More

    ಕುಂಬ್ಳೆ ಜತೆಗಿನ ವಾದ ರಂಗಕ್ಕೆ ಸೀಮಿತ: ಗೋವಿಂದ ಭಟ್

    ಮಂಗಳೂರು: ಸುದೀರ್ಘ ಕಾಲ ಧರ್ಮಸ್ಥಳ ಮೇಳದಲ್ಲಿ ಕುಂಬ್ಳೆ ಸುಂದರ ರಾವ್ ಅವರ ಒಡನಾಡಿ ಕಲಾವಿದರಾಗಿದ್ದ ಕೆ.ಗೋವಿಂದ ಭಟ್ ತಮ್ಮನ್ನಗಲಿದ ಹಿರಿಯ ಕಲಾವಿದನ ಸ್ಮರಣೆಯನ್ನು ವಿಜಯವಾಣಿ ಜತೆ ಇಲ್ಲಿ ಹಂಚಿಕೊಂಡಿದ್ದಾರೆ. ಗೋವಿಂದ ಭಟ್ ಅವರ ಮಾತುಗಳಲ್ಲೇ ಓದಿಕೊಳ್ಳಿ.

    ಕುಂಬಳೆ ಸುಂದರ ರಾವ್ ನಿಧನ ಸುದ್ದಿ ಕೇಳಿ ಮಾನಸಿಕವಾಗಿ ಕುಸಿದೆ.

    ಅವರು ನನಗಿಂತ ಎರಡು ವರ್ಷ ಹಿರಿಯರು. ಆದರೆ ಮೊದಲು ಯಕ್ಷಗಾನ ಮೇಳ ಸೇರಿದ್ದು ನಾನು. ಅವರು ಮೇಳ ಸೇರುವಾಗಲೇ ವಾಗ್ಮಿ. ಇರಾ ಸೋಮನಾಥೇಶ್ವರ ಯಕ್ಷಗಾನ ಮಂಡಳಿ, ಧರ್ಮಸ್ಥಳ ಮೇಳದಲ್ಲಿ ನಾವು ಒಡನಾಡಿಗಳು. ನನ್ನ ಮತ್ತು ಕುಂಬ್ಳೆಯವರ ಒಡನಾಟ 5 ದಶಕಗಳಿಗೂ ಹೆಚ್ಚು. ಮಳೆಗಾಲದಲ್ಲಿ ಅವರಿಗೆ ತಕ್ಷಗಾನದ ತಿರುಗಾಟದ ತಂಡವಿತ್ತು. ಆಗಲೂ ಅವರ ತಂಡದೊಂದಿಗೆ ನಾನಿದ್ದೆ. ಅವರ ಒಡನಾಟ, ಸಾಹಚರ್ಯ ಒಂದು ಅಪೂರ್ವ ಅನುಭವ.

    ರಂಗಸ್ಥಳದಲ್ಲಿ ಪಾತ್ರಧಾರಿಗಳಾದಾಗ ನಾನು ವಾದಿಸುತ್ತಿದ್ದೆವು. ತಾಳಮದ್ದಳೆಗಳಲ್ಲಿಯೂ ಅಷ್ಟೆ. ಕೆಲವು ಕಡೆ ವಾದ ವಿಪರೀತವಾದದ್ದೂ ಇದೆ. ಆದರೆ, ಬಣ್ಣ ಒರೆಸಿದ ಮೇಲೆ ನಾವಿಬ್ಬರೂ ಆತ್ಮೀಯರಾಗಿ ಮೇಳದಲ್ಲಿರುತ್ತಿದ್ದೆವು. ನಮ್ಮ ನಡುವಿನ ವಾದವೆಲ್ಲ ರಂಗಸ್ಥಳಕ್ಕಷ್ಟೇ ಸೀಮಿತವಾಗಿತ್ತು. ರಂಗದ ಹೊರಗೆ ನಾವೆಂದೂ ಭಿನ್ನ ನುಡಿಗಳನ್ನಾಡಿದವರಲ್ಲ.

    ಅವರನ್ನು ವೈಯಕ್ತಿಕ ಜೀವನದಲ್ಲಿಯೂ ಕೆಲವೊಮ್ಮೆ ನಾನು ಎಚ್ಚರಿಸುತ್ತಿದ್ದೆ. ನನ್ನ ಸಲಹೆ, ಸೂಚನೆ ಅವರಿಗೆ ಬೇಕಾಗುತ್ತಿತ್ತು. ನಾನು ತಿಳಿದಂತೆ ಅವರು ಯಾರಿಗೂ ಕೇಡು ಬಯಸಿದವರಲ್ಲ. ಸಹೃದಯಿ ಸ್ನೇಹಿತ, ಅವರ ಆತ್ಮಕ್ಕೆ ಶಾಂತಿ ದೊರೆಯಲಿ. ಮನೆಯವರು ಅಗಲಿಕೆಯಿಂದ ಧೃತಿಗೆಡದಿರಲಿ.

    ಸುಂದರ ರಾಯದ ನೆನಪು ಶಾಶ್ವತ, ಅದಕ್ಕೆ ಮರೆಯಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts