More

    ಆಂಧ್ರಪ್ರದೇಶ: ಚಂದ್ರಬಾಬು ನಾಯ್ಡು ಆಸ್ತಿ ಮೌಲ್ಯ 810 ಕೋಟಿ ರೂ.; 5 ವರ್ಷದಲ್ಲಿ 41% ಆಸ್ತಿ ಹೆಚ್ಚಳ

    ಆಂಧ್ರಪ್ರದೇಶ: ಮುಂಬರುವ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗೆ ಟಿಡಿಪಿ ವರಿಷ್ಠ ನಾರಾ ಚಂದ್ರಬಾಬು ನಾಯ್ಡು ಅವರು ಕುಪ್ಪಂನಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ನಾರಾ ಚಂದ್ರಬಾಬು ತಮ್ಮ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ. ನಾರಾ ಚಂದ್ರಬಾಬು ನಾಯ್ಡು ಅವರ ಕುಟುಂಬಸ್ಥರ ಆಸ್ತಿ ಕಳೆದ ಐದು ವರ್ಷಗಳಲ್ಲಿ ಶೇಕಡಾ 41 ರಷ್ಟು ಹೆಚ್ಚಳವಾಗಿದೆ.

    ಇದನ್ನೂ ಓದಿ: ಆಂಧ್ರಪ್ರದೇಶ: ವೈಎಸ್​ಆರ್​ಸಿಪಿ ಪ್ರಚಾರ ವಾಹನ ಡಿಕ್ಕಿ, 9 ವರ್ಷದ ಬಾಲಕ ಸಾವು

    ಚಿತ್ತೂರು ಜಿಲ್ಲೆಯ ಕುಪ್ಪಂ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ನಾಯ್ಡು ಅವರ ಪರವಾಗಿ ಪತ್ನಿ ನಾರಾ ಭುವನೇಶ್ವರಿ ಉಮೇದುವಾರಿಕೆ ಸಲ್ಲಿಕೆ ಮಾಡಿದ್ದು ಸುಮಾರು 810.42 ಕೋಟಿ ರೂ. ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ. ವಿಧಾನಸಭೆ ಚುನಾವಣೆ ಮೇ 13 ರಂದು ನಡೆಯಲಿದೆ.

    ಕಳೆದ ಚುನಾವಣೆ ಸಮಯದಲ್ಲಿ ಚಂದ್ರಬಾಬು ನಾಯ್ಡು ಅವರು 574.3 ಕೋಟಿ ರೂ, ಆಸ್ತಿ ಇರುವುದಾಗಿ ಘೋಷಿಸಿಕೊಂಡಿದ್ದರು. ಅವರ ಪತ್ನಿ ಭುವನೇಶ್ವರಿ ಅವರು ಹೆರಿಟೇಜ್ ಫುಡ್ಸ್‌ನ ಲಿಮಿಟೆಡ್​​ ಕಂಪನಿಯ 2.26 ಕೋಟಿ ಷೇರುಗಳನ್ನು ಹೊಂದಿದ್ದು, ಇದರ ಮಾರುಕೊಟ್ಟೆ ಮೌಲ್ಯ 337.85 ರೂ ಇದೆ. 2019ರ ಈ ಷೇರುಗಳ ಮೌಲ್ಯ 545.76 ಕೋಟಿಯಷ್ಟಿತ್ತು.

    ಚಂದ್ರಬಾಬು ನಾಯ್ಡು ಬಳಿ 4.80 ಲಕ್ಷ ಮೌಲ್ಯದ ಚರಾಸ್ತಿಯನ್ನು ಮತ್ತು 36.31 ಲಕ್ಷ ಮೌಲ್ಯದ ಸ್ಥಿರಾಸ್ತಿಯನ್ನು ಹೊಂದಿದ್ದಾರೆ. ಪತ್ನಿ ಭುವನೇಶ್ವರಿ ಅವರ ಬಳಿ 3.4 ಕೆಜಿ ಚಿನ್ನ ಮತ್ತು ಸುಮಾರು 41.5 ಕೆಜಿ ಬೆಳ್ಳಿ ಇದೆ.

    ಮಾಜಿ ಮುಖ್ಯಮಂತ್ರಿ ಬಳಿ 2.25 ಲಕ್ಷ ಮೌಲ್ಯದ ಒಂದು ಅಂಬಾಸಿಡರ್ ಕಾರು ಹೊಂದಿದ್ದಾರೆ. ವಿವಿಧ ಪ್ರಕರಣಗಳಿಗೆ ಸಂಬಂಧಿಸಿದ 24 ಎಫ್‌ಐಆರ್‌ಗಳಲ್ಲಿ ನಾಯ್ಡು ಅವರ ಹೆಸರನ್ನು ಉಲ್ಲೇಖಿಸಲಾಗಿದೆ ಎಂದು ಅಫಿಡವಿಟ್ ನಲ್ಲಿ ತಿಳಿಸಿದ್ದಾರೆ.

    L S polls: ಛತ್ತೀಸ್‌ಗಢದಲ್ಲಿ ಗ್ರನೇಡ್​ ಸ್ಫೋಟದಲ್ಲಿ ಸಿಆರ್‌ಪಿಎಫ್ ಯೋಧ ಹುತಾತ್ಮ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts