಸ್)
    7. ನಂಬೂರ್ ಪಾಂಡುರಂಗ ನಾಗೇಂದ್ರ ಬಾಬು, ಡಿವಿಜನಲ್ ವಾರ್ಡೆನ್ (ಸಿವಿಲ್ ಡಿಫೆನ್ಸ್) 

    (ಏಜೆನ್ಸೀಸ್) 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts