More

    26ರಿಂದ ಪರ್ಪಲೆಗುಡ್ಡದಲ್ಲಿ ಅಷ್ಟಮಂಗಲ

    ಉಡುಪಿ: ಕಾರ್ಕಳ ತಾಲೂಕು ಹಿಂದು ಜಾಗರಣ ವೆೇದಿಕೆ, ಅತ್ತೂರು ಕೃಷ್ಣಗಿರಿ ಕಲ್ಕುಡ ದೈವಸ್ಥಾನ ಟ್ರಸ್ಟ್ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಅತ್ತೂರು ಪರ್ಪಲೆಗುಡ್ಡೆ ಪುನರುತ್ಥಾನದ ಉದ್ದೇಶದಿಂದ ಅಷ್ಟಮಂಗಲ ಪ್ರಶ್ನಾಚಿಂತನೆ ಮತ್ತು ಜೀರ್ಣೋದ್ಧಾರ ಮತ್ತು ಜೀರ್ಣೋದ್ಧಾರ ಸಂಕಲ್ಪ ಸಭೆ ನ. 26ರಿಂದ 28ರವರೆಗೆ ನಡೆಯಲಿದೆ.

    ಕಾರ್ಕಳದ ಅತ್ತೂರು ಗ್ರಾಮದಲ್ಲಿರುವ ಪರ್ಪಲೆಗುಡ್ಡದ ಮೇಲೆ ಅನೇಕ ಶತಮಾನಗಳಿಂದ ಸುಪ್ತಾವಸ್ಥೆಯಲ್ಲಿರುವ ದೈವ ಸಾನ್ನಿಧ್ಯವನ್ನು ಮತ್ತೆ ಜಾಗೃತ ಸ್ಥಿತಿಗೆ ತರಲು ಗ್ರಾಮಸ್ಥರು ಮುಂದಾಗಿದ್ದಾರೆ ಎಂದು ಹಿಂದು ಜಾಗರಣ ವೆೇದಿಕೆ ಮಂಗಳೂರು ವಿಭಾಗದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಕುಕ್ಕೆಹಳ್ಳಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಕಾರ್ಕಳ ನಗರ ಮತ್ತು ಅತ್ತೂರು ಸುತ್ತಲಿನ ಹಲವಾರು ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಮುಂದಾದಾಗ ಈ ಕ್ಷೇತ್ರವನ್ನು ಮೊದಲು ಜೀರ್ಣೋದ್ಧಾರ ಮಾಡುವಂತೆ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದಿದೆ. ಇಲ್ಲಿ ದೈವೀಶಕ್ತಿಗಳು ಚರಾವಸ್ಥೆಯಲ್ಲಿರುವುದರಿಂದ ಗ್ರಾಮಸ್ಥರಿಗೆ ಸಮಸ್ಯೆ ಎದುರಾಗುತ್ತಿದೆ. ಈಗ ಜಾಗರಣ ವೇದಿಕೆ ಮುಂದಾಳತ್ವದಲ್ಲಿ ಜೀರ್ಣೋದ್ಧಾರ ಸಂಕಲ್ಪ ಮಾಡಲಾಗಿದೆ ಎಂದರು.

    ಪ್ರಶ್ನಾಚಿಂತನೆ ದಕ್ಷಿಣ ಭಾರತದ ಖ್ಯಾತ ದೈವಜ್ಞ ನಾರಾಯಣ ಪೊದುವಾಳ್ ಮತ್ತು ಹಿರಿಯ ಧಾರ್ಮಿಕ ಚಿಂತಕ ಹಿರಣ್ಯ ವೆಂಕಟೇಶ್ ಭಟ್ ನೇತೃತ್ವದಲ್ಲಿ ಅಷ್ಟಮಂಗಲ ಪ್ರಶ್ನಾ ಚಿಂತನೆ ನಡೆಯಲಿದೆ ಎಂದರು.

    ಶ್ರೀ ಕೃಷ್ಣಗಿರಿ ಕಲ್ಕುಡ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಪ್ರಶಾಂತ ನಾಯಕ್, ಮುಖಂಡರಾದ ದಿನೇಶ್ ಶೆಟ್ಟಿ ಹೆಬ್ರಿ, ಗುರುಪ್ರಸಾದ್ ನಾರಾವಿ, ಚಂದ್ರಶೇಖರ್ ಶೆಟ್ಟಿ, ರಾಜೇಶ್ ರಿಖೇಶ್, ಚಂದ್ರಶೇಖರ್, ಮಹೇಶ್ ಬೈಲೂರು ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts