More

    ಕೃತಕ ಅಭಾವ ಸೃಷ್ಟಿಸಿದರೆ ಕ್ರಮ

    ರಾಮದುರ್ಗ: ತಾಲೂಕಿನಲ್ಲಿ ಅಂಗಡಿಕಾರರು ಯೂರಿಯಾ ಗೊಬ್ಬರದ ಕೃತಕ ಅಭಾವ ಸೃಷ್ಟಿಸಿದ್ದು ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಾಲೂಕಿನ ರಸಗೊಬ್ಬರ ನೋಡಲ್ ಅಧಿಕಾರಿ ಚಂದ್ರಕಾಂತ ಪವಾರ ಎಚ್ಚರಿಕೆ ನೀಡಿದ್ದಾರೆ. ತಾಲೂಕಿನ ರಸಗೊಬ್ಬರ ವಿತರಣೆ ಕೇಂದ್ರಗಳಿಗೆ ಭೇಟಿ ನೀಡಿ ಸ್ಟಾಕ್ ಪರಿಶೀಲಿಸಿದ ನಂತರ ಏರ್ಪಡಿಸಿದ್ದ ವ್ಯಾಪಾರಸ್ಥರ ಸಭೆಯಲ್ಲಿ ಮಾತನಾಡಿದ ಅವರು, ರಾಮದುರ್ಗ ತಾಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ ಒಟ್ಟು ವಾಡಿಕೆಗಿಂತ ಅಧಿಕ ಮಳೆಯಾಗಿದೆ.

    ಮುಂಗಾರಿನಲ್ಲಿ ರೈತರು ವಿವಿಧ ಬೆಳೆಗಳಾದ ಹೆಸರು, ಗೋವಿನಜೋಳ, ಸಜ್ಜೆ, ಸೂರ್ಯಕಾಂತಿ ಮತ್ತು ಕಬ್ಬು ಸೇರಿ ತಾಲೂಕಿನಲ್ಲಿ 47,490 ಹೆಕ್ಟೇರ್ ಬಿತ್ತನೆಯಾಗಿದೆ. ಇಲ್ಲಿಯವರೆಗೆ ತಾಲೂಕಿಗೆ 4168.75 ಮೆಟ್ರಿಕ್ ಟನ್ ಗೊಬ್ಬರ ಪೂರೈಸಲಾಗಿದೆ ಎಂದರು.

    ರೈತರ ಬೇಡಿಕೆಗೆ ಅನುಗುಣವಾಗಿ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಮತ್ತು ಖಾಸಗಿ ರಸಗೊಬ್ಬರ ಮಾರಾಟಗಾರರ ಮೂಲಕ ಪೂರೈಕೆ ಆಗುತ್ತಿದ್ದು, ರೈತರು ಯಾವುದೇ ವದಂತಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿದರು. ರೈತರಿಗೆ ಕಡ್ಡಾಯವಾಗಿ ಪಿಒಎಸ್ ಮಷಿನ್ ಮೂಲಕ ವಿತರಣೆ ಮಾಡಬೇಕು.

    ಇಲಾಖೆಯ ನಿರ್ದೇಶನ ಪಾಲಿಸದೆ ರೈತರಿಗೆ ಮೋಸ ಮಾಡಿದ್ದು ಕಂಡುಬಂದಲ್ಲಿ ಅಂಗಡಿಕಾರರ ಲೈಸನ್ಸ್ ರದ್ದು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಸಹಾಯಕ ಕೃಷಿ ನಿರ್ದೇಶಕ ಎಸ್.ಎಫ್. ಬೆಳವಟಗಿ, ಕೃಷಿ ಅಧಿಕಾರಿ ರಮೇಶ ದಾಸರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts