ನವದೆಹಲಿ: ಮಾರಕ ಕರೊನಾದಿಂದಾಗಿ ಜನರು ಮನೆಯಲ್ಲಿಯೇ ಜಾಂಡ ಹೂಡುವಂತಹ ಸ್ಥಿತಿ ಇಡೀ ದೇಶವಲ್ಲದೆ, ಜಾಗತಿಕವಾಗಿ ನಿರ್ಮಾಣವಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಾ ಮನೆಯಲ್ಲಿಯೇ ಇರುವುದೆಂದರೆ ಸಾಮಾನ್ಯವಾಗಿ ಎಲ್ಲರಿಗೂ ಬೇಸರ ಅನಿಸದೇ ಇರದು.
ಇದಕ್ಕೆ ನೀವು ಚಿಂತಿಸುವ ಅಗತ್ಯವಿಲ್ಲ. ಬೇಸರವನ್ನು ತೊಡೆದುಹಾಕುವ ಪ್ರಯತ್ನವಾಗಿ ಆಸ್ಟ್ರೋಲಜಿ(ಜ್ಯೋತಿಷ್ಯಶಾಸ್ತ್ರ) ಮೀಮ್ಸ್ ಖಾತೆಯು ಆಯಾ ರಾಶಿಗೆ ಅನುಗುಣವಾಗಿ ಒಳ್ಳೆಯ ಸಲಹೆಗಳನ್ನು ನೀಡಿದ್ದು, ಅದನ್ನು ಪಾಲಿಸಿದರೇ ನಿಮ್ಮ ಬೇಸರವೆಲ್ಲ ಮಂಗಮಾಯವಾಗಲಿದೆ.
12 ರಾಶಿಗಳಿಗೆ ಹಾಸ್ಯಾತ್ಮಕ ಸಲಹೆಯುಳ್ಳ ಪಟ್ಟಿಯೊಂದನ್ನು ಬರಹಗಾರ್ತಿ ಕರ್ಟೆನಿ ಪರ್ಕಿನ್ಸ್ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೆ, ಸಲಹೆಯೊಂದನ್ನು ನೀಡಿದ್ದು, ಮೀಮ್ಸ್ ಖಾತೆ ಹೊರತಾಗಿ ಆರೋಗ್ಯ ಸಲಹೆಗಾಗಿ ವೈದ್ಯರನ್ನೇ ಸಂಪರ್ಕಿಸಿ, ಜೋತಿಷ್ಯವನ್ನು ನಂಬುವುದಕ್ಕಿಂತ ಹೆಚ್ಚಾಗಿ ವೈದ್ಯರನ್ನೇ ನಂಬಿ ಎಂದು ತಿಳಿಸಿದ್ದಾರೆ.
ವೃಷಭ ರಾಶಿಯವರಿಗೆ ಸಲಹೆ ನೀಡಿರುವ ಬರಹಗಾರ್ತಿ ಕರ್ಟೆನಿ, ನಿಮ್ಮ ದಿಂಬುಗಳನ್ನು ಬಳಸಿಕೊಂಡು ಸ್ನೇಹಶೀಲ ವಾತಾವರಣವನ್ನು ಸೃಷ್ಟಿಸಿಕೊಳ್ಳುವುದರೊಂದಿಗೆ ರೊಮ್ಯಾಂಟಿಕ್ ಕಾಮಿಡಿಗಳನ್ನು ಎಂಜಾಯ್ ಮಾಡಿ ಎಂದಿದ್ದಾರೆ. ಇದಲ್ಲದೆ, ಮೋಲಿ ಬಜ್ ಅವರ ರೆಸಿಪಿಯನ್ನು ಕಲಿಯಿರಿ ಎಂದು ಮತ್ತೊಂದು ಸಲಹೆಯನ್ನು ನೀಡಿದ್ದಾರೆ. ಮೋಲಿ ಅವರು ಬೊನ್ ಅಪೆಟಿಟ್ ಮ್ಯಾಗಜಿನ್ನಲ್ಲಿ ಆಹಾರ ಸಂಪಾದಕಿಯಾಗಿದ್ದಾರೆ. (ಏಜೆನ್ಸೀಸ್)
ಕರೊನಾ ಸೋಂಕಿನ ತಾತ್ಕಾಲಿಕ ಬಂದ್ನಿಂದ ಬೇಸರವೇ? ಮೇಷ ರಾಶಿಯವರು ಹೀಗೆ ಮಾಡಿದರೆ ಬೋರ್ ಆಗುವುದಿಲ್ಲ