More

    ಆಗಸ್ಟ್ 6 ಇಲ್ಲವೇ 8ಕ್ಕೆ ಎಸ್ಸೆಸ್ಸೆಲ್ಸಿ ರಿಸಲ್ಟ್

    ಕೊಳ್ಳೇಗಾಲ: ಕರೊನಾ ಆತಂಕದ ನಡುವೆಯೂ 2019-20ನೇ ಸಾಲಿನ ಹತ್ತನೇ ತರಗತಿ ಪರೀಕ್ಷೆ ಬರೆದ 8.5 ಲಕ್ಷ ವಿದ್ಯಾರ್ಥಿಗಳ ಫಲಿತಾಂಶ ಆಗಸ್ಟ್​ 6 ಅಥವಾ 8ಕ್ಕೆ ಪ್ರಕಟವಾಗಲಿದೆ.

    ಎಸ್​ಎಸ್ಎಲ್​ಸಿ ಪರೀಕ್ಷೆ ಜುಲೈ 3ರಂದು ಮುಗಿದಿದೆ. ಮೌಲ್ಯಮಾಪನ ಕೂಡ ಬಹುತೇಕ ಮುಗಿದಿದೆ. ಆಗಸ್ಟ್ 6ರಿಂದ 8ನೇ ತಾರೀಖಿನೊಳಗೆ ಫಲಿತಾಂಶ ಹೊರಬೀಳಲಿದೆ ಎಂದು ಶಿಕ್ಷಣ ಸಚಿವ ಎಸ್​. ಸುರೇಶ್ ಕುಮಾರ್ ಹೇಳಿದರು.

    ಇದನ್ನೂ ಓದಿರಿಒಂದು ಸಾವಿರ ಕರೊನಾ ಸೋಂಕಿತರಿಗೆ ಆಯುರ್ವೇದ ಚಿಕಿತ್ಸೆ: ಡಾ.ಗಿರಿಧರ್ ಕಜೆ 

    ನಮ್ಮಲ್ಲಿ ಡಿಎಸ್​ಇಆರ್​ಟಿ ಇದೆ. ಟೆಕ್ಟ್ ಬುಕ್ ಕಮಿಟಿಯಿದೆ. ಪ್ರತಿ ವರ್ಷ 240 ದಿನ ಶೈಕ್ಷಣಿಕ ವರ್ಷವಿತ್ತು. ಈ ಬಾರಿ 120ರಿಂದ 140 ದಿನ ಸಿಗುತ್ತೆ ಅಷ್ಟೆ. ಹಾಗಾಗಿ ಶೇ.30 ಪಠ್ಯ ತೆಗೆಯಲು ನಿರ್ಧಾರ ಮಾಡಿದ್ದಾರೆ. ಪಠ್ಯ ತೆಗೆಯುವ ವಿಚಾರವನ್ನು ಈಗಾಗ್ಲೇ ಅಪ್ಲೋಡ್ ಮಾಡಿದ್ದಾರೆ. ಈ ವಿಚಾರದಲ್ಲಿ ಕೆಲವರಿಗೆ ನೋವಾಗಿದೆ. ಆ ವಿಷಯ ತೆಗೆದಿದ್ದಾರೆ. ಈ ವಿಷಯ ತೆಗೆದಿದ್ದಾರೆ ಎಂಬ ಸುದ್ದಿ ಮಾಧ್ಯಮದಲ್ಲೂ ಬಂದಿದೆ. ಸದ್ಯಕ್ಕೆ ಪಠ್ಯ ಕೈ ಬಿಡುವ ವಿಚಾರವನ್ನು ತಡೆಹಿಡಿದಿದ್ದೇವೆ. ವೈಜ್ಞಾನಿಕ ಆಧಾರದ ಮೇಲೆ ಯಾವ ರೀತಿ ಮಾಡಬೇಕು ಎಂದು ನಿರ್ಧರಿಸುವುದಾಗಿ ಸುರೇಶ್ ಕುಮಾರ್​ ತಿಳಿಸಿದರು.

    ಖಾಸಗಿ ಆಸ್ಪತ್ರೆಗಳ ವಸೂಲಿ ದಂಧೆಗೆ ಬ್ರೇಕ್​ ಹಾಕಲು ಐಪಿಎಸ್​ ಅಧಿಕಾರಿ ಡಿ. ರೂಪಾ ಟೀಂ ಸಜ್ಜು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts