More

    ಸರಗಳ್ಳನನ್ನು ಬೆನ್ನಟ್ಟಿ ಹೋಗಿ ಹಿಡಿದ ಆಟೋ ಡ್ರೈವರ್

    ಬೆಂಗಳೂರು: ನಗರದಲ್ಲಿ ಒಂಟಿ ಮಹಿಳೆಯ ಸರ ಕದ್ದು ಓಡಿಹೋಗುತ್ತಿದ್ದ ಖದೀಮನೊಬ್ಬ, ಆಟೋ ಚಾಲಕನ ಸಮಯಪ್ರಜ್ಞೆಯಿಂದ ರೆಡ್​ ಹ್ಯಾಂಡೆಡ್​ ಆಗಿ ಸಿಕ್ಕಿಬಿದ್ದಿದ್ದಾನೆ. ಹೀಗೆ ಕಳ್ಳನ ಬೆನ್ನಟ್ಟಿ ಹೋಗಿ ಹಿಡಿದ ಆಟೋ ಡ್ರೈವರ್​ ರುದ್ರೇಶ್​ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಸರಗಳ್ಳನಾದ 24 ವರ್ಷದ ಕೇಶವ್​ನನ್ನು ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

    ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಬಾಣಾವರದಲ್ಲಿ ಇಂದು ಈ ಘಟನೆ ನಡೆದಿದೆ. ಸರಗಳ್ಳ ಕೇಶವ್​, ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಒಂಟಿ ಮಹಿಳೆಯ ಕತ್ತಿನಿಂದ ಸರ ಕಸಿದು ಎಸ್ಕೇಪ್ ಆಗುತ್ತಿದ್ದ. ಇದನ್ನು ಗಮನಿಸಿದ ಆಟೋ ಡ್ರೈವರ್​ ರುದ್ರೇಶ್​, ಆರೋಪಿಯನ್ನು ಎರಡು ಕಿಲೋಮೀಟರ್ ಚೇಸ್ ಮಾಡಿ ಹಿಡಿದಿದ್ದಾರೆ. ಕಳ್ಳನನ್ನು ವಶಕ್ಕೆ ಪಡೆದ ಪೊಲೀಸರು, 40 ಸಾವಿರ ರೂಪಾಯಿ ಮೌಲ್ಯದ 9.5 ಗ್ರಾಂ ತೂಕದ ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದಾರೆ.

    ಇದನ್ನೂ ಓದಿ: ಕಾರಿನೊಳಗೇ ಐಪಿಎಲ್‌ನಲ್ಲಿ ಮುಳುಗಿದ ಬಿಎಸ್‌ವೈ- ರೋಚಕ ಪಂದ್ಯ ಸವಿದ ಮಾಜಿ ಸಿಎಂ

    ಆಟೋ ಡ್ರೈವರ್ ರುದ್ರೇಶ್ ಕಾರ್ಯಕ್ಕೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸೂಕ್ತ ಬಹುಮಾನ ನೀಡುವಂತೆ ಉತ್ತರ ವಿಭಾಗದ ಡಿಸಿಪಿಗೆ ಸೂಚನೆ ನೀಡಿದ್ದಾರೆ.

    ಖರ್ಚಿಗಾಗಿ ಕಳ್ಳತನ: ಪಿಯುಸಿ ವ್ಯಾಸಂಗ ಮಾಡಿ ಸೆಕ್ಸಸ್ ಹೆಲ್ತ್ ಕೇರ್​​ನಲ್ಲಿ ಹೋಮ್ ನರ್ಸಿಂಗ್ ಕೆಲಸ ಮಾಡಿಕೊಂಡಿದ್ದ ಆರೋಪಿ ಕೇಶವ್​, ಕಳೆದ ಒಂದು ತಿಂಗಳ ಹಿಂದೆ ಕೆಲಸ ಬಿಟ್ಟಿದ್ದ. ಖರ್ಚಿಗೆ ಹಣವಿಲ್ಲದೆ ಸುಲಭವಾಗಿ ಹಣ ಗಳಿಸಲು ಕಳ್ಳತನದ ದಾರಿ ಹಿಡಿದಿದ್ದ. ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಸರಗಳ್ಳತನ ಮಾಡುತ್ತಿದ್ದ ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ.

    ಬಂಟ್ವಾಳದಲ್ಲಿ ಬಾಲಕಿಯ ಗ್ಯಾಂಗ್​ರೇಪ್​: ಇಬ್ಬರು ಆರೋಪಿಗಳು ಪೊಲೀಸರ ವಶಕ್ಕೆ

    ರಸ್ತೆಯಿಂದ ಇಳಿದು ಗದ್ದೆಗೆ ನುಗ್ಗಿದ ಸರ್ಕಾರಿ ಬಸ್; ವಿದ್ಯಾರ್ಥಿಗಳೇ ತುಂಬಿದ್ದರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts