More

    ಅಡಕೆ ತೋಟಕ್ಕೆ ಹಂದಿಗಳ ಕಾಟ

    ಸಿದ್ದಾಪುರ: ತಾಲೂಕಿನ ಕಲ್ಮನೆ, ಹೊನ್ನೆಹದ್ದ ಮತ್ತಿತರ ಕಡೆಗಳಲ್ಲಿ ಒಂದು ವಾರದಿಂದ ಕಾಡು ಹಂದಿಗಳು ಅಡಕೆ ತೋಟಕ್ಕೆ ನುಗ್ಗಿ, ನೂರೈವತ್ತಕ್ಕೂ ಹೆಚ್ಚು ಸಸಿಗಳನ್ನು ನಾಶಪಡಿಸಿವೆ. ಇದರಿಂದ ಬೆಳೆಗಾರರು ಸಂಕಷ್ಟ ಅನುಭವಿಸುವಂತಾಗಿದೆ.

    ಕಲ್ಮನೆಯ ಕೇಶವ ಗೌಡ, ನರಹರಿ ಹೆಗಡೆ, ರಾಘವ ಹೆಗಡೆ, ನಂದ ಹೆಗಡೆ, ಹೊನ್ನೆಹದ್ದದ ಸಂತೋಷ ಹೆಗಡೆ ಅವರ ಅಡಕೆ ತೋಟದಲ್ಲಿ ಆಳೆತ್ತರಕ್ಕೆ ಬೆಳೆದ, ಒಂದೆರಡು ವರ್ಷದ ಅಡಕೆ ಸಸಿಗಳನ್ನು ಹಂದಿಗಳು ನಾಶಪಡಿಸಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಬೆಳೆ ಹಾನಿ ಪರಿಶೀಲಿಸಿ ಪಂಚನಾಮೆ ನಡೆಸಿ ಇ-ಪರಿಹಾರ ತಂತ್ರಾಶ ಮೂಲಕ ಬೆಳೆಗಾರರಿಂದ ಅರ್ಜಿ ಪಡೆದಿದ್ದಾರೆ.

    ಶಾಶ್ವತ ಪರಿಹಾರ ನೀಡಿ: ನಾಲ್ಕು ವರ್ಷಗಳ ಹಿಂದೆ ಅಡಕೆ ತೋಟಕ್ಕೆ ಕಾಡು ಹಂದಿಗಳು ನುಗ್ಗಿ ನೂರಕ್ಕೂ ಹೆಚ್ಚು ಅಡಕೆ ಸಸಿಗಳನ್ನು ನಾಶಪಡಿಸಿದ್ದವು. ಅಂತಹ ಸ್ಥಳದಲ್ಲಿ ಪುನಃ ಸಸಿ ನೆಟ್ಟು ಬೆಳೆಸಲಾಗಿತ್ತು. ಸಸಿ ಬೆಳೆಯುತ್ತಿರುವ ಸಂದರ್ಭದಲ್ಲಿ ಪುನಃ ಕಾಡು ಹಂದಿಗಳ ಹಿಂಡು ನುಗ್ಗಿ ಅಡಕೆ ಸಸಿಗಳನ್ನು ನಾಶಪಡಿಸಿವೆ. ಹೀಗಾದರೆ, ಹೇಗೆ ಬೆಳೆ ರಕ್ಷಿಸಿಕೊಳ್ಳಬೇಕು. ಸರ್ಕಾರದ ಪರಿಹಾರ ಸಾಕಾಗುವುದಿಲ್ಲ. ಶಾಶ್ವತ ಪರಿಹಾರ ನೀಡುವುದಕ್ಕೆ ಇಲಾಖೆ ಅಧಿಕಾರಿಗಳು ಮುಂದಾಗಬೇಕು. ಜನಪ್ರತಿನಿಧಿಗಳು ಈ ಕುರಿತು ಹೆಚ್ಚು ಗಮನ ನೀಡಬೇಕೆಂದು ಕಲ್ಮನೆ ಊರಿನ ಬೆಳೆಗಾರರು ಆಗ್ರಹಿಸಿದ್ದಾರೆ.

    ಸಿದ್ದಾಪುರ ತಾಲೂಕಿನ ಹಲವೆಡೆ ಕಾಡುಪ್ರಾಣಿಗಳ ಹಾವಳಿಗೆ ವಿವಿಧ ಬೆಳೆ ನಾಶವಾಗುತ್ತಿವೆ. ಸೂಕ್ತ ಪರಿಹಾರ ನೀಡುವ ಜತೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಅರಣ್ಯ ಇಲಾಖೆಯನ್ನು ಆಗ್ರಹಿಸಲಾಗಿದೆ. ಆದರೆ, ನೀಡಬೇಕಾದ ಪರಿಹಾರವೂ ಸರಿಯಾಗಿ ಬರುತ್ತಿಲ್ಲ. ಐದಾರು ತಿಂಗಳು ಆಗುತ್ತಿದೆ. ಪರಿಹಾರವನ್ನು ವಾರದೊಳಗೆ ನೀಡುವಂತಾಗಬೇಕು.

    | ಶ್ರೀಪತಿ ಹೆಗಡೆ ಕಲ್ಮನೆ, ಬೆಳೆಗಾರ

    ಬೆಳೆ ಹಾನಿಯಾದ ಕುರಿತು ಇ-ಪರಿಹಾರ ತಂತ್ರಾಂಶ ಮೂಲಕ ಅರ್ಜಿ ಪಡೆದು ಪರಿಶೀಲಿಸಿ ಪರಿಹಾರ ನೀಡಲಾಗುತ್ತಿದೆ. ಶೇ. 90ರಷ್ಟು ಬೆಳೆಗಾರರಿಗೆ ಪರಿಹಾರ ನೀಡಲಾಗಿದೆ. ಅನುದಾನ ಕೊರತೆ ಇದ್ದಾಗ ರೈತರಿಗೆ ಪರಿಹಾರ ಹಣ ಜಮೆಯಾಗುವುದು ತಡವಾಗುತ್ತಿದೆ.

    | ಶಿವಾನಂದ ನಿಂಗಾಣಿ, ಸಿದ್ದಾಪುರ ಆರ್​ಎಫ್​ಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts