More

    ದೂರು ದಾಖಲಾದ ೨೪ ಗಂಟೆಗಳಲ್ಲಿ ಸರಗಳ್ಳರ ಬಂಧನ

    ಒಟ್ಟು ೨.೧೫ ಲಕ್ಷ ರೂ. ಮೌಲ್ಯದ 25 ಗ್ರಾಂ ಚಿನ್ನ, ಅಟೋ ಜಪ್ತಿ

    ಹೊಸಪೇಟೆ: ಹಾಡಹಗಲೇ ಮಹಿಳೆಯಿಂದ ೧.೨೫ ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿರುವ ಬಗ್ಗೆ ದೂರು ದಾಖಲಾಗುತ್ತಿದ್ದಂತೆ ಕ್ಷಿಪ್ರ ಕಾರ್ಯಾಚರಣೆ ನಡೆಸಿರುವ ಹೊಸಪೇಟೆ ಗ್ರಾಮೀಣ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಮೇನ್ ಬಜಾರ್ ಮಠಪತಿ ಓಣಿಯ ಆಟೊ ಚಾಲಕ ಎಚ್.ಶ್ರೀನಿವಾಸ್(೩೧), ವಿಜಯ ಟಾಕೀಸ್ ಸಮೀಪದ ನಿವಾಸಿ ಆಟೊ ಚಾಲಕ ಎಂ.ಕೃಷ್ಣಗೌಡ(೩೫) ಎಂಬುವರನ್ನು ಬಂಧಿಸಲಾಗಿದೆ.

    ಘಟನೆ ವಿವರ:
    ಕಳೆದ ಭಾನುವಾರ ಕೊಂಡನಾಯಕನಹಳ್ಳಿಯಿAದ ವರಲಕ್ಷö್ಮಮ್ಮ ಎಂಬುವವರು ಚರ್ಚ್ಗೆ ಕರೆದೊಯ್ದು, ಮರಳಿ ಬಿಡಲು ಆಟೋ ಬಾಡಿಗೆ ಮಾಡಿಕೊಂಡಿದ್ದರು. ಚರ್ಚ್ನಿಂದ ಹಿಂದಿರುಗುವಾಗ ಮಾರ್ಗ ಮಧ್ಯೆ ಮತ್ತೋರ್ವನನ್ನು ಆಟೋದಲ್ಲಿ ಕೂರಿಸಿಕೊಂಡಿದ್ದಲ್ಲದೇ, ಎರಡೂ ಬದಿಯ ಪರದೆಗಳನ್ನು ಹಾಕಿದ್ದರು. ಕೊಂಡನಾಯಕನಹಳ್ಳಿ ಬದಲಿಗೆ ಜೋಳದ ರಾಶಿಗುಡ್ಡದತ್ತ ಕರೆದೊಯಿದ್ದಾರೆ. ಮಹಿಳೆಯ ಕೊರಳಲ್ಲಿದ್ದ ೧.೨೫ ಲಕ್ಷ ರೂ. ಮೌಲ್ಯದ ೨೫ ಗ್ರಾಂ ತೂಕದ ಚಿನ್ನಾಭರಣ ದೋಚಿದ್ದರು.

    ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಮಂಗಳವಾರ ಬೆಳಗ್ಗೆ ಪ್ರಕರಣ ದಾಖಲಾಗುತ್ತಿದ್ದಂತೆ ಮಿಂಚಿನ ಕಾರ್ಯಾಚರಣೆ ನಡೆಸಿದ ಪೊಲೀಸರು, ಸಂಜೆ ವೇಳೆಗೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಅವರಿಂದ ೧.೩೫ ಲಕ್ಷ ರೂ. ಮೌಲ್ಯದ ೨೭.೧೭ ಗ್ರಾಂ ಬಂಗಾರದ ಸರ, ೮೦ ಸಾವಿರ ರೂ. ಮೌಲ್ಯದ ಒಂದು ಪ್ಯಾಸೆಂಜರ್ ಆಟೋ ಜಪ್ತಿ ಮಾಡಿದ್ದಾರೆ.

    ಎಸ್ಪಿ ಶ್ರಿಹರಿ ಬಾಬು ಮಾರ್ಗದರ್ಶನದಲ್ಲಿ ಗ್ರಾಮೀಣ ಠಾಣೆ ಪಿಐ ದೀಪಕ್ ಆರ್. ಬಸರೆಡ್ಡಿ ನೇತೃತ್ವದಲ್ಲಿ ಪಿಎಸ್‌ಐ ಬಿ.ಶೇಷಾಚಲಂ ನಾಯ್ಡು, ಸಿಬ್ಪೇಬಂದಿಗಳಾದ ಮಂಜುನಾಥ ಮೇಟಿ, ರಾಘವೇಂದ್ರ ವಿ, ಪಂಪಾಪತಿ, ಕೊಟ್ರೇಶ ಏಳಂಜಿ, ಸಣ್ಣಗಾರಪ್ಪ, ಅಡಿವಪ್ಪ, ಮಲ್ಲಿಕಾರ್ಜುನ ವೈದ್ಯಮಠ ಚಂದ್ರಪ್ಪ.ಬಿ, ನಜೀರ್ ಸಾಹೇಬ್, ಕುಮಾರನಾಯ್ಡ್ (ಸಿ.ಡಿ.ಆರ್ ಸೆಲ್) ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts