More

    ರಾಜಕೀಯ ಪ್ರೇರಿತ ಹೋರಾಟ ಸಲ್ಲ; ಜಿ.ಹನುಮಂತ್ರಾಯ ನಾಯಕ ಕೊತ್ತದೊಡ್ಡಿ ಹೇಳಿಕೆ

    ಅರಕೇರಾ ಅಭಿವೃದ್ಧಿ ಹೋರಾಟ ಸಮಿತಿ ಪೂರ್ವಭಾವಿ ಸಭೆ

    ಅರಕೇರಾ: ದೇವದುರ್ಗ ಹಾಗೂ ಅರಕೇರಾ ಅವಳಿ ತಾಲೂಕುಗಳ ಅಭಿವೃದ್ಧಿಗಾಗಿ ರಾಜಕೀಯ ಮಾಡಬೇಕು. ವೈಯಕ್ತಿಕ ಟೀಕೆಗಾಗಿ ಅರಕೇರಾ ತಾಲೂಕು ರಚನೆಯನ್ನು ವಿರೋಧಿಸಬಾರದು ಎಂದು ಕರವೇ ತಾಲೂಕು ಘಟಕದ ಮಾಜಿ ಅಧ್ಯಕ್ಷ ಜಿ.ಹನುಮಂತ್ರಾಯ ನಾಯಕ ಕೊತ್ತದೊಡ್ಡಿ ಹೇಳಿದರು.

    ಇದನ್ನೂ ಓದಿ: ರೈತರ ಪರ ಎಚ್‌ಡಿಡಿ, ಎಚ್‌ಡಿಕೆ ನಿರಂತರ ಹೋರಾಟ

    ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಅರಕೇರಾ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ರಚನೆ ಪೂರ್ವಭಾವಿ ಸಭೆಯಲ್ಲಿ ಮಂಗಳವಾರ ಮಾತನಾಡಿದರು. ಅಖಂಡ ತಾಲೂಕು ಹೋರಾಟ ಸಮಿತಿಯಿಂದ ಸೋಮವಾರ ದೇವದುರ್ಗದಲ್ಲಿ ನಡೆದ ಪ್ರತಿಭಟನೆ ರಾಜಕೀಯ ಪ್ರೇರಿತವಾಗಿದೆ ಎಂದು ದೂರಿದರು.

    ಶಾಸಕಿ ಕರೆಮ್ಮ ಜಿ.ನಾಯಕ ಶಿಫಾರಸ್ಸು ಮಾಡಲಿ

    ನೂತನ ಅರಕೇರಾ ತಾಲೂಕು ರದ್ದು ಮಾಡಿದರೆ ಯಾವುದೇ ಪ್ರಯೋಜನಗಳಿಲ್ಲ. ಗಬ್ಬೂರು ಇಲ್ಲವೇ ಜಾಲಹಳ್ಳಿ ಗ್ರಾಮವನ್ನು ಹೊಸ ತಾಲೂಕು ಕೇಂದ್ರವಾಗಿಸಲು ಶಾಸಕಿ ಕರೆಮ್ಮ ಜಿ.ನಾಯಕ ಶಿಫಾರಸ್ಸು ಮಾಡಲಿ. ಆದರೆ, ಅರಕೇರಾ ತಾಲೂಕು ರದ್ದು ಮಾಡಬೇಕೆಂದು ಅಕ್ರಮ ಕೂಟ ರಚಿಸಿಕೊಳ್ಳಲಾಗಿದೆ. ಶಾಸಕಿ ಕರೆಮ್ಮ ಜಿ.ನಾಯಕ ಹಾಗೂ ಜೆಡಿಎಸ್ ತಾಲೂಕು ಅಧ್ಯಕ್ಷ ಬುಡ್ಡನಗೌಡ ಪಾಟೀಲ್ ಇದಕ್ಕೆ ಕುಮ್ಮಕ್ಕು ನೀಡುತ್ತಿರುವುದು ಸರಿಯಲ್ಲ ಎಂದು ಹನುಮಂತ್ರಾಯ ನಾಯಕ ಅಸಮಧಾನ ವ್ಯಕ್ತಪಡಿಸಿದರು.

    ಭೋವಿ ಸಮಾಜದ ತಾಲೂಕು ಮಾಜಿ ಅಧ್ಯಕ್ಷ ಬಸವರಾಜ ಮ್ಯಾಕಲ್ ಮಾತನಾಡಿ, ದೇವದುರ್ಗದಿಂದ ತಾಲೂಕಿನ ಕೊನೆಯ ಭಾಗದ ಹಳ್ಳಿಗಳಿಗೆ 50 ರಿಂದ 60 ಕಿ.ಮೀ ದೂರವಾಗುತ್ತದೆ. ಈ ಹಿನ್ನೆಲೆಯಲ್ಲಿ ವೈಜ್ಞಾನಿಕ ದೃಷ್ಟಿಯಿಂದ ಅರಕೇರಾ ತಾಲೂಕು ರಚನೆಯಾಗಿದೆ. ಹೊಸ ತಾಲೂಕು ರಚನೆಯಾಗಿ ಎರಡು ವರ್ಷಗಳಾಗಿವೆ. ಈಗಾಗಲೇ ತಾಲೂಕಿಗೆ ತಹಸೀಲ್ದಾರ್ ಹಾಗೂ ಇತರ ಸಿಬ್ಬಂದಿ ನೇಮಕವಾಗಿದ್ದಾರೆ. ತಾಲೂಕು ಆಡಳಿತ ಭವನ ನಿರ್ಮಾಣಕ್ಕೆ ಸರ್ಕಾರ ಸ್ಥಳ ಪರಿಶೀಲನೆ ನಡೆಸಿದೆ. ನಮ್ಮ ಹಕ್ಕನ್ನು ಕಸಿದುಕೊಳ್ಳಲು ಜಾಲಹಳ್ಳಿ ಹಾಗೂ ಗಬ್ಬೂರಿನ ಹೆಸರಿನಲ್ಲಿ ಜೆಡಿಎಸ್‌ನವರು ಹೋರಾಟ ನಡೆಸಿದ್ದಾರೆ ಎಂದು ದೂರಿದರು.

    ಪ್ರಮುಖರಾದ ಮಹಾಂತೇಶ ಪೂಜಾರಿ, ವಿಶ್ವನಾಥ ಹೊಸಮನಿ, ಮಹೇಶ ನಾಯಕ ಆಲ್ಕೋಡ, ನಾಗರಾಜ ದೇವರಮನಿ, ಮುದ್ದಣ್ಣ ನಾಯಕ, ನೂರ್ ಆಹ್ಮದ್ ಸಾಬ್, ಬಸವರಾಜ ಪೂಜಾರಿ, ವೀರೇಶ ಬೇರಿ, ಬಾಲಗೌಡ ಸಾತಲ್, ವೆಂಕಟೇಶ ಬುದ್ದಿನ್ನಿ, ರಾಜು ಗುರಿಕೇರಾ, ಮಲ್ಲಿಕಾರ್ಜುನ ಪಡಗಿನದೊಡ್ಡಿ, ಕೆಂಚಣ್ಣ, ಆಂಜನೇಯ ದಳವಾಯಿ, ಸುಲ್ತಾನ್ ಸಾಬ್, ಖಾದರ್ ಸಾಬ್ ಟೈಲರ್, ಶಿವಕುಮಾರ ಗುಜ್ಜುಪ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts