ಮುಂಜಾನೆ ಅಥವಾ ರಾತ್ರಿ ಬಾಳೆ ಹಣ್ಣು ಸೇವಿಸಲು ಯಾವ ಸಮಯ ಸೂಕ್ತ?..Banana Eating Timings

ಮುಂಜಾನೆ ಅಥವಾ ರಾತ್ರಿ ಬಾಳೆ ಹಣ್ಣು ಸೇವಿಸಲು ಯಾವ ಸಮಯ ಸೂಕ್ತ?
ಮುಂಜಾನೆ ಅಥವಾ ರಾತ್ರಿ ಬಾಳೆ ಹಣ್ಣು ಸೇವಿಸಲು ಯಾವ ಸಮಯ ಸೂಕ್ತ?
Published on

ಪ್ರಮುಖ ಮುಖ್ಯಾಂಶಗಳು

  • ಬಾಳೆ ಹಣ್ಣಿನಲ್ಲಿ ಯಾವ ಖನಿಜಗಳು ಹೇರಳವಾಗಿದೆ ಗೊತ್ತಾ?
  • ಖಾಲಿ ಹೊಟ್ಟೆಯಲ್ಲಿ ಮಧುಮೇಹಿಗಳು, ಜೀರ್ಣಕ್ರಿಯೆ ಸಮಸ್ಯೆ ಇರುವವರು ಬಾಳೆಹಣ್ಣು ತಿನ್ನಬಾರದು
  • ರಾತ್ರಿ ಊಟವಾದ ನಂತರ ಬಾಳೆ ಹಣ್ಣು ತಿನ್ನಬಾರದು ಎನ್ನುವ ಯಾವುದೇ ನಿರ್ಬಂಧವಿಲ್ಲ
Banana Eating Benefits: ಕಡಿಮೆ ದರದಲ್ಲಿ ಯಾವುದಾದರೂ ಹಣ್ಣನ್ನು ಕೊಂಡುಕೊಳ್ಳಬಹುದು ಎಂದರೆ ಅದು ಬಾಳೆ ಹಣ್ಣು. ಇದರಲ್ಲಿ ನಾರಿನಾಂಶ, ಪೋಷಕಾಂಶ, ಪೊಟ್ಯಾಶಿಯಂ, ನೈಸರ್ಗಿಕ ಸಕ್ಕರೆ ಅಂಶ, ವಿಟಮಿನ್​ ಸಿ, ವಿಟಮಿನ್​ ಬಿ6 ಎಲ್ಲವೂ ಹೇರಳವಾಗಿ ಇದೆ. ಕೆಲವರಿಗೆ ಒಂದು ಹಣ್ಣು ಒಂದೊತ್ತಿನ ಊಟವಿದ್ದಂತೆ.
ಬಾಳೆಹಣ್ಣು ಸೇಬುಹಣ್ಣಿಗಿಂತ ಹೆಚ್ಚು ಪೋಷಕಾಂಶ​ ಉಳ್ಳಂತದ್ದು. ಸದ್ಯ ಎಲ್ಲರನ್ನು ಕಾಡುವ ಗೊಂದಲ ಎಂದರೆ ಇದನ್ನು ಖಾಲಿ ಹೊಟ್ಟೆಯಲ್ಲಿ ತಿನ್ನಬೇಕೋ ಅಥವಾ ಊಟವಾದ ಬಳಿಕ ತಿನ್ನುವುದು ಉತ್ತಮವೋ. ಬೆಳಗಿನ ಉಪಹಾರಕ್ಕೂ ಮುನ್ನ ತಿಂದರೆ ಸಕ್ಕರೆ ಕಾಯಿಲೆ ಬರುತ್ತದೆಯೇ ಎನ್ನುವುದು ಹಲವರನ್ನು ಕಾಡುವ ಪ್ರಶ್ನೆ. ಎಲ್ಲದಕ್ಕೂ ಉತ್ತರ ಈ ಲೇಖನದಲ್ಲಿ ಇದೆ.

ಮುಂಜಾನೆ ಬ್ರೇಕ್​​ಫಾಸ್ಟ್​

ಮುಂಜಾನೆ ಮಾತ್ರ ಬ್ರೇಕ್​ಫಾಸ್ಟ್​ ತಪ್ಪಿಸಲೇ ಬಾರದು ಎನ್ನುವುದು ವೈದ್ಯರ ಸಲಹೆ. ಕೆಲಸ ಬ್ಯುಸಿ ಮಧ್ಯೆ ಬೆಳಗ್ಗಿನ ಆಹಾರ ಸೇವಿಸುವುದು ಅಕಸ್ಮಾತ್​ ತಪ್ಪಿಸಿದರೆ, ಬಾಳೆ ಹಣ್ಣು ತಿನ್ನಬಹುದು, ಇದು ಹೆಚ್ಚಿನ ಶಕ್ತಿ ವರ್ಧಕವನ್ನು ನೀಡುತ್ತದೆ. ಗ್ಲೂಕೋಸ್, ಸುಕ್ರೋಸ್, ಪ್ರೊಸ್ಪರೋಸ್​ ತಕ್ಷಣವೇ ನಿಮಗೆ ಶಕ್ತಿಯನ್ನು ನೀಡುತ್ತದೆ. ಆದರೆ, ಕೆಲವರಿಗೆ ಖಾಲಿ ಹೊಟ್ಟೆಯಲ್ಲಿ ಬಾಳೆ ಹಣ್ಣು ತಿನ್ನುವುದು ಸರಿ ಹೊಂದಲ್ಲ. ರಕ್ತದಲ್ಲಿ ಸಕ್ಕರೆ ಮಟ್ಟ ಏರಿಕೆಗೂ ಕಾರಣವಾಗಬಹುದು. ಹೀಗಾಗಿ ದೇಹದ ಪರಿಸ್ಥಿತಿಗೆ ಅನುಗುಣವಾಗಿ ಬಾಳೆಹಣ್ಣು ಸೇವಿಸೋದು ಸರಿಯಾದ ವಿಧಾನ. ಇದು ದಿನನಿತ್ಯ ಆಹಾರದ ನಿಯಮಿತ ತಿಂಡಿಯಾಗದೇ ಇರಲಿ ಎನ್ನುತ್ತಾರೆ ತಜ್ಞರು.

ವ್ಯಾಯಾಮಕ್ಕೂ ಮುನ್ನ ಬಾಳೆಹಣ್ಣು ಸೇವಿಸಬಹುದೇ?

ಬಾಳೆಹಣ್ಣನ್ನು ಹೆಚ್ಚಾಗಿ ವ್ಯಾಯಾಮ ಅಥವಾ ​ ಫಿಟ್​ನೆಸ್​ ಮಾಡುವ ಮುನ್ನ ತಿನ್ನುವ ಒಂದು ತಿಂಡಿ ಎಂದು ಇತ್ತೀಚೆಗೆ ಪರಿಗಣಿಸಲಾಗಿದೆ. ಇದರಲ್ಲಿರುವ ಕಾರ್ಬೋಹೈಡ್ರೇಟ್‌ಗಳು ತ್ವರಿತ ಇಂಧನವನ್ನು ಒದಗಿಸುತ್ತವೆ. ಇದರಲ್ಲಿರುವ ಪೊಟ್ಯಾಶಿಯಂ ಸ್ನಾಯು ಸೆಳೆತ ತಡೆಯಲು ಸಹಕರಿಸುತ್ತವೆ. ನೀವು ಫಿಟ್​ನೆಸ್​ಗೆ ತೆರಳುವ 30-60 ನಿಮಿಷಗಳ ಮುನ್ನ ಬಾಳೆಹಣ್ಣು ತಿನ್ನುವುದರಿಂದ stamina and performance ವೃದ್ಧಿಸಲು ಸಹಕಾರಿ.
ಮಧ್ಯಾಹ್ನವೊಂದು ಬಾಳೆಹಣ್ಣು ತಿನ್ನಿ
ಮಧ್ಯಾಹ್ನದ ಊಟದ ನಡುವೆ ಬಾಳೆಹಣ್ಣು ಸೇವಿಸೋದ್ರಿಂದ ಹಸಿವನ್ನು ನೀಗಿಸಬಹುದು. ಜೊತೆಗೆ ಅತಿಯಾಗಿ ಊಟ ಮಾಡುವುದನ್ನು ತಪ್ಪಿಸುವುದು. ಸಂಸ್ಕರಿಸಿದ ತಿಂಡಿಗಳಿಗಿಂತ ಬಾಳೆಹಣ್ಣು ಉತ್ತಮ ಮತ್ತು ಆರೋಗ್ಯಕರ. ಇದರಲ್ಲಿರುವ ಫೈಬರ್​ ಅಂಶ ನಿಮ್ಮ ಹೊಟ್ಟೆ ತುಂಬಿಸಿರುವಂತೆ ನೋಡಿಕೊಳ್ಳುತ್ತದೆ.

ಸಂಜೆ ಅಥವಾ ರಾತ್ರಿ ಬಾಳೆಹಣ್ಣು ತಿನ್ನಬಹುದೇ?

ರಾತ್ರಿ ಊಟವಾದ ಬಳಿಕ ಬಾಳೆ ಹಣ್ಣು ತಿಂದರೆ, ತೂಕ ಹೆಚ್ಚಾಗುತ್ತೆ ಎನ್ನುವುದು ಹಲವರ ಸಂಶಯ. ಆದರೆ, ಇದು ನಿಜ ಎಂದು ಹೇಳಲಾಗದು. ಆರೋಗ್ಯವಾಗಿರುವವರು ಈ ಹಣ್ಣು ತಿಂದರೆ ಅದರಲ್ಲಿರುವ ಮೆಗ್ನೀಶಿಯಂ ಮತ್ತು ಟ್ರಿಪ್ಟೋಫಾನ್ ಸ್ನಾಯುಗಳು ವಿಶ್ರಾಂತಿಯಿಂದಿರಿಸಿ, ತಂಪಾದ ನಿದ್ದೆಗೆ ಉತ್ತೇಜಿಸುತ್ತದೆ. ಜೀರ್ಣಕ್ರಿಯೆಯಿಂದ ಬಳಲುತ್ತಿದ್ದರೆ ರಾತ್ರಿ ಹೊತ್ತು ಬಾಳೆಹಣ್ಣನ್ನು ತಿನ್ನುವುದು ತಪ್ಪಿಸಿ ಎನ್ನುತ್ತಾರೆ ವೈದ್ಯರು.

ಯಾರೆಲ್ಲ ಬಾಳೆಹಣ್ಣು ತಿನ್ನಬಾರದು?

ಮಧುಮೇಹದಿಂದ ಬಳಲುತ್ತಿರುವವರು ಬಾಳೆ ಹಣ್ಣು ಸೇವಿಸುವಾಗ ಎಷ್ಟನ್ನು ದೇಹಕ್ಕೆ ಪೂರೈಕೆ ಮಾಡಿಕೊಳ್ಳುತ್ತೀರಿ ಎನ್ನುವುದು ಮುಖ್ಯ. ಮಿತಿಯಾಗಿ ಸೇವನೆ ಮಾಡುವುದು ಆರೋಗ್ಯಕರ. ಅದರಲ್ಲೂ ಖಾಲಿ ಹೊಟ್ಟೆಯಲ್ಲಿ ಸೇವಿಸಲೇ ಬಾರದು. ಇದೇ ಸಮಯದಲ್ಲಿ ಹೀಗೆ ಬಾಳೆ ಹಣ್ಣನ್ನು ತಿನ್ನಬೇಕು ಎನ್ನುವ ಯಾವುದೇ ನಿರ್ಬಂಧಗಳಿಲ್ಲ. ಅವರವರ ಆರೋಗ್ಯಕ್ಕೆ ಅನುಗುಣವಾಗಿ ಪ್ರತಿ ಆಹಾರ ಸೇವನೆ ಪ್ರಮುಖ ಪಾತ್ರವಹಿಸುತ್ತದೆ ಎಂದು ವೈದ್ಯರು ಹೇಳುತ್ತಾರೆ, (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net