More

    ಕರ್ನಾಟಕದ ಅಭ್ಯರ್ಥಿಗಳಿಗೆ ಬೆಂಗಳೂರು ಬಿಇಎಲ್​ನಲ್ಲಿ ಅಕೌಂಟೆಂಟ್ ಟ್ರೇನಿ ಅಪ್ರೆಂಟಿಸ್​ಷಿಪ್ ಗೆ ಅವಕಾಶ

    ಬೆಂಗಳೂರು : ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ಬೆಂಗಳೂರಿನಲ್ಲಿ ರಾಷ್ಟ್ರೀಯ ಕೌಶಲ ಅಬಿವೃದ್ಧಿ ನಿಗಮದ ವತಿಯಿಂದ ರಾಷ್ಟ್ರೀಯ ಅಪ್ರೆಂಟಿಸ್​​ಷಿಪ್ ಉತ್ತೇಜನ ಯೋಜನೆಯಡಿ ಅಕೌಂಟೆಂಟ್ ತರಬೇತಿಗಾಗಿ ಬಿ.ಕಾಂ ಪದವೀಧರ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
    ತರಬೇತಿಯ ಆರಂಭಿಕ ಅವಧಿ 1 ವರ್ಷದ್ದಾಗಿರುತ್ತದೆ. ಬಿ.ಕಾಂ ಪದವಿಯನ್ನು ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳು ಶೇ. 60 ಅಂಕಗಳೊಂದಿಗೆ ಹಾಗೂ ಎಸ್​ಸಿ, ಎಸ್​ಟಿ, ಅಂಗವಿಕಲ ಅಭ್ಯರ್ಥಿಗಳು ಶೇ. 50 ಅಂಕಗಳೊಂದಿಗೆ 2018 ಅಥವಾ ಅದರ ನಂತರ ಪಾಸಾಗಿರಬೇಕು. ಕರ್ನಾಟಕ ಅಭ್ಯರ್ಥಿಯೇ ಆಗಿರಬೇಕು. ಉನ್ನತ ಶಿಕ್ಷಣ ಪೂರೈಸಿದವರು ಅರ್ಜಿ ಸಲ್ಲಿಸಲು ಅರ್ಹರಲ್ಲ.

    ಇದನ್ನು ಓದಿ: ಆ.5ರಂದು ನ್ಯೂಯಾರ್ಕ್‌ನಲ್ಲಿಯೂ ಅಯೋಧ್ಯೆಯ ರಾಮ- ಐತಿಹಾಸಿಕ ಕ್ಷಣಕ್ಕೆ ಅಮೆರಿಕ ಸಾಕ್ಷಿ

    ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಪದವಿಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಮಾಸಿಕ ಸ್ಟೈಪಂಡ್ 10,500 ರೂ. ನೀಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಎಸ್​ಎಂಎಸ್/ ಇ ಮೇಲ್ ಮೂಲಕ ತಿಳಿಸಲಾಗುತ್ತದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು www.apprenticeshipindia.org ಮೂಲಕ ಆಗಸ್ಟ್ 8 ರೊಳಗಾಗಿ ಆನ್​​ಲೈನ್ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ http://bel-india.in ಸಂಪರ್ಕಿಸಬಹುದು.

    ಅಂತಿಮ ವರ್ಷದ ಪದವಿ ಪರೀಕ್ಷೆ ಬಗ್ಗೆ ಸುಪ್ರೀಂ ಕೋರ್ಟ್​ಗೆ ಯುಜಿಸಿ ಸಲ್ಲಿಸಿದ ಪ್ರತಿಕ್ರಿಯೆಯಲ್ಲಿ ಏನಿದೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts