More

    ಲಾಕ್‌ಡೌನ್ ವೇಳೆ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಿತ್ತು

    ಚಿತ್ರದುರ್ಗ: ಕರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಾಗಿತ್ತೆಂದು ರಾಜ್ಯಮಹಿಳಾ ಆಯೋಗದ ಅಧ್ಯಕ್ಷರಾದ ಆರ್.ಪ್ರಮೀಳಾ ನಾಯ್ಡು ಕಳವಳ ವ್ಯಕ್ತಪಡಿಸಿದರು.

    ಜಿಪಂದಲ್ಲಿ ಶುಕ್ರವಾರ ರಾಜ್ಯಮಹಿಳಾ ಆಯೋಗ,ಸಮಗ್ರ ಮಕ್ಕಳ ರಕ್ಷಣೆ ಮೊದಲಾ ದ ಸಂಸ್ಥೆಗಳ ಆಶ್ರಯದಲ್ಲಿ ಮಹಿಳೆಯರು,ಮಕ್ಕಳ ಹಕ್ಕುಗಳು ಮತ್ತು ಕಾನೂನುಗಳ ಅನುಷ್ಠಾನದಲ್ಲಿ ಪೊಲೀಸ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳ ಪಾತ್ರ ಕುರಿತು ಏರ್ಪಡಿಸಿದ್ದ 2 ದಿನದ ಕಾರ‌್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

    ಒಂದೆಡೆ ಲಾಕ್‌ಡೌನ್‌ನಿಂದ ಅನೇಕ ಮಹಿಳೆಯರು ಕೆಲಸ ಕಳೆದುಕೊಂಡಿದ್ದು,ಮತ್ತೊಂದೆಡೆ ಕೌಟುಂಬಿಕ ದೌರ್ಜನ್ಯಗಳೂ ಹೆಚ್ಚಿನ ಸಂಖ್ಯೆಯಲ್ಲಿ ನಡೆದಿವೆ. ವರ್ಕ್‌ಫ್ರಂ ಹೋಂ ವೇಳೆಯಲ್ಲೂ ಅನೇಕರು ಲೈಂಗಿಕ ಕಿರುಕುಳಕ್ಕೆ ಒಳಗಾಗಬೇಕಾಯಿತು. ಕೋವಿಡ್ ಚಿಕಿತ್ಸೆ ಸಂದರ್ಭದಲ್ಲೂ ಹಲವರು ತೊಂದರೆಗಳನ್ನು ಅನುಭವಿಸಿದ್ದಾರೆ.
    ಜವಾಬ್ದಾರಿ ಸ್ಥಾನದಲ್ಲಿರುವ ಎಲ್ಲ ಇಲಾಖೆ ಅಧಿಕಾರಿಗಳು ದೌರ್ಜನ್ಯಗಳ ನಿಯಂತ್ರಣ ಹಾಗೂ ಮಹಿಳೆಯರ ಮತ್ತು ಮಕ್ಕಳ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕಿದ್ದು,ಪೊಲೀಸ್ ಇಲಾಖೆ ಕಾರ್ಯ ಮಹತ್ವದಾಗಿದೆ. ದೂರಿಗೆ ಸೌ ಜನ್ಯ ದಿಂದ ತಕ್ಷಣ ಸ್ಪಂದಿಸ ಬೇಕು. ಶೀಘ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಗೆ ಒಳಪಡಿಸಿದರೆ ಅಪರಾಧಗಳ ಸಂಖ್ಯೆ ನಿಯಂತ್ರಣವಾಗುತ್ತದೆ. ಆಯೋಗದ ಮುಂದೆ ಪ್ರಸ್ತುತ ದಾಖಲಾಗಿರುವ 1389 ಪ್ರಕರಣಗಳಲ್ಲಿ 289 ಇತ್ಯರ್ಥವಾಗಿವೆ,ಚಿತ್ರದುರ್ಗ ಜಿಲ್ಲೆಯಲ್ಲಿ 73 ಬಾಲ್ಯ ವಿವಾಹ ಪ್ರಕರಣಗಳನ್ನು ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ತಡೆಗಟ್ಟಿದ್ದಾರೆ ಎಂದರು.
    ಎಸ್ಪಿ ಜಿ.ರಾಧಿಕಾ ಮಾತನಾಡಿ,ಜಿಲ್ಲೆಯಲ್ಲಿ ಮೊಳಕಾಲ್ಮೂರು ಹಾಗೂ ಚಳ್ಳಕೆರೆ ತಾಲೂಕುಗಳಲ್ಲಿ ಬಾಲ್ಯವಿವಾಹ ಪ್ರಕರಣಗಳು ಗಮನಕ್ಕೆ ಬಂದಿವೆ. ಆದ್ದರಿಂದ ಬಾಲ್ಯವಿವಾಹ ತಡೆಗೆ ಜನ ಜಾಗೃತಿಯ ಅವಶ್ಯವಿದೆ ಎಂದರು. ಬೆಳಗಾವಿಯ ಸ್ಪಂದನಾ ಸಂಸ್ಥೆ ನಿರ್ದೇಶಕಿ ವಿ.ಸುಶೀಲಾ ಮಾತನಾಡಿದರು.

    ಎಎಸ್ಪಿ ಎಂ.ಬಿ.ನಂದಗಾವಿ,ಎಸಿ ವಿ.ಪ್ರಸನ್ನ,ಸಂಪನ್ಮೂಲ ವ್ಯಕ್ತಿಗಳಾದ ಯುನೆಸೆಫ್ ಪ್ರಾದೇಶಿಕ ಸಂಯೋಜಕ ಕೆ.ರಾಘವೇಂದ್ರ ಭಟ್,ಶಿವಮೊಗ್ಗ ಎಸ್‌ಜೆಪಿಯು ಸೋಮಶೇಖರ್,ಎಂಎಕೆಎಎ-ಕರ್ನಾಟಕದ ಸಂಯೋಜಕಿ ಕವಿತಾ ಶ್ರೀನಿವಾಸನ್,ಕೇರ್ ಸಂಸ್ಥೆಯ ಮನೋಹರ್,ಐಜೆಎಂ ಸಂ ಪರ್ಕಾಧಿಕಾರಿ ವಿಲಿಯಂ ಕ್ರಿಸ್ಟೋಫರ್,ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪ್ರಭಾಕರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಕೆ.ಎಸ್.ರಾಜಾನಾಯಕ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts