ಎಷ್ಟು ಕಾಂಡದ ಲಕ್ಕಿ ಬ್ಯಾಂಬೂ, ಮನೆಯ ಯಾವ ಕೋಣೆಯಲ್ಲಿಟ್ಟರೆ ಒಳೆಯದು ಗೊತ್ತಾ?..Lucky Bamboo Benefits

Lucky Bamboo Vastu Benefits
Lucky Bamboo Vastu Benefits
Published on

ಪ್ರಮುಖ ಮುಖ್ಯಾಂಶಗಳು

  • ಲಕ್ಕಿ ಬ್ಯಾಂಬುಗಳನ್ನು ಮನೆ ಮತ್ತು ಆಫೀಸ್​ನಲ್ಲಿಟ್ಟರೆ ಒಳೆಯದು ಯಾಕೆ?
  • ಲಕ್ಕಿ ಬ್ಯಾಂಬು -ಪ್ಲ್ಯಾಂಟ್​ಗಳು ಸಕರಾತ್ಮಕತೆಯನ್ನು ಹರಡಿ, ಪ್ರೀತಿ, ಸಂತೋಷವನ್ನು ನೀಡುವ ಸಂಕೇತ
  • ಎಷ್ಟು ಕಾಂಡವಿರುವ ಬ್ಯಾಂಬುವನ್ನು ಮನೆಯ ಯಾವ ಕೋಣೆಯಲ್ಲಿಟ್ಟರೆ ಫಲ ಸಿಗುತ್ತೆ?
Lucky Bamboo Vastu Benefits: ಅರ್ಧ ಚೊಂಬಿನಷ್ಟು ನೀರಿಟ್ಟರೂ ಸಹ ತಿಂಗಳಾನು ಗಟ್ಟಲೇ ಹಸಿರಾಗೆ ಇರುವ ಲಕ್ಕಿ ಬ್ಯಾಂಬು ಗಿಡವನ್ನು ಆಫೀಸ್​ನಲ್ಲಿ ಟೇಬಲ್​ ಅಂದ ಹೆಚ್ಚಿಸಲು, ಮನೆಯ ಒಳಾಂಗಣದ ಸುಂದರತೆಗಾಗಿ ಬಳಸಲಾಗುತ್ತದೆ. ಆದರೆ, ಇದು ಅದರ ಹೆಸರಿಗೆ ತಕ್ಕಂತೆ ಭಾರೀ ಅದೃಷ್ಟದ ಗಿಡ ಎನ್ನುವುದು ವಾಸ್ತು ಜೋತಿಷ್ಯ ಪ್ರಕಾರ ತಿಳಿದು ಬಂದಿದೆ. 
ಲಕ್ಕಿ ಬ್ಯಾಂಬುವಿನಲ್ಲಿರುವ ಕಾಂಡಗಳು ಎಷ್ಟು ಉಪಯುಕ್ತ. ಲಕ್ಕಿ ಬಿದಿರು ಕೊಂಡುಕೊಂಡ ನಂತರ ಅದನ್ನು ಎಲ್ಲಿಡಬೇಕು. ಮಲಗುವ ಕೋಣೆ, ಹಾಲ್​​ ಅಥವಾ ಯಾವ ದಿಕ್ಕಿನಲ್ಲಿಟ್ಟರೆ ಒಳ್ಳೆಯದು ಎನ್ನುವುದನ್ನನು ಈ ಲೇಖನದಲ್ಲಿ ವಿವರಿಸಲಾಗಿದೆ.

ಲಕ್ಕಿ ಬ್ಯಾಂಬುವಿನ ಮಹತ್ವ

ವಾಸ್ತು ಶಾಸ್ತ್ರದ ಪ್ರಕಾರ ಲಕ್ಕಿ ಬ್ಯಾಂಬು ಅಥವಾ ಬಿದಿರು ಗಿಡವನ್ನು ಮನೆಯಲ್ಲಿ ಅಥವಾ ಕೆಲಸ ಮಾಡುವ ಸ್ಥಳದಲ್ಲಿ ಇಡುವುದು ಶುಭ ಎಂದು ಪರಿಗಣಿಡಲಾಗುತ್ತದೆ. ಇದು ಸಕರಾತ್ಮಕ ಶಕ್ತಿಯನ್ನು ನೀಡುತ್ತದೆಯಲ್ಲದೆ, ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿಯನ್ನು ವೃದ್ಧಿಸುವಂತೆ ನೋಡಿಕೊಳ್ಳುತ್ತದೆ. ಈಗಿಡದ ಕಾಂಡದ ಸಂಖ್ಯೆ  ವಿಭಿನ್ನ ಫಲಿತಾಂಶ ನೀಡುತ್ತದೆ ಎನ್ನಲಾಗಿದೆ.   

ಲಕ್ಕಿ ಬ್ಯಾಂಬು ಕಾಂಡಗಳ ಸಂಖ್ಯೆ ಮತ್ತದರ ಮಹತ್ವ

ಒಂದು ಕಾಂಡದ ಬ್ಯಾಂಬುನ ಮಹತ್ವ

ಲಕ್ಕಿ ಬ್ಯಾಂಬುವಿನ ಒಂದು ಕಾಂಡ ಜೀವನದಲ್ಲಿ ಪ್ರಗತಿ ಮತ್ತು ಯಶಸ್ಸನ್ನು ಸೂಚಿಸುತ್ತದೆ. ವಿದ್ಯಾರ್ಥಿಗಳು ತಮ್ಮ ಸ್ಟಡಿ ರೂಂನಲ್ಲಿ ಇಟ್ಟುಕೊಂಡರೆ ಅವರ ವ್ಯಾಸಂಗಕ್ಕೆ ಇದು ಪೂರಕವಾಗಿ ಸಹಾಯ ಮಾಡುತ್ತದೆ. 

ಸುಖ ದಾಂಪತ್ಯಕ್ಕೆ ಎರಡು ಕಾಂಡದ ಬಿದಿರು ಬೆಸ್ಟ್

ಎರಡು ಕಾಂಡದ ಬಿದಿರು ಇದ್ದರೆ ಇದು ಪ್ರೀತಿ ಮತ್ತು ಸಾಮರಸ್ಯದ ಸಂಕೇತ. ದಂಪತಿಗಳು ತಮ್ಮ ಬೆಡ್‌ರೂಮ್‌ನಲ್ಲಿ ಎರಡು ಕೊಂಬೆಗಳ ಗಿಡವನ್ನು ಇಟ್ಟುಕೊಳ್ಳುವುದರಿಂದ ಅವರ ನಡುವಿನ ಬಾಂಧವ್ಯ ಗಟ್ಟಿಯಾಗುತ್ತದೆ.

ಕುಟುಂಬದ ಸಂತೋಷಕ್ಕೆ ಮೂರು ಕಾಂಡದ ಬ್ಯಾಂಬು ಬೆಸ್ಟ್

ಮೂರು  ಕಾಂಡಗಳಿರುವ ಬ್ಯಾಂಬು ಮನೆಯ ಹಾಲ್​ ಅಥವಾ ಲಿವಿಂಗ್​ ರೂಂನಲ್ಲಿದ್ದರೆ ಇದು ಕುಟುಂಬದ ಶ್ರೇಯಸ್ಸಿಗೆ ಒಳ್ಳೆಯದು. ತುಂಬು ಸಂಸಾರದಲ್ಲಿ ಆರೋಗ್ಯ, ಆಯಸ್ಸು, ಸಂತೋಷದಿಂದ ಕೂಡಿರಲು ಇದು ಸಹಾಯ ಮಾಡುತ್ತದೆ. 

ಈ ಬ್ಯಾಂಬು ಆಫೀಸ್​ನಲ್ಲಿಡಿ

ಐದು ಕಾಂಡವಿರುವ ಲಕ್ಕಿ ಬ್ಯಾಂಬುವನ್ನು ಕಚೇರಿ ಅಥವಾ ಕೆಲಸದ ಸ್ಥಳದಲ್ಲಿ ಇಡಿ. ಇದು ನಿಮ್ಮ ಜೀವನವನ್ನು ಉತ್ತುಂಗ ಮಟ್ಟಕ್ಕೆ ಏರುವಂತೆ ಶ್ರಮಿಸಲು ಸಹಾಯ ಮಾಡುತ್ತದೆ. ನಿಮ್ಮ ವೃತ್ತಿ ಜೀವನದಲ್ಲಿ ಯಶಸ್ಸು ಕಾಣಲು, ಮತ್ತಷ್ಟು ಬೆಳವಣಿಗೆಗೆ ಸಹಾಯ ಮಾಡುತ್ತದೆ. 

ಹಣ ಬೇಕೆಂದರೆ ಈ ಬ್ಯಾಂಬು ಖರೀದಿಸಿ

ಎಂಟು ಕಾಂಡವಿರುವ  ಬ್ಯಾಂಬು ತುಂಬಾನೆ ಲಕ್ಕಿ. ಇದು ನಿಮ್ಮ ಬಳಿ ಹಣವಿಲ್ಲದಿದ್ದರೆ ಸಂಪತ್ತನ್ನು ತಯಾರಿಸುವ ಹಾದಿಯನ್ನು ಸೃಷ್ಟಿಸಿಕೊಳ್ಳಲು, ಶ್ರಮ ಪಡುವ ಹಾದಿಯನ್ನು ತೋರಿಸುತ್ತದೆ, ಇದು ನಿಮ್ಮ ಹಣಕಾಸಿನ ವೃದ್ಧಿಗೆ ಸಹಾಯ ಮಾಡುತ್ತದೆ ಎಂದು ವಾಸ್ತು ಶಾಸ್ತ್ರದ ಪ್ರಕಾರ ತಿಳಿದು ಬಂದಿದೆ. 

ನಾಲ್ಕು ಕಾಂಡವಿರುವ ಬಿದಿರು ತರಲೇ ಬೇಡಿ

 ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಅಥವಾ ಕಚೇರಿಯಲ್ಲಿ ನಾಲ್ಕು ಕಾಂಡವಿರುವ ಬಿದಿರು ಇಟ್ಟರೆ, ಇದು ಅಶುಭ ಸಂಕೇತ ಎಂದು ಪರಿಗಣಿಸಲಾಗುವುದು. ಇದು ಮೆನಯಲ್ಲಿ ಮತ್ತು ಕುಟುಂಬಸ್ಥರಲ್ಲಿ  ನಕಾರಾತ್ಮಕತೆಯನ್ನು ತರುತ್ತದೆ ಎಂದು ಹೇಳಲಾಗಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net