

ಮಧ್ಯರಾತ್ರಿ ನಿದ್ದೆ ಬರ್ತಿಲ್ವಾ?; ನಿಮ್ಮ ಮಲಗುವ ಕೋಣೆ ವಾಸ್ತು ಪ್ರಕಾರ ಇರಲಿ
ಮಲಗುವ ಮುನ್ನ 30 ನಿಮಿಷ ಮೊಬೈಲ್ ನೋಡಬೇಡಿ
ಗಾಢ ಬಣ್ಣ, ಕೆಂಪು, ಕಪ್ಪು ಬಣ್ಣದ ಗೋಡೆ ಇದ್ರೆ ಮನಸ್ಸಿಗೆ ಕಿರಿಕಿರಿ, ಹೀಗಾಗಿ ನಿಮ್ಮ ಕೋಣೆ ತಿಳಿ ಬಣ್ಣದಲ್ಲಿರಲಿ
ಕೆಲವರಿಗೆ ಮಧ್ಯರಾತ್ರಿ 12ರಿಂದ 2 ಗಂಟೆಯಾದ್ರೂ ನಿದ್ದೆ ಬರೋದಿಲ್ಲ. ಎಷ್ಟೇ ಹೊರಳಾಡಿದ್ರೂ ನಿದ್ದೆ ಕಣ್ಣಿಗತ್ತೊದಿಲ್ಲ. ಇದಕ್ಕೆ ವಾಸ್ತು ದೋಷಗಳು ಕಾರಣ ಇರಬಹುದು. ಹೀಗಾಗಿ, ನೀವು ಮಲಗುವ ವಾತಾವರಣವನ್ನು ಶಾಂತವಾಗಿಟ್ಟುಕೊಳ್ಳಲು ಮತ್ತು ಉತ್ತಮ ನಿದ್ರೆ ಪಡೆಯಲು ಕೆಲವೊಂದು ವಾಸ್ತು ಸಲಹೆಯನ್ನು ಇಲ್ಲಿ ನೀಡಲಾಗಿದೆ.
ನೀವು ಮಲಗುವ ಕೋಣೆಯಲ್ಲಿರುವ ಹಾಸಿಗೆಗೆ ಅಟ್ಯಾಚ್ ಆಗಿರುವ ಬಾಕ್ಸ್ ಅನ್ನು ಸ್ವಚ್ಛವಾಗಿಡಿ. ಹಳೆ ದಾಖಲೆ, ಎಲೆಕ್ಟ್ರಾನಿಕ್ಸ್ ವಸ್ತುಗಳು, ವರ್ಷಗಳಿಂದ ಬಳಸದ ಬಟ್ಟೆಗಳು, ನಿದ್ರೆಯ ಸ್ಥಳದ ಕೆಳಗೆ ಸಂಗ್ರಹವಾಗಿರಬಾರದು. ಹಾಸಿಗೆಯ ಕೆಳಗಿನ ಜಾಗವನ್ನು ಹಾಸಿಗೆಯ ಬಟ್ಟೆಗಳು, ಹೊದಿಕೆಗಳು ಮತ್ತು ನಿಯಮಿತವಾಗಿ ಬಳಸುವ ಗೃಹೋಪಯೋಗಿ ವಸ್ತುಗಳು ಮಾತ್ರ ಇರುವಂತೆ ನೋಡಿಕೊಳ್ಳಿ.
ನೀವು ಮಲಗುವಾಗ ಮೊಬೈಲ್ ಸ್ಕ್ರೀನ್ ನೋಡುವುದು ಅಷ್ಟು ಸರಿಯಲ್ಲ. ಮೆಸೇಜ್‌ಗಳು, ರೀಲ್ಸ್‌ಗಳು, ಇಮೇಲ್ ಎಲ್ಲ ನೋಟಿಫಿಕೇಶನ್ ಆಫ್ ಮಾಡಿ. ಫೋನ್ ಅನ್ನು ನಿಮ್ಮ ತಲೆ ದಿಂಬಿನ ಬಳಿ ಅಥವಾ ಸುಲಭವಾಗಿ ಕೈಗೆ ಸಿಗುವ ಜಾಗದಲ್ಲಿ ಇಡಬೇಡಿ. ಅಲಾರಮ್‌ಗಾಗಿ ಬಳಸುವುದಾದರೆ ಅದನ್ನು ಸ್ವಲ್ಪ ದೂರದಲ್ಲಿರುವ ಮೇಜಿನ ಮೇಲೆ ಇರಿಸಿ.
ಮಲಗುವ ಕೋಣೆಯಲ್ಲಿ ಹಿತವಾದ ಪರಿಮಳವು ನಿದ್ರೆಗೆ ಜಾರಲು ಉತ್ತಮ ವಾತಾವರಣ ನಿರ್ಮಿಸುತ್ತದೆ. ಲ್ಯಾವೆಂಡರ್ ಪರಿಮಳವು ವಿಶ್ರಾಂತಿಗೆ ಹೆಸರುವಾಸಿಯಾಗಿದೆ. ಕೋಣೆಯ ವಾತಾವರಣವು ಸಂಪೂರ್ಣವಾಗಿ ವಿಶ್ರಾಂತಿಯ ಅನುಭವ ನೀಡುವಂತಿರಬೇಕು.
ಇದನ್ನೂ ಓದಿ: ವರ್ಕ್ ಫ್ರಂ ಹೋಂ ಮಾಡ್ತಿದ್ದೀರಾ?; ನಿಮ್ಮ ಮಿನಿ ಆಫೀಸ್ ಹೀಗಿದ್ರೆ ಕೆಲಸದಲ್ಲಿ ಯಶಸ್ಸು ಪಕ್ಕಾ!..Vastu Tips
ಗಾಢ ಬಣ್ಣ, ಕೆಂಪು, ಕಪ್ಪು ಬಣ್ಣದ ಗೋಡೆ ಇದ್ರೆ ಮನಸ್ಸಿಗೆ ಕಿರಿಕಿರಿಯನ್ನುಂಟು ಮಾಡುತ್ತದೆ. ಹೀಗಾಗಿ ನೀವು ಮಲಗುವ ಕೋಣೆಯ ಬಣ್ಣವು ತಿಳಿ ನೀಲಿ, ಹಸಿರು, ಬಿಳಿ ಬಣ್ಣ ಇದ್ದರೆ, ನಿಮ್ಮ ಶಾಂತ ನಿದ್ದೆಗೆ ಒಳ್ಳೆಯದು.
ಮಲಗುವಾಗ ನೀವು ನಿದ್ರಾ ಮಂತ್ರ ಜಪಿಸುವುದು ಸರಿಯಾದ ಕ್ರಮ.. ನಾಳಿನ ಸಮಸ್ಯೆಗಳ ಬಗ್ಗೆ ಯೋಚಿಸುವುದನ್ನು ಬಿಟ್ಟು, ನಿಮ್ಮ ಇಷ್ಟದ ನಿದ್ರಾ ಅಥವಾ ಶಯನ ಮಂತ್ರವನ್ನು ಜಪಿಸಿ. ಇದರೊಂದಿಗೆ ಆ ದಿನ ನಡೆದ ಒಳ್ಳೆಯ ವಿಷಯಗಳ ಬಗ್ಗೆ ಯೋಚಿಸಿ ಕೃತಜ್ಞತಾ ಭಾವವನ್ನು ವ್ಯಕ್ತಪಡಿಸಿ, (ಏಜೆನ್ಸೀಸ್).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು/ ಪಂಚಾಂಗಗಳು/ ನಂಬಿಕೆಗಳು/ ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್ಸೈಟ್ ಜವಾಬ್ದಾರರಾಗಿರುವುದಿಲ್ಲ.