More

    ನೈಋತ್ಯ ರೈಲ್ವೆ ಜಿಎಂ ಆಗಿ ಅರವಿಂದ ಶ್ರೀವಾಸ್ತವ ಅಧಿಕಾರ

    ಹುಬ್ಬಳ್ಳಿ : ನೈಋತ್ಯ ರೈಲ್ವೆ ವಲಯದ ನೂತನ ಪ್ರಧಾನ ವ್ಯವಸ್ಥಾಪಕರಾಗಿ ಅರವಿಂದ ಶ್ರೀವಾಸ್ತವ ಅವರು ಶುಕ್ರವಾರ ಅಧಿಕಾರ ವಹಿಸಿಕೊಂಡರು.

    ಈ ಮೊದಲಿದ್ದ ಪ್ರಧಾನ ವ್ಯವಸ್ಥಾಪಕ ಸಂಜೀವ ಕಿಶೋರ ಅವರು ಫೆ. 29ರಂದು ಸೇವಾ ನಿವೃತ್ತಿ ಹೊಂದಿದ್ದರು.

    ಅರವಿಂದ ಶ್ರೀವಾಸ್ತವ ಅವರು ವಾರಣಾಸಿಯ ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಯಿಂದ ಬಿ.ಟೆಕ್ (ಮೆಕ್ಯಾನಿಕಲ್ ಇಂಜಿನಿಯರಿಂಗ್) ಪದವಿ ಪಡೆದಿದ್ದಾರೆ.

    1987 ರ ಬ್ಯಾಚ್​ನ ಭಾರತೀಯ ರೈಲ್ವೆ ಸ್ಟೋರ್ಸ್ ಸರ್ವೀಸ್ (ಐ.ಆರ್.ಎಸ್.ಎಸ್) ಅಧಿಕಾರಿಯಾಗಿರುವ ಅವರು, 1989ರ ಮಾ. 6 ರಂದು ರೈಲ್ವೆ ಇಲಾಖೆಗೆ ಸೇರಿದರು. ಭಾರತೀಯ ರೈಲ್ವೆಯೊಂದಿಗೆ ಮೂರೂವರೆ ದಶಕಗಳ ಕಾಲ ಒಡನಾಟ ಹೊಂದಿದ್ದಾರೆ. ಕೋಲ್ಕತ್ತಾದ ಪೂರ್ವ ರೈಲ್ವೆ, ವಾರಣಾಸಿಯ ಡೀಸೆಲ್ ಲೋಕೋಮೋಟಿವ್ ವರ್ಕ್ಸ್, ದೆಹಲಿಯ ರೈಲ್ವೆ ಮಂಡಳಿ, ಬೆಂಗಳೂರಿನ ರೈಲ್ ವ್ಹೀಲ್ ಫ್ಯಾಕ್ಟರಿ ಮತ್ತು ಕೋಲ್ಕತ್ತಾದ ಆಗ್ನೇಯ ರೈಲ್ವೆ ಸೇರಿದಂತೆ ವಿವಿಧ ಇಲಾಖೆಯ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

    ಬೆಂಗಳೂರಿನ ರೈಲು ಗಾಲಿ ಕಾರ್ಖಾನೆಯ ಮುಖ್ಯ ಸಾಮಗ್ರಿ ವ್ಯವಸ್ಥಾಪಕರಾಗಿ, ಸೊ್ಟೕರ್ಸ್ (ಜಾಗೃತ) ಕಾರ್ಯನಿರ್ವಾಹಕ ನಿರ್ದೇಶಕರಾಗಿ, ದೆಹಲಿ ರೈಲ್ವೆ ಮಂಡಳಿ ಮುಖ್ಯ ವಿಚಕ್ಷಣಾ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.

    ಅರವಿಂದ ಶ್ರೀವಾಸ್ತವ ಅವರು ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕರಾಗುವ ಮುನ್ನ ಕೋಲ್ಕತ್ತಾದ ಆಗ್ನೇಯ ರೈಲ್ವೆಯ ಪ್ರಧಾನ ಮುಖ್ಯ ಸಾಮಗ್ರಿ ವ್ಯವಸ್ಥಾಪಕರಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts