

ನೀವು ವರ್ಕ್ ಫ್ರಂ ಹೋಂನಲ್ಲಿದ್ದರೆ ನೀವು ಕೆಲಸ ಮಾಡುವ ವಾತಾವರಣ ಹೀಗಿರಲಿ
ಪಶ್ಚಿಮ, ನೈಋತ್ಯ ಅಥವಾ ದಕ್ಷಿಣ ದಿಕ್ಕಿನಲ್ಲಿ ನಿಮ್ಮ ಮಿನಿ ಆಫೀಸ್ ಇರಲಿ
ನಿಮ್ಮ ಮಿನಿ ಆಫೀಸ್ಗೆ ತಿಳಿ ಹಸಿರು, ಕ್ರೀಮ್, ಬಿಳಿ ಅಥವಾ ತಿಳಿ ಹಳದಿ ಬಣ್ಣವನ್ನು ಬಳಸಿ
ಕೋವಿಡ್ ನಂತರ ವರ್ಕ್ ಫ್ರಂ ಹೋಂ ಈಗ ಕೆಲವು ಐಟಿ ಕಂಪನಿಗಳಿಗೆ ಖಾಯಂ ಆಗಿ ಬಿಟ್ಟಿದೆ. ಟ್ರಾಫಿಕ್ ಜಂಜಾಟವಿಲ್ಲದೆ ಮನೆಯ ವಾತಾವರಣದಲ್ಲಿ ಕುಳತು ಹಾಯಾಗಿ ಕೆಲಸ ಮಾಡುತ್ತಾ ಕುಟುಂಬದ ಜೊತೆಗೆ ಸಮಯ ಕಳೆಯುತ್ತಿದ್ದಾರೆ. ಆದರೆ, ನೀವು ಕೆಲಸ ಮಾಡುವ ಜಾಗವನ್ನು ವಾಸ್ತು ಪ್ರಕಾರ ಇಟ್ಟುಕೊಳ್ಳಬೇಕಾಗುತ್ತದೆ. ಕೆಲವು ನಿಯಮ ಪಾಲನೆ ಮಾಡಬೇಕಾಗುತ್ತದೆ.
ವಾಸ್ತು ಪ್ರಕಾರ ನಿಮ್ಮ ಮನೆಯ ಆಫೀಸ್ ಯಾವ ದಿಕ್ಕಿನಲ್ಲಿರಬೇಕು. ಮೇಜು ಮತ್ತು ಕುರ್ಚಿಯ ಸ್ಥಾನ ಹೇಗಿರಬೇಕು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಮನೆಯಲ್ಲಿ ಹೋಮ್ ಆಫೀಸ್ ಅನ್ನು ಯಾವಾಗಲೂ ಪಶ್ಚಿಮ, ನೈಋತ್ಯ ಅಥವಾ ದಕ್ಷಿಣ ದಿಕ್ಕಿನಲ್ಲಿ ಇಡಬೇಕು. ಇದರಿಂದ ಕೆಲಸದಲ್ಲಿ ಸ್ಥಿರತೆ ಮತ್ತು ಅನುಕೂಲ ಸಿಗುತ್ತದೆ.
ನಿಮ್ಮ ವರ್ಕ್ ಡೆಸ್ಕ್ ಅನ್ನು ನೈಋತ್ಯ, ಪಶ್ಚಿಮ ಅಥವಾ ದಕ್ಷಿಣ ವಲಯದಲ್ಲಿ ಇಡುವುದು ಉತ್ತಮ. ಇದು ಸ್ಥಿರವಾದ ಕೆಲಸದ ವಾತಾವರಣವನ್ನು ನಿರ್ಮಿಸುತ್ತದೆ.
ಕೆಲಸ ಮಾಡುವಾಗ ಯಾವಾಗಲೂ ಉತ್ತರ ಅಥವಾ ಪೂರ್ವಕ್ಕೆ ಮುಖ ಮಾಡಿ ಕುಳಿತುಕೊಳ್ಳಬೇಕು. ಇದು ಅಭಿವೃದ್ಧಿ ಮತ್ತು ಏಕಾಗ್ರತೆಗೆ ಸಹಕಾರಿಯಾಗಿದೆ.
ಕುರ್ಚಿಯ ಹಿಂದೆ ಯಾವಾಗಲೂ ಗಟ್ಟಿಯಾದ ಗೋಡೆ ಇರಲಿ. ಇದು ನಿಮಗೆ ಭದ್ರತೆಯ ಭಾವನೆಯನ್ನು ನೀಡುತ್ತದೆ.
ಆಫೀಸ್‌ನ ಕಿಟಕಿಗಳು ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಇರುವುದು ಉತ್ತಮ. ಇದರಿಂದ ಕಚೇರಿಗೆ ಹೆಚ್ಚು ನೈಸರ್ಗಿಕ ಬೆಳಕು, ಗಾಳಿ ಸಿಗುತ್ತದೆ.
ಆಫೀಸ್‌ನ ಪ್ರವೇಶದ್ವಾರವು ಉತ್ತರ, ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿದ್ದರೆ ಮಂಗಳಕರವೆಂದು ಪರಿಗಣಿಸಲಾಗುತ್ತದೆ.
ಕಂಪ್ಯೂಟರ್ ಮತ್ತು ಇತರ ವಿದ್ಯುತ್ ಉಪಕರಣಗಳನ್ನು ಆಗ್ನೇಯ ದಿಕ್ಕಿನಲ್ಲಿ ಇಡಬೇಕು, ಏಕೆಂದರೆ ಇದು ಅಗ್ನಿ ಮೂಲೆಯೊಂದಿಗೆ ಸಂಬಂಧ ಹೊಂದಿದೆ.
ಭಾರವಾದ ಕ್ಯಾಬಿನೆಟ್‌ಗಳು ಮತ್ತು ಫೈಲ್‌ಗಳನ್ನು ನೈಋತ್ಯ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇಡಬೇಕು. ಇದರಿಂದ ಜಾಗವು ವ್ಯವಸ್ಥಿತವಾಗಿರುತ್ತದೆ.
ಆಫೀಸ್ ಗೋಡೆಗಳಿಗೆ ತಿಳಿ ಹಸಿರು, ಕ್ರೀಮ್, ಬಿಳಿ ಅಥವಾ ತಿಳಿ ಹಳದಿ ಬಣ್ಣವನ್ನು ಬಳಸಿ. ಇದು ಶಾಂತ ಮತ್ತು ಪ್ರಕಾಶಮಾನ ವಾತಾವರಣವನ್ನು ಸೃಷ್ಟಿಸುತ್ತದೆ.
ನಿಮ್ಮ ಹೋಮ್ ಆಫೀಸ್ಗೆ ಪ್ರವೇಶ ದ್ವಾರ ತುಂಬಾನೆ ಮುಖ್ಯ. ಹೀಗಾಗಿ ವಾಸ್ತು ಶಾಸ್ತ್ರದ ಪ್ರಕಾರ ಉತ್ತರ, ಪೂರ್ವ ಅಥವಾ ಈಶಾನ್ಯ ದಿಕ್ಕಿನ ಪ್ರವೇಶದ್ವಾರ ಅತ್ಯುತ್ತಮ. ಆದರೆ ಮನೆಯ ಅಸ್ತಿತ್ವದಲ್ಲಿರುವ ವಿನ್ಯಾಸದಿಂದಾಗಿ ಬಾಗಿಲು ಬದಲಾಯಿಸಲು ಸಾಧ್ಯವಾಗದಿದ್ದರೆ, ಪ್ರವೇಶದ್ವಾರವನ್ನು ಸದಾ ಸ್ವಚ್ಛವಾಗಿ ಇಟ್ಟುಕೊಳ್ಳಿ ಸಾಕು.
ವಾಸ್ತು ದೃಷ್ಟಿಯಿಂದ ಕಚೇರಿಯನ್ನು ಸ್ವಚ್ಛವಾಗಿಡುವುದು ಬಹಳ ಮುಖ್ಯ. ಮೇಜಿನ ಮೇಲೆ ಅಥವಾ ಸುತ್ತಲೂ ಬಳಕೆಯಲ್ಲಿಲ್ಲದ ಕಾಗದಗಳು, ಹಾಳಾದ ಎಲೆಕ್ಟ್ರಾನಿಕ್ ವಸ್ತು ಹಾಗೂ ಅನಗತ್ಯ ಸಾಮಗ್ರಿಗಳನ್ನು ಇಡಬೇಡಿ. ಈ ನಿಯಮಗಳನ್ನು ನೀವು ಒಗ್ಗೂಡಿಸಿಕೊಂಡಲಿ ನಿಮ್ಮ ಯಶಸ್ಸಿಗೆ ಖಂಡಿತ ಕಾರಣವಾಗುತ್ತದೆ, (ಏಜೆನ್ಸೀಸ್).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು/ ಪಂಚಾಂಗಗಳು/ ನಂಬಿಕೆಗಳು/ ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್ಸೈಟ್ ಜವಾಬ್ದಾರರಾಗಿರುವುದಿಲ್ಲ.