More

    ವಿಶೇಷ ವಿಮಾನಗಳ ಮೂಲಕ ಆಸ್ಟ್ರೇಲಿಯಾ ಕನ್ನಡಿಗರು ವಾಪಾಸ್

    ಚಿಕ್ಕಮಗಳೂರು: ಆಸ್ಟ್ರೇಲಿಯಾದಲ್ಲಿರುವ ಕನ್ನಡಿಗರನ್ನು ವಿಶೇಷ ವಿಮಾನಗಳ ಮೂಲಕ ಹಂತ ಹಂತವಾಗಿ ಸ್ವದೇಶಕ್ಕೆ ಕರೆತರಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ತಿಳಿಸಿದರು.

    ಅಲ್ಲಿನ ಕನ್ನಡಿಗರೊಂದಿಗೆ ಶನಿವಾರ ತಮ್ಮ ಗೃಹ ಕಚೇರಿಯಿಂದ ವಿಡಿಯೋ ಸಂವಾದದಲ್ಲಿ ಅವರು ಮಾತನಾಡಿ, ಆಸ್ಟ್ರೇಲಿಯಾಗೆ ಉದ್ಯೋಗ ಅರಸಿ ಹೋದವರು, ಪ್ರವಾಸಿಗರು, ವಿದ್ಯಾರ್ಥಿಗಳ ಜತೆ ಕರೊನಾ ಸಂಕಷ್ಟದ ಜತೆಗೆ ಕನ್ನಡ ಭಾಷೆ ಅಭಿವೃದ್ಧಿ ಕುರಿತು ರ್ಚಚಿಸಿದರು.

    ಆಸ್ಟ್ರೇಲಿಯಾದ 1,500ಕ್ಕೂ ಹೆಚ್ಚು ಕನ್ನಡಿಗರು ಸ್ವದೇಶಕ್ಕೆ ಮರಳಲು ನೋಂದಣಿ ಮಾಡಿಕೊಂಡಿದ್ದಾರೆ. ಅವರನ್ನು ಹಂತ ಹಂತವಾಗಿ ದೇಶಕ್ಕೆ ಕರೆತರಲಾಗುವುದು. ಆಸ್ಟ್ರೇಲಿಯದಲ್ಲಿರುವ ನಮ್ಮ ರಾಯಭಾರ ಕಚೇರಿ ಭಾರತೀಯರ ಆಗುಹೋಗುಗಳಿಗೆ ಸ್ಪಂದಿಸುತ್ತಿದೆ. ಇದಕ್ಕೆ ಕನ್ನಡ ಸಂಘವು ಕೈಜೋಡಿಸಿದೆ. ಖಾಲಿ ಇರುವ ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷ ಸ್ಥಾನಕ್ಕೆ ತುಂಬಲು ಸಿಎಂ ಗಮನಕ್ಕೆ ತರಲಾಗುವುದು ಎಂದರು.

    ಕನ್ನಡ ಓದುಗರ ಅಭಿರುಚಿಗಾಗಿ ವಿದೇಶದಲ್ಲಿರುವ ಸಂಘಗಳ ವಾಚನಾಲಯಗಳಿಗೆ ಕನ್ನಡದ ಹಳೆಯ ಮತ್ತು ನವ್ಯ ಪುಸ್ತಕಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದಿಂದ ನೀಡಲಾಗುವುದು ಎಂದು ಸಚಿವ ಸಿ.ಟಿ.ರವಿ ತಿಳಿಸಿದರು. ಆನ್​ಲೈನ್ ಕನ್ನಡ ಲೈಬ್ರರಿ ಪುಸ್ತಕಗಳನ್ನು ಅಲ್ಲಿನ ಜನರಿಗೆ ಲಭ್ಯವಾಗುವ ರೀತಿಯಲ್ಲಿ ಲಿಂಕ್ ಒದಗಿಸಿ ಪುಸ್ತಕಗಳನ್ನು ಓದಲು ಅವಕಾಶ ಮಾಡಿಕೊಡಲಾಗುವುದು. ಆಸ್ಟ್ರೇಲಿಯಾದಲ್ಲಿ ಕರ್ನಾಟಕವನ್ನು ಬ್ರಾಂಡ್ ಆಗಿ ರೂಪಿಸುವ ಕಾರ್ಯ ಕನ್ನಡಿಗರ ಮೇಲಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts