More

    ಜಗತ್ತಿನ ಅತಿ ಎತ್ತರದ ರೈಲ್ವೆ ಸೇತುವೆ, ಚೇನಬ್ ಬ್ರಿಡ್ಜ್​​ನ ಆರ್ಚ್​ ರೆಡಿ

    ಶ್ರೀನಗರ : ಕಾಶ್ಮೀರವನ್ನು ಭಾರತದ ಉಳಿದ ಭಾಗಕ್ಕೆ ರೈಲು ಮಾರ್ಗದ ಮೂಲಕ ಜೋಡಿಸುವ ಪ್ರಯತ್ನವಾದ ಚೇನಬ್​ ಬ್ರಿಡ್ಚ್​ನ ಆರ್ಚ್​ ನಿರ್ಮಾಣ ಕಾರ್ಯವು ಪೂರ್ಣಗೊಂಡಿದೆ ಎಂದು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ. ಜಗತ್ತಿನ ಅತಿ ಎತ್ತರದ ರೈಲ್ವೆ ಬ್ರಿಡ್ಜ್ ಆದ ಚೇನಬ್ ಬ್ರಿಡ್ಜ್​ನ ಆರ್ಚ್​ 467 ಮೀಟರ್ ಉದ್ದವಿದ್ದು, ಪ್ಯಾರಿಸ್​​ನ ಐಫಿಲ್ ಟವರ್​ಗಿಂತ 35 ಮೀಟರ್ ಎತ್ತರವಿದೆ.

    ಇದು ‘ಭಾರತಕ್ಕೆ ಒಂದು ಹೆಮ್ಮೆಯ ಕ್ಷಣ’ ಎಂದು ಗೋಯಲ್ ಟ್ವೀಟ್ ಮಾಡಿದ್ದಾರೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ರೈಲ್ವೆ ಸಂಪರ್ಕ ಸಾಧಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಆಶಯ ರೈಲ್ವೆ ಇಲಾಖೆಯನ್ನು ಹೊಸ ಎತ್ತರಗಳನ್ನು ಏರಲು ಪ್ರೇರೇಪಿಸಿದೆ ಎಂದಿದ್ದಾರೆ.

    ಜಮ್ಮು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಚೇನಬ್ ನದಿಯ ಮೇಲೆ ಈ ರೈಲ್ವೇ ಸೇತುವೆ ನಿರ್ಮಾಣಗೊಂಡಿದೆ. ಇದು ಉಧಮಪುರ- ಶ್ರೀನಗರ-ಬಾರಾಮುಲ್ಲ ರೈಲ್ವೇ ಯೋಜನೆಯ ಅಂಗವಾಗಿ ಜಮ್ಮು ಕಾಶ್ಮೀರದಿಂದ ದೇಶದ ಉಳಿದ ಭಾಗಗಳಿಗೆ ರೈಲು ಮಾರ್ಗ ಕಲ್ಪಿಸಲಿದೆ. ಒಟ್ಟು 1,250 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಚೇನಬ್ ಬ್ರಿಡ್ಜ್​ ನಿರ್ಮಾಣ ಕಾರ್ಯವು ನವೆಂಬರ್ 2017 ರಲ್ಲಿ ಆರಂಭವಾಗಿತ್ತು. ಸೇತುವೆಯ ಒಟ್ಟು ಉದ್ದ 1,315 ಮೀಟರ್​ಗಳಾಗಿದ್ದು, ಆರ್ಚ್​ 467 ಮೀಟರ್ ಉದ್ದ ಇದೆ.

    ಇದನ್ನೂ ಓದಿ: ಹೇಮಾವತಿ ನಾಲೆಗೆ ಭೂಮಿ ನೀಡಿದ್ದ ರೈತರಿಗೆ ಬಾಕಿ ಪರಿಹಾರ ಬಿಡುಗಡೆ ; ಮಾತು ಉಳಿಸಿಕೊಂಡ ಜೆಸಿಎಂ

    ಈ ರೈಲು ಸೇತುವೆಯು ಅತ್ಯುತ್ತಮ ಸುರಕ್ಷಾ ವ್ಯವಸ್ಥೆಯನ್ನು ಹೊಂದಿದ್ದು, ಭೂಕಂಪ ಮತ್ತು ದೊಡ್ಡ ಪ್ರಮಾಣದ ಸ್ಫೋಟಗಳನ್ನು ತಡೆಯುವ ಶಕ್ತಿ ಹೊಂದಿದೆ. ಈ ರೀತಿಯ ಇಂಜಿನಿಯರಿಂಗ್ ವಿಸ್ಮಯದ ನಿರ್ಮಾಣವು ಜಮ್ಮು ಕಾಶ್ಮೀರದ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹದಾಯಕ ಎನ್ನಲಾಗಿದೆ. (ಏಜೆನ್ಸೀಸ್)

    ಭ್ರಷ್ಟಾಚಾರ ಆರೋಪ : ಮಹಾ ಗೃಹ ಸಚಿವರ ವಿರುದ್ಧ ಸಿಬಿಐ ತನಿಖೆ ಆದೇಶಿಸಿದ ಹೈಕೋರ್ಟ್

    ಬೇಸಿಗೆಯಲ್ಲಿ ನಿಮ್ಮ ತ್ವಚೆಯ ಆರೈಕೆಗಾಗಿ ಹೀಗೆ ಮಾಡಿ

    ಬಾಲಿವುಡ್​ ನಟರ ಬೆನ್ನು ಹತ್ತಿದ ಕರೊನಾ : ಗೋವಿಂದ ಪಾಸಿಟೀವ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts