More

    ನೇರಳೆ ಕೃಷಿ ಮಾಡಿ, ಉತ್ತಮ ಆದಾಯ ಗಳಿಸಿ: ಮನಿಮಾತು

    ನೇರಳೆ ಕೃಷಿ ಮಾಡಿ, ಉತ್ತಮ ಆದಾಯ ಗಳಿಸಿ: ಮನಿಮಾತುಕಾಡುಗಳಲ್ಲಿ, ರಸ್ತೆಯ ಇಕ್ಕೆಲಗಳಲ್ಲಿ, ತೋಟದ ಅಂಚಿನಲ್ಲಿ ಕಂಡುಬರುತ್ತಿದ್ದ ನೇರಳೆ ಈಗ ಅನ್ನದಾತನ ಹೊಲದಲ್ಲಿ ವಾಣಿಜ್ಯ ಬೆಳೆಯ ಸ್ಥಾನ ಪಡೆದಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಎಷ್ಟೋ ಮಂದಿ ರೈತರು ನೇರಳೆ ಹಣ್ಣಿನ ಕೃಷಿಯನ್ನು ಮುಖ್ಯ ಕೃಷಿಯನ್ನಾಗಿ ಮಾಡಿಕೊಂಡಿದ್ದಾರೆ. ಕಡಿಮೆ ನಿರ್ವಹಣೆಯ ಜತೆಗೆ ಹೆಚ್ಚು ನೀರು ಬೇಡದ ನೇರಳೆ, ಭರ್ಜರಿ ಆದಾಯನ್ನೂ ತಂದುಕೊಡುತ್ತದೆ. ಒಂದು ಎಕರೆಯಲ್ಲಿ ನೇರಳೆ ಕೃಷಿ ಮಾಡಿದ್ರೆ ವರ್ಷಕ್ಕೆ ಆರೇಳು ಲಕ್ಷ ಆದಾಯ ಪಡೆಯಬಹುದು. ನೀರಾವರಿ ಜಮೀನುಗಳಲ್ಲಿ ನೇರಳೆ ಗಿಡಗಳನ್ನು ಹೆಚ್ಚು ಪರಿಶ್ರಮವಿಲ್ಲದೆ ಬೆಳೆಸಬಹುದು. ಗಿಡ ನಾಟಿ ಮಾಡಿದ ಬಳಿಕ ಮೂರ್ನಾಲ್ಕು ವರ್ಷ ಸಮಯಕ್ಕೆ ಸರಿಯಾಗಿ ನೀರು ಗೊಬ್ಬರ ಕೊಟ್ಟರೆ ಸಾಕು, ಬಳಿಕ ಮಳೆಯಾಧಾರಿತವಾಗಿ ಬೆಳೆಯುತ್ತದೆ.

    ನೇರಳೆ ಹಣ್ಣಿಗೆ ಬೇಡಿಕೆ: ಹಳ್ಳಿಗಳಲ್ಲಿ ಹಿಂದೆಲ್ಲಾ ಸುಲಭವಾಗಿ, ಉಚಿತವಾಗಿ ಸಿಗುತ್ತಿದ್ದ ನೇರಳೆ ಹಣ್ಣಿಗೆ ಈಗ ಭರ್ಜರಿ ಬೆಲೆ ಬಂದಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಕೆ.ಜಿ. ನೇರಳೆ ಹಣ್ಣಿಗೆ ರೂ. 120ರಿಂದ ರೂ. 150 ಬೆಲೆ ಇದೆ. ನೇರಳೆ ಹಣ್ಣಿನ ಔಷಧೀಯ ಗುಣ ಅರಿತಿರುವ ಜನರು ಅದರ ಖರೀದಿಗೆ ಮುಗಿಬೀಳುತ್ತಿದ್ದಾರೆ. ನಗರ- ಪಟ್ಟಣ ಪ್ರದೇಶದಲ್ಲಿ ನೇರಳೆ ಹಣ್ಣಿಗೆ ಸಿಕ್ಕಾಪಟ್ಟೆ ಮಾರುಕಟ್ಟೆ ಸೃಷ್ಟಿಯಾಗಿದೆ. ಸಕ್ಕರೆ ಕಾಯಿಲೆ ಇರುವವರು ಈ ಹಣ್ಣನ್ನು ಹೆಚ್ಚು ಸೇವಿಸುತ್ತಾರೆ. ನೇರಳೆಯಲ್ಲಿ ‘ಸಿ’ ಜೀವಸತ್ವ, ಸಾರಜನಕ, ನಾರು, ಕಬ್ಬಿಣ, ಕ್ಯಾಲ್ಶಿಯಂ ಅಂಶಗಳಿರುತ್ತವೆ. ನೇರಳೆಯನ್ನು ಮಧುಮೇಹ ಔಷಧ ತಯಾರಿಕೆಯಲ್ಲೂ ಬಳಸಲಾಗುತ್ತದೆ. ಭೇದಿ ಮತ್ತು ಆಮಶಂಕೆಗೆ ನೇರಳೆ ಸಿರಪ್ ಅನ್ನು ಔಷಧವಾಗಿ ಬಳಸಲಾಗುತ್ತದೆ. ವೈನ್ ಜಾಮ್ ಮತ್ತು ಜ್ಯೂಸ್ ತಯಾರಿಕೆಗೂ ಹಣ್ಣು ಬಳಸಲಾಗುತ್ತದೆ.

    ಬೇಸಾಯ ಕ್ರಮ, ಇಳುವರಿ: ಒಂದು ಎಕರೆ ಭೂಮಿಯಲ್ಲಿ ಸುಮಾರು 50 ನೇರಳೆ ಗಿಡಗಳನ್ನು ನಾಟಿ ಮಾಡಬಹುದು. ನಾಟಿ ಮಾಡಿದ ಮೂರ್ನಾಲ್ಕು ವರ್ಷಗಳಲ್ಲಿ ಇಳುವರಿ ಆರಂಭವಾಗುತ್ತದೆ. ಒಂದು ದೊಡ್ಡ ಗಿಡದಲ್ಲಿ ಸರಾಸರಿ 100ರಿಂದ 120 ಕೆಜಿ ಹಣ್ಣು ಸಿಗುತ್ತದೆ. ಮುಂಗಾರಿನೊಂದಿಗೆ ನೇರಳೆ ಹಣ್ಣಿನ ಸುಗ್ಗಿ ಆರಂಭವಾಗುತ್ತದೆ. ಫೆಬ್ರವರಿ ತಿಂಗಳಲ್ಲಿ ಹೂವು ಬಿಡಲು ಆರಂಭವಾಗುತ್ತದೆ. ಮೇ- ಜುಲೈ ತಿಂಗಳಲ್ಲಿ ಹಣ್ಣು ಸಿಗುತ್ತದೆ. ಉತ್ತಮ ರೀತಿಯಲ್ಲಿ ಕೃಷಿ ಮಾಡಿದರೆ ಒಂದು ಎಕರೆಗೆ ಖರ್ಚು ಕಳೆದು ಆರೇಳು ಲಕ್ಷ ರೂಪಾಯಿ ಆದಾಯ ನಿಶ್ಚಿತ.

    ತಳಿಗಳು, ಕೀಟಬಾಧೆ: ಕಸಿ ನೇರಳೆ, ಹೈಬ್ರೀಡ್, ಜಂಬು ನೇರಳೆ ಹೀಗೆ ಮೂರು ತಳಿಗಳಿವೆ. ಸೀಡ್​ಲೆಸ್ ಹಣ್ಣಿನ ತಳಿಯೂ ಇತ್ತೀಚೆಗೆ ಚಾಲ್ತಿಗೆ ಬರುತ್ತಿದೆ. ಪ್ರದೇಶಕ್ಕೆ ಅನುಗುಣವಾಗಿ ಹೊಂದಾಣಿಕೆಯಾಗುವ ತಳಿಗಳು ನರ್ಸರಿಗಳಲ್ಲಿ ಸಿಗುತ್ತವೆ. ಕಾಡು ಮರವಾದ ನೇರಳೆಗೆ ರೋಗ ಬಾಧೆ ಕಡಿಮೆ. ಆದರೆ, ತೋಟಗಾರಿಕೆ ಬೆಳೆಯಾಗಿ ನೇರಳೆ ಬೆಳೆದರೆ ಹಣ್ಣುಕೊಳೆ ರೋಗ, ಹಣ್ಣು ಕೊರಕ, ಎಲೆ ಚುಕ್ಕೆ ರೋಗ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಸೂಕ್ತ ಔಷಧೋಪಚಾರ ಮಾಡಿದರೆ ಸಮಸ್ಯೆ ನಿಭಾಯಿಸಬಹುದು.

    ಇಲ್ಲಿದೆ ಕೃಷಿ ಯೂನಿವರ್ಸಿಟಿ: ಕೃಷಿಯಲ್ಲಿ ಸಾಧನೆ ಮಾಡಬೇಕು ಅಂದ್ರೆ ಹೊಸ ಕಲಿಕೆ ನಿಮ್ಮದಾಗಬೇಕು. ಈ ನಿಟ್ಟಿನಲ್ಲಿ ಫೈನಾನ್ಸಿಯಲ್ ಫ್ರೀಡಂ ಆಪ್​ನಲ್ಲಿ ಹಲವು ಕೋರ್ಸ್​ಗಳನ್ನು ವಿನ್ಯಾಸಗೊಳಿಸಲಾಗಿದೆ. ಕೃಷಿ, ತೋಟಗಾರಿಕೆ, ಪಶು ಸಂಗೋಪನೆ ಮತ್ತು ಕೃಷಿ ಉಪಕಸುಬುಗಳ ಮಾಹಿತಿಯ ಕಣಜವೇ ಫೈನಾನ್ಸಿಯಲ್ ಫ್ರೀಡಂ ಆಪ್​ನಲ್ಲಿದೆ.

    ಕೃಷಿ ಕೋರ್ಸ್​ಗಳು: ಹಣ್ಣಿನ ಬೆಳೆಗಳ ಬಗ್ಗೆ ಮಾಹಿತಿ ನೀಡುವ ಡ್ರಾ್ಯಗನ್ ಫೂ›ಟ್ ಕೋರ್ಸ್, ರಂಬುಟಾನ್ ಕೋರ್ಸ್, ಬಟರ್ ಫೂ›ಟ್ ಕೋರ್ಸ್, ನೇರಳೆ ಹಣ್ಣಿನ ಕೃಷಿ ಕೋರ್ಸ್, ಹಲಸಿನ ಬಗ್ಗೆ ಕೋರ್ಸ್​ಗಳು, ತೈವಾನ್ ಸೀಬೆ ಕೋರ್ಸ್, ಅಂಜೂರ ಕೃಷಿ ಕೋರ್ಸ್, ದಾಳಿಂಬೆ ಕೃಷಿ ಕೋರ್ಸ್ ಫೈನಾನ್ಸಿಯಲ್ ಫ್ರೀಡಂ ಆಪ್​ನಲ್ಲಿವೆ. ಇಷ್ಟೇ ಅಲ್ಲ, ರೇಷ್ಮೆ ಕೃಷಿ ಕೋರ್ಸ್, ಸಮಗ್ರ ಕೃಷಿ ಕೋರ್ಸ್, ಅರಣ್ಯ ಕೃಷಿ ಕೋರ್ಸ್, ಅಣಬೆ ಕೃಷಿ ಕೋರ್ಸ್, ಹೂವಿನ ಕೃಷಿ ಕೋರ್ಸ್, ನರ್ಸರಿ ಬಿಸಿನೆಸ್ ಕೋರ್ಸ್ ಮತ್ತು 1 ಎಕರೆ ಕೃಷಿ ಭೂಮಿಯಲ್ಲಿ ಒಂದು ಲಕ್ಷ ಗಳಿಸುವುದು ಹೇಗೆ ಎನ್ನುವ ಬಗ್ಗೆ ಕೋರ್ಸ್​ಗಳಿವೆ.

    ಕೃಷಿ ಸಂಬಂಧಿತ ಉಪಕಸುಬುಗಳ ಬಗ್ಗೆ ಕೋರ್ಸ್: ಕೋಳಿ ಸಾಕಣೆ ಕೋರ್ಸ್, ಹಂದಿ ಸಾಕಣೆ ಕೋರ್ಸ್, ಕುರಿ ಮತ್ತು ಮೇಕೆ ಸಾಕಾಣಿಕೆ ಕೋರ್ಸ್, ಮೀನು ಕೃಷಿ ಕೋರ್ಸ್, ಹೈನುಗಾರಿಕೆ ಕೋರ್ಸ್, ಕಡಕ್​ನಾಥ್ ಕೋಳಿ ಸಾಕಣೆ ಕೋರ್ಸ್, ಜೇನು ಸಾಕಣೆ ಕೋರ್ಸ್, ಸೀಗಡಿ ಕೃಷಿ ಕೋರ್ಸ್, ಗಾಣದ ಎಣ್ಣೆ ಬಿಸಿನೆಸ್ ಕೋರ್ಸ್ ಹೀಗೆ ಹತ್ತು ಹಲವು ವಿಚಾರಗಳ ಬಗ್ಗೆ ಫೈನಾನ್ಸಿಯಲ್ ಫ್ರೀಡಂ ಆಪ್​ನಲ್ಲಿ ಕೋರ್ಸ್​ಗಳಿವೆ.

    ಫೈನಾನ್ಸಿಯಲ್ ಫ್ರೀಡಂ ಆಪ್​ನಲ್ಲಿ ನೇರಳೆ ಕೃಷಿ ಕೋರ್ಸ್: ನೇರಳೆ ಕೃಷಿ ಬಗ್ಗೆ ಆಸಕ್ತ ಕೃಷಿಕರಿಗೆ ಪರಿಪೂರ್ಣ ಮಾರ್ಗದರ್ಶನ ಸಿಗಬೇಕು ಎನ್ನುವ ಕಾರಣದಿಂದ ಫೈನಾನ್ಸಿಯಲ್ ಫ್ರೀಡಂ ಆಪ್​ನಲ್ಲಿ ನೇರಳೆ ಕೃಷಿ ಕೋರ್ಸ್ ರೂಪಿಸಲಾಗಿದೆ. ನೇರಳೆ ಕೃಷಿಯಲ್ಲಿ ಯಶಸ್ಸು ಕಂಡು ಭರ್ಜರಿ ಆದಾಯ ಗಳಿಸಿರುವ ಮಾರ್ಗದರ್ಶಕರೇ ಈ ಕೋರ್ಸ್​ನಲ್ಲಿ ನೇರಳೆ ಕೃಷಿ ಬಗ್ಗೆ ವಿವರಣೆ ನೀಡಿದ್ದಾರೆ. ಹಾಗಾದ್ರೆ ಇನ್ನೇಕೆ ತಡ ಈಗಲೇ ಫೈನಾನ್ಸಿಯಲ್ ಫ್ರೀಡಂ ಆಪ್ ಡೌನ್​ಲೋಡ್ ಮಾಡಿ, ನೇರಳೆ ಕೃಷಿ ಬಗ್ಗೆ ಕಲಿತು ನೀವೂ ಆದಾಯ ಗಳಿಸೋಕೆ ಶುರು ಮಾಡಿ.

    ನೇರಳೆ ಕೃಷಿ ಮಾಡಿ, ಉತ್ತಮ ಆದಾಯ ಗಳಿಸಿ: ಮನಿಮಾತು

    ಎಲ್ಲರ ಬಾಯಲ್ಲೂ ಇಡ್ಲಿ!; ಯಾಕೆ ಯಾಕೆ ಅನ್ನೋದೇ ಹಲವರ ಪ್ರಶ್ನೆ!

    ವಧುವಿಗೆ ಹತ್ತನೇ ಕ್ಲಾಸು, ವರನಿಗೆ 30 ವರ್ಷ; ಬಾಲ್ಯವಿವಾಹ ಮಾಡಿಸಿದವರೆಲ್ಲರ ಬಂಧನ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts