More

    ಸೂಪರ್ ಜೈಂಟ್ಸ್ ಓಟಕ್ಕೆ ಬ್ರೇಕ್ ಹಾಕಿದ ಕ್ಯಾಪಿಟಲ್ಸ್: ಅಂಕಪಟ್ಟಿಯಲ್ಲಿ ಕುಸಿತ ಕಂಡ ಆರ್‌ಸಿಬಿ

    ಲಖನೌ: ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ (20ಕ್ಕೆ 3) ಬಿಗಿ ಬೌಲಿಂಗ್ ದಾಳಿ ಮತ್ತು ಜೇಕ್ ಫ್ರೇಸರ್ ಮೆಕ್‌ಗುರ್ಕ್ (55 ರನ್, 35 ಎಸೆತ, 2 ಬೌಂಡರಿ, 5 ಸಿಕ್ಸರ್) ಪದಾರ್ಪಣೆಯ ಪಂದ್ಯದಲ್ಲೇ ನಡೆಸಿದ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಐಪಿಎಲ್-17ರಲ್ಲಿ ಆತಿಥೇಯ ಲಖನೌ ಸೂಪರ್‌ಜೈಂಟ್ಸ್ ಎದುರು 6 ವಿಕೆಟ್‌ಗಳಿಂದ ಗೆಲುವು ದಾಖಲಿಸಿದೆ. ಇದರೊಂದಿಗೆ ರಿಷಭ್ ಪಂತ್ ಪಡೆ ಅಂಕಪಟ್ಟಿಯಲ್ಲಿ 9ನೇ ಸ್ಥಾನಕ್ಕೇರಿದ್ದು, ಆರ್‌ಸಿಬಿ ಕೊನೇ ಸ್ಥಾನಕ್ಕೆ ಕುಸಿದಿದೆ. ಸತತ 3 ಗೆಲುವಿನ ಬಳಿಕ ಟೂರ್ನಿಯಲ್ಲಿ 2ನೇ ಸೋಲುಂಡ ಕೆಎಲ್ ರಾಹುಲ್ ಬಳಗ 4ನೇ ಸ್ಥಾನಕ್ಕಿಳಿದಿದೆ.

    ಏಕನಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಲಖನೌ ಅಗ್ರ ಕ್ರಮಾಂಕಕುಲದೀಪ್ ದಾಳಿಗೆ ಲಯ ತಪ್ಪಿತು. ಆಗ ಯುವ ಬ್ಯಾಟರ್ ಆಯುಷ್ ಬಡೋನಿ (55* ರನ್, 35 ಎಸೆತ, 5 ಬೌಂಡರಿ, 5 ಸಿಕ್ಸರ್) ಹಾಗೂ ಅರ್ಷದ್ ಖಾನ್ (20) ಜೋಡಿ ದಿಟ್ಟ ಜತೆಯಾಟದ ನೆರವಿನಿಂದ ಲಖನೌ 7 ವಿಕೆಟ್‌ಗೆ 167 ರನ್‌ಗಳ ಪೈಪೋಟಿಯುತ ಮೊತ್ತ ಪೇರಿಸಿತು. ಪ್ರತಿಯಾಗಿ ಜೇಕ್ ಫ್ರೇಸರ್ ಮೆಕ್‌ಗುರ್ಕ್ ನಾಯಕ ರಿಷಭ್ ಪಂತ್ (41) ಜತೆಯಾಟದ ಬಲದಿಂದ ಡೆಲ್ಲಿ,18.1 ಓವರ್‌ಗಳಲ್ಲಿ 4 ವಿಕೆಟ್‌ಗೆ 170 ರನ್‌ಗಳಿಸಿ ಜಯದ ಹಳಿಗೆ ಮರಳಿತು.

    ಪ್ರೇಸರ್-ರಿಷಭ್ ಗೆಲುವಿನ ಆಟ: ಡೇವಿಡ್ ವಾರ್ನರ್ (8) ವಿಕೆಟ್ ಬೇಗನೆ ಕಳೆದುಕೊಂಡ ಡೆಲ್ಲಿ ಆರಂಭಿಕ ಆಘಾತ ಕಂಡಿತು. ಪೃಥ್ವಿ ಷಾ (32) ಹಾಗೂ ಜೇಕ್ ಫ್ರೇಸರ್ ಮೆಕ್‌ಗುರ್ಕ್ ಜೋಡಿ ಉತ್ತಮ ಅಡಿಪಾಯ ಹಾಕಿಕೊಟ್ಟಿತು. ಸಿಕ್ಸರ್‌ನೊಂದಿಗೆ ಐಪಿಎಲ್‌ನಲ್ಲಿ ಖಾತೆ ತೆರೆದ ಆಸೀಸ್ ಬ್ಯಾಟರ್ ಜೇಕ್ ಫ್ರೇಸರ್ ಮೆಕ್‌ಗುರ್ಕ್ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಇವರಿಗೆ ಪೃಥ್ವಿ ಷಾ ಬೆಂಬಲ ಒದಗಿಸಿದರು. ಇವರಿಬ್ಬರು 21 ಎಸೆತಗಳಲ್ಲಿ 39 ರನ್‌ಗಳಿಸಿದರು. ಪೃಥ್ವಿ ಷಾ ನಿರ್ಗಮನದ ಬಳಿಕ ಜತೆಯಾದ ರಿಷಭ್ ಪಂತ್ ಹಾಗೂ ಜೇಕ್ ಫ್ರೇಸರ್ ಮೆಕ್‌ಗುರ್ಕ್ಖನೌ ಬೌಲರ್‌ಗಳನ್ನು ದಂಡಿಸಿದರು. ಇವರಿಬ್ಬರು 3ನೇ ವಿಕೆಟ್‌ಗೆ 46 ಎಸೆತದಲ್ಲಿ 77 ರನ್ ಕಸಿದರು. 31 ಎಸೆತದಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿದ 22 ವರ್ಷದ ಜೇಕ್ ಫ್ರೇಸರ್ ಮೆಕ್‌ಗುರ್ಕ್ ಚೇಸಿಂಗ್‌ಗೆ ಬಲ ತುಂಬಿದರು. ಕೊನೆಗೆ ಟ್ರಿಸ್ಟಾನ್ ಸ್ಟಬ್ಸ್ (15) ಹಾಗೂ ಶೈ ಹೋಪ್ (11*) 11 ಎಸೆತ ಬಾಕಿಯಿರುವಂತೆಯೇ ಡೆಲ್ಲಿಗೆ ಗೆಲುವು ತಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts