More

    ಶಾಸಕ ಜಿ.ಪರಮೇಶ್ವರಗೆ ಇಂದು ‘ಅಟವಿಶ್ರೀ‘ ಪ್ರಶಸ್ತಿ ಪ್ರದಾನ: ಶಿವಲಿಂಗ ಸ್ವಾಮೀಜಿ ಮಾಹಿತಿ

    ತುಮಕೂರು: ಮಾಜಿ ಡಿಸಿಎಂ, ಶಾಸಕ ಜಿ.ಪರಮೇಶ್ವರ ಅವರು ‘ಅಟವಿಶ್ರೀ’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇತಿಹಾಸ ಪ್ರಸಿದ್ಧ ಚಿಕ್ಕತೊಟ್ಲುಕೆರೆಯ ಅಟವೀ ಸುಕೇತ್ರದ ಮೂಲ ಗುರುಗಳಾದ ಶ್ರೀ ಅಟವಿ ಮಹಾಶಿವಯೋಗಿಗಳ 121ನೇ ಪುಣ್ಯಸ್ಮರಣೋತ್ಸವ, ಲಕ್ಷದೀಪೋತ್ಸವ ಹಾಗೂ ಅಟವಿಶ್ರೀ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನ.19ರಂದು ಹಮ್ಮಿಕೊಳ್ಳಲಾಗಿದೆ ಎಂದು ಅಟವಿ ಸುಕ್ಷೇತ್ರದ ಶ್ರೀ ಅಟವಿ ಶಿವಲಿಂಗ ಸ್ವಾಮೀಜಿ ಹೇಳಿದರು.

    ಶುಕ್ರವಾರ ಬೆಳಗ್ಗೆ 6 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ಧಾರ್ಮಿಕ ಕಾರ್ಯಕ್ರಮ ನಡೆಯಲಿದ್ದು, ಬೆಳಗ್ಗೆ 11 ರಿಂದ 1.30ರವರೆಗೆ ಧಾರ್ಮಿಕ ಸಮಾರಂಭ ಹಾಗೂ 243ನೇ ಮಾಸಿಕ ಶಿವಾನುಭವ ‘ಅಂಗೈಯಲ್ಲಿ ಅನುಭಾವ ಗೋಷ್ಠಿ’ ನಡೆಯಲಿದೆ. ದಿಂಗಾಲೇಶ್ವರ ಮಠದ ಶ್ರೀ ಕುಮಾರ ದಿಂಗಾಲೇಶ್ವರ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಬೆಟ್ಟದಹಳ್ಳಿ ಗವಿಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ, ಸಿದ್ಧರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಬೆಳ್ಳಾವಿ ಕಾರದೇಶ್ವರ ಮಠದ ವೀರಬಸವ ಸ್ವಾಮೀಜಿ, ಶ್ರೀ ಗದ್ದುಗೇಶ್ವರ ಸ್ವಾಮೀಜಿ ಸೇರಿ ವಿವಿಧ ಮಠಾಧೀಶರು ಭಾಗವಹಿಸಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಅಟವೀ ಶ್ರೀ ಪ್ರಶಸ್ತಿ ಪ್ರದಾನ: ಸಂಜೆ 4.30ಕ್ಕೆ ಕಾರ್ತಿಕ ಲಕ್ಷ ದೀಪೋತ್ಸವ ಹಾಗೂ ಅಟವಿ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಶ್ರೀ ಕುಮಾರ ದಿಂಗಾಲೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಕೊರಟಗೆರೆ ಶಾಸಕ ಹಾಗೂ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಅವರ ಸಮಾಜ ಸೇವೆ ಗುರುತಿಸಿ ಅಟವಿ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು.

    ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸಮಾರಂಭ ಉದ್ಘಾಟಿಸುವರು. ಚಿಕ್ಕೋಡಿ ಸಂಸದ ಅಣ್ಣಾಸಾಹೇಬ್ ಎಸ್.ಜೊಲ್ಲೆ, ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್, ಸಂಸದ ಜಿ.ಎಸ್.ಬಸವರಾಜು, ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಭಾಗವಹಿಸುವರು. ಸಂಜೆ 7ಕ್ಕೆ ಕಾರ್ತಿಕ ಮಾಸದ ಅಂಗವಾಗಿ ಲಕ್ಷ ದೀಪೋತ್ಸವ ಇರುತ್ತದೆ. ನಂತರ ಮಹಾ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ಅಟವೀ ಶಿವಲಿಂಗ ಸ್ವಾಮೀಜಿ ತಿಳಿಸಿದರು.

    ಆಯುರ್ವೇದ ಆಸ್ಪತ್ರೆ ತೆರೆಯುವ ಹಂಬಲ: ಅಟವೀ ಸುಕ್ಷೇತ್ರದಲ್ಲಿ ಗೋಶಾಲೆಯ ಜತೆಗೆ, ವಿದ್ಯಾಸಂಸ್ಥೆ, ವಿದ್ಯಾರ್ಥಿನಿಲಯಗಳನ್ನು ತೆರೆದು ಮಕ್ಕಳಿಗೆ ವಿದ್ಯಾಭ್ಯಾಸ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪಂಚಕರ್ಮ ಚಿಕಿತ್ಸೆಯನ್ನು ಒಳಗೊಂಡ ಆಯುರ್ವೇದ ಆಸ್ಪತ್ರೆ ತೆರೆಯಬೇಕೆಂಬ ಹಂಬಲ ಸ್ವಾಮೀಜಿ ಅವರದ್ದಾಗಿದೆ ಎಂದು ಅಟವಿ ಸುಕ್ಷೇತ್ರದ ಗೋ ಸಂರಕ್ಷಣಾ ಸಮಿತಿ ಅಧ್ಯಕ್ಷ ಟಿ.ಬಿ.ಶೇಖರ್ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts