More

    ಆಕ್ಸಿಜನ್ ಕೊರತೆಯಿಂದ ಒಬ್ಬರೂ ಸಾಯದಂತೆ ನೋಡಿಕೊಳ್ಳುತ್ತೇನೆ: ಅರವಿಂದ ಕೇಜ್ರಿವಾಲ್​

    ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಆಕ್ಸಿಜನ್​ ಕೊರತೆಯಿಂದ ಯಾರೊಬ್ಬರೂ ಸಾಯದಂತೆ ನೋಡಿಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​ ತಿಳಿಸಿದ್ದಾರೆ. ನವದೆಹಲಿಯಲ್ಲಿ ಉಂಟಾದ ಆಕ್ಸಿಜನ್​ ಕೊರತೆಯನ್ನು ಪರಿಗಣಿಸಿ, ಕೇಂದ್ರ ಸರ್ಕಾರ 730 ಮೆಟ್ರಿಕ್​ ಟನ್​ ಆಕ್ಸಿಜನ್​ ಕಳುಹಿಸಿಕೊಟ್ಟಿರುವ ಹಿನ್ನೆಲೆಯಲ್ಲಿ ಅವರು ಈ ಮಾತನ್ನು ಹೇಳಿದ್ದಾರೆ.

    ಬುಧವಾರದಂದು ಕೇಂದ್ರವು 730 ಮೆಟ್ರಿಕ್​ ಟನ್​ ಆಕ್ಸಿಜನ್​ ಅನ್ನು ನವದೆಹಲಿಗೆ ಕಳುಹಿಸಿಕೊಟ್ಟಿದೆ. ಈ ರೀತಿ ಆಕ್ಸಿಜನ್​ ಪೂರೈಕೆ ಮಾಡುವಂತೆ ಆದೇಶಿಸಿದ್ದ ಸುಪ್ರೀಂ ಕೋರ್ಟ್​ ಮತ್ತು ದೆಹಲಿ ಹೈ ಕೋರ್ಟ್​ಗೆ ಅರವಿಂದ ಕೇಜ್ರಿವಾಲ್​ ಧನ್ಯವಾದ ತಿಳಿಸಿದ್ದಾರೆ. ನಮ್ಮ ರಾಜ್ಯಕ್ಕೆ ಪ್ರತಿನಿತ್ಯ ಇದೇ ಪ್ರಮಾಣದಲ್ಲಿ ಆಕ್ಸಿಜನ್ ಪೂರೈಕೆಯ ಅಗತ್ಯತೆ ಇದೆ. ಒಂದು ವೇಲೆ ಕೇಂದ್ರ ಪ್ರತಿದಿನ ಈ ರೀತಿ ಪೂರೈಕೆ ಮಾಡಿದರೆ ರಾಜ್ಯದಲ್ಲಿ ಒಬ್ಬರೂ ಆಕ್ಸಿಜನ್ ಸಿಗದೆ ಬಲಿಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಕೇಜ್ರಿವಾಲ್​ ಹೇಳಿದ್ದಾರೆ.

    ಈಗಾಗಲೇ ರಾಜ್ಯದ ಹಲವು ಆಸ್ಪತ್ರೆಗಳಲ್ಲಿ ಆಕ್ಸಿಜನ್​ ಕೊರತೆ ಇದ್ದ ಹಿನ್ನೆಲೆಯಲ್ಲಿ ಬೆಡ್​ಗಳ ಸಂಖ್ಯೆಯನ್ನು ಇಳಿಸಲಾಗಿತ್ತು. ಆದರೆ ಈಗ ಆಕ್ಸಿಜನ್​ ಪೂರೈಕೆಯಾಗುತ್ತಿರುವುದರಿಂದಾಗಿ ಬೆಡ್​ ಸಂಖ್ಯೆ ಏರಿಸಿ ಎಂದು ಅವರು ಆಸ್ಪತ್ರೆಗಳಲ್ಲಿ ಮನವಿ ಮಾಡಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts