More

    ಬಲೂಚಿಸ್ತಾನದಲ್ಲಿ ದಾಳಿ: ಇರಾನ್‌ನಲ್ಲಿನ ರಾಯಭಾರಿಯನ್ನು ವಾಪಸು ಕರೆಸಿಕೊಂಡ ಪಾಕ್

    ನವದೆಹಲಿ: ಇರಾನ್‌ನ ಡ್ರೋನ್‌ಗಳು ಮತ್ತು ಕ್ಷಿಪಣಿಗಳು ಬಲೂಚಿಸ್ತಾನ್ ಪ್ರಾಂತ್ಯದ ಮೇಲೆ ದಾಳಿ ಮಾಡಿದ ಒಂದು ದಿನದ ನಂತರ ಪಾಕಿಸ್ತಾನವು ಬುಧವಾರ ಇರಾನ್‌ನಲ್ಲಿ ತನ್ನ ರಾಯಭಾರಿಯನ್ನು ಹಿಂದಕ್ಕೆ ಕರೆಸಿಕೊಂಡಿದೆ. ಇದಲ್ಲದೆ, ಪ್ರಸ್ತುತ ಪಾಕಿಸ್ತಾನದಲ್ಲಿರುವ ಇರಾನ್ ರಾಯಭಾರಿಯನ್ನೂ ವಾಪಸ್​ ಹೋಗುವಂತೆ ಸೂಚಿಸಿದೆ.

    ಮಂಗಳವಾರ ತಡರಾತ್ರಿ, ಪಾಕಿಸ್ತಾನದ ಪ್ರಕ್ಷುಬ್ಧ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಉಗ್ರಗಾಮಿ ಸಂಘಟನೆ ಜೈಶ್ ಉಲ್-ಅದ್ಲ್‌ನ ಎರಡು ನೆಲೆಗಳ ಮೇಲೆ ಇರಾನ್​ ದಾಳಿ ನಡೆಸಿದೆ ಎಂದು ಇರಾನ್​ ಸರ್ಕಾರಿ ಮಾಧ್ಯಮ ವರದಿ ಮಾಡಿದೆ. ಈ ದಾಳಿಯಲ್ಲಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನವು ದಾಳಿಯನ್ನು ದೃಢಪಡಿಸಿದೆ.

    ಪಾಕಿಸ್ತಾನದ ವಿದೇಶಾಂಗ ಕಚೇರಿಯು ದಾಳಿಯನ್ನು ಬಲವಾಗಿ ಖಂಡಿಸಿದೆ, ಇದು ಇರಾನ್‌ನಿಂದ “ಅದರ ವಾಯುಪ್ರದೇಶದ ಅಪ್ರಚೋದಿತ ಉಲ್ಲಂಘನೆ” ಎಂದು ಟೀಕಿಸಿದೆ.

    “ಪಾಕಿಸ್ತಾನವು ತನ್ನ ಸಾರ್ವಭೌಮತ್ವದ ಉಲ್ಲಂಘನೆಯನ್ನು ತೀವ್ರವಾಗಿ ಪ್ರತಿಭಟಿಸುತ್ತದೆ, ಇದು “ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ” ಮತ್ತು “ಗಂಭೀರ ಪರಿಣಾಮಗಳನ್ನು” ಹೊಂದಿರಬಹುದು ಎಂದು ವಿದೇಶಾಂಗ ಕಚೇರಿ ಹೇಳಿದೆ.

    ಇರಾನ್‌ನ ದಾಳಿಯನ್ನು “ಕಾನೂನುಬಾಹಿರ ಕೃತ್ಯ” ಎಂದು ಖಂಡಿಸಿದ ಪಾಕಿಸ್ತಾನ, ಟೆಹ್ರಾನ್‌ನಲ್ಲಿರುವ ಇರಾನ್ ವಿದೇಶಾಂಗ ಸಚಿವಾಲಯದ ಹಿರಿಯ ಅಧಿಕಾರಿಗೆ ಬಲವಾದ ಪ್ರತಿಭಟನೆಯನ್ನು ಸಲ್ಲಿಸಿದೆ ಎಂದು ಹೇಳಿದೆ.

    ಜೈಶ್ ಉಲ್-ಅದ್ಲ್ ಈ ಹಿಂದೆ ಪಾಕಿಸ್ತಾನದ ಗಡಿ ಪ್ರದೇಶದಲ್ಲಿ ಇರಾನ್ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಿತ್ತು ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.

    ಸೋಮವಾರ, ಇರಾನ್‌ನ ರೆವಲೂಶನರಿ ಗಾರ್ಡ್‌ಗಳು ಇರಾಕ್ ಮತ್ತು ಸಿರಿಯಾದಲ್ಲಿನ ಗುರಿಗಳ ಮೇಲೆ ಕ್ಷಿಪಣಿಗಳೊಂದಿಗೆ ದಾಳಿ ಮಾಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts