More

    ಕಲೆ ಮತ್ತು ಸಂಸ್ಕೃತಿಗೆ ಪ್ರೋತ್ಸಾಹ ನೀಡಿ

    ಅಳವಂಡಿ: ಆಧುನಿಕ ಯುಗದಲ್ಲಿ ಯುವಕರ ಅತಿಯಾದ ಮೋಬೈಲ್ ಬಳಕೆಯಿಂದ ಕಲೆಯನ್ನು ಮರೆಯುವಂತಾಗಿದೆ. ಯುವ ಜನತೆ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳಸುವಲ್ಲಿ ಆಸಕ್ತಿ ತೋರಿ ಪ್ರೋತ್ಸಾಹಿಸಬೇಕು ಎಂದು ಮುಖಂಡ ಶರಣಪ್ಪ ಮಡಿವಾಳ ತಿಳಿಸಿದರು.

    ಇದನ್ನೂ ಓದಿ: ಕಲೆಗಳಿಂದ ಮಾನವತ್ವ ಉಳಿದಿದೆ

    ಸಮೀಪದ ಬೆಟಗೇರಿ ಗ್ರಾಮದ ಶ್ರೀಮೂಕಬಸವೇಶ್ವರ ದೇವಸ್ಥಾನದಲ್ಲಿ ಕಲರ್‌ಫುಲ್ ನಗರ ಮತ್ತು ಗ್ರಾಮೀಣಾಭಿವೃದ್ಧಿ ಕಲಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಡೆದ ವಿರಾಟ ಪರ್ವ ತೊಗಲು ಗೊಂಬೆಯಾಟ ಪ್ರದರ್ಶನಕ್ಕೆ ಚಾಲನೆ ನೀಡಿ ಈಚೆಗೆ ಮಾತನಾಡಿದರು.

    ಹಿಂದೆ ಗ್ರಾಮೀಣದಲ್ಲಿ ಹೆಚ್ಚಾಗಿ ಪ್ರದರ್ಶಿತವಾಗುತ್ತಿದ್ದ ನಾಟಕ, ಬಯಲಾಟ, ತೊಗಲುಗೊಂಬೆಯಾಟ, ಗೀಗೀಪದ, ಜಾನಪದ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಇದು, ಜನರಲ್ಲಿ ಸಾಮೂಹಿಕ ಒಗ್ಗಟ್ಟಿನ ಭಾವನೆ ಜತೆಗೆ ಮನಶಾಂತಿ ಮೂಡಿಸಲಿದೆ ಎಂದರು.

    ಅಂತರಾಷ್ಟ್ರೀಯ ತೊಗಲು ಗೊಂಬೆಯಾಟದ ಕಲಾವಿದ ಮೋರನಹಳ್ಳಿಯ ಕೇಶಪ್ಪ ಶಿಳ್ಳಿಕ್ಯಾತರ ಹಾಗೂ ರತ್ನಮ್ಮ ಶಿಳ್ಳಿಕ್ಯಾತರ ಗೊಂಬೆಯಾಟವನ್ನು ಪ್ರದರ್ಶಿಸಿದರು. ಪ್ರಮುಖರಾದ ಮಂಜು ಗುಡಿಹಿಂದಲ, ಅರವಿಂದ ಬಡಿಗೇರ, ಏಳುಕೋಟೇಶ ಕೋಮಲಾಪುರ ಇತರರಿದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts