More

    ಲೇಖಕ ನಂದೀಶ್ ಬಂಕೇನಹಳ್ಳಿ ಅವರ ಕಣ್ಣ ಕನ್ನಡಿಯಲ್ಲಿ ಭಾಗ-1 ಬಿಡುಗಡೆ

    ಮೂಡಿಗೆರೆ: ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಲೇಖಕ ನಂದೀಶ್ ಬಂಕೇನಹಳ್ಳಿ ಅವರ ‘ಕಣ್ಣ ಕನ್ನಡಿಯಲ್ಲಿ ಭಾಗ 1’ ಕೃತಿಯನ್ನು ಲೇಖಕ, ಸಂಶೋಧಕ ಡಾ. ಪ್ರದೀಪ್ ಕೆಂಜಿಗೆ ಬಿಡುಗಡೆಗೊಳಿಸಿದರು.
    ಪುಸ್ತಕ ಬಿಡುಗಡೆ ನಂತರ ಲೇಖಕ ನಂದೀಶ್ ಬಂಕೇನಹಳ್ಳಿ ಮಾತನಾಡಿ, ಎರಡು ವರ್ಷ ದಿನಪತ್ರಿಕೆಯೊಂದಕ್ಕೆ ಬರೆದ ಅಂಕಣ ಬರಹಗಳ ಕೃತಿಯಾಗಿದೆ. ಇದರಲ್ಲಿ ಸ್ಮಶಾನ ಕಾಯುವವರು, ಪೋಸ್ಟ್ ಮಾರ್ಟಂ ಮಾಡುವವರು, ಸೂಲಗಿತ್ತಿಯರು, ಅಂಬುಲೆನ್ಸ್ ಚಾಲಕರು, ನದಿ ಮುಂತಾದ ಕಡೆಗಳಲ್ಲಿ ಸಿಗುವ ಮೃತ ದೇಹಗಳನ್ನು ಹೊರತೆಗೆಯುವವರು, ಮಂಗಳಮುಖಿಯರು ಸೇರಿದಂತೆ ಜನಸಾಮಾನ್ಯರ ಬದುಕಿನ ವಿವರಗಳು ತಿಳಿಸಲಾಗಿದೆ. ಪೋಟೊಗ್ರಾಪರ್‌ಗಳು, ಮಡಿಕೆ ಮಾಡುವವರು, ತೊಗಲು ಗೊಂಬೆ ಆಡಿಸುವವರು, ಕಲಾಯಿ ಹಾಕುವವರು ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳ ಬದುಕಿನ ಚಿತ್ರಣಗಳನ್ನು ಈ ಕೃತಿಯಲ್ಲಿ ಕಾಣಬುದಾಗಿದೆ.
    ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸಮ್ಮೇಳನಾಧ್ಯಕ್ಷ ಹಳೆಕೋಟೆ ರಮೇಶ್, ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್, ತಾಲೂಕು ಅಧ್ಯಕ್ಷ ಎಚ್.ಎಂ.ಶಾಂತಕುಮಾರ್, ಕರ್ನಾಟಕ ಬೆಳೆಗಾರರ ಸಂಘದ ಅಧ್ಯಕ್ಷ ಡಾ.ಎನ್.ಕೆ.ಪ್ರದೀಪ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಹಳಸೆ ಶಿವಣ್ಣ, ಕೃಷಿಕ ವಿಜಯ ಅಂಗಡಿ, ಮೈಸೂರು ವಿವಿ ಭಾಷಾಂತರ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಅವರೆಕಾಡು ವಿಜಯಕುಮಾರ್, ಪ್ರಗತಿಪರ ಕೃಷಿಕ ಚಂದ್ರಶೇಖರ ನಾರಾಯಣಪುರ, ಡಿ.ಕೆ.ಲಕ್ಷ್ಮಣಗೌಡ, ಹೊರಟ್ಟಿ ರಘು, ಬಿ.ಎಸ್.ಜಯರಾಮ್, ಜೆ.ಎಸ್.ರಘು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts