More

    ಜೈನ ಮುನಿಗಳಿಗೆ ರಕ್ಷಣೆ ನೀಡಲು ಮನವಿ

    ಹಾನಗಲ್ಲ: ಜೈನಮುನಿ ಕಾಮಕುಮಾರ ನಂದಿ ಮಹಾರಾಜರನ್ನು ಹತ್ಯೆ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಜೈನ ಮುನಿಗಳಿಗೆ ಸೂಕ್ತ ರಕ್ಷಣೆ ನೀಡುವಂತೆ ಆಗ್ರಹಿಸಿ ತಾಲೂಕು ದಿಗಂಬರ ಜೈನ ಸಂಘದ ವತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

    ನಂತರ ತಹಸೀಲ್ದಾರ್ ಶಶಿಧರ ಮಾಡ್ಯಾಳ ಅವರಿಗೆ ಮನವಿ ಸಲ್ಲಿಸಿ, ಯಾರಿಗೂ ಕೇಡು ಬಯಸದ ಜೈನ ಮುನಿಗಳನ್ನು ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿರುವುದು ಖಂಡನೀಯ. ಶಾಂತಿ ಪ್ರಿಯರಾದ ಜೈನ ಸಮಾಜಕ್ಕೆ ಈ ಘಟನೆಯಿಂದ ಆಘಾತವಾಗಿದೆ. ಮುನಿಗಳನ್ನು ಹತ್ಯೆ ಮಾಡಿದವರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಇದರ ಹಿಂದೆ ಯಾರ ಕೈವಾಡವಿದೆ. ಹಣಕ್ಕಾಗಿ ನಡೆದ ಘಟನೆಯೋ ಅಥವಾ ಬೇರೆ ಯಾವ ಉದ್ದೇಶಕ್ಕೆ ಹತ್ಯೆ ನಡೆಸಲಾಗಿದೆ ಎಂಬುದರ ಕುರಿತು ಸಮಗ್ರ ತನಿಖೆ ನಡೆಯಬೇಕು ಎಂದು ಮನವಿಯಲ್ಲಿ ಒತ್ತಾಯಿಸಿಲಾಗಿದೆ.

    ಹಾಸನ, ಶ್ರವಣಬೆಳಗೊಳಕ್ಕೆ ತೆರಳುವ ಜೈನ ಮುನಿಗಳು, ಶ್ರಾವಕ, ಶ್ರಾವಕಿಯರು ಹಾನಗಲ್ಲ ಮಾರ್ಗವಾಗಿ ತೆರಳುತ್ತಾರೆ. ತಾಲೂಕಿನ ಜೈನ ಬಸದಿಗಳಲ್ಲಿ ರಾತ್ರಿ ತಂಗುತ್ತಾರೆ. ಹೀಗಾಗಿ ಅವರಿಗೆ ಜಿಲ್ಲಾಡಳಿತ ಸೂಕ್ತ ಭದ್ರತೆ ಒದಗಿಸಬೇಕು. ಈ ಹಿನ್ನೆಲೆಯಲ್ಲಿ ಹಾನಗಲ್ಲ ಪುರಸಭೆ ವತಿಯಿಂದ ಜೈನ ಸಮಾಜ ಭವನ ನಿರ್ಮಾಣಕ್ಕೆ ನಿವೇಶನ ನೀಡಲಾಗಿದ್ದು, ಸರ್ಕಾರ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಅನುದಾನ ಬಿಡುಗಡೆಗೊಳಿಸಬೇಕು. ಸರ್ಕಾರ ಮುಂಬರುವ ದಿನಗಳಲ್ಲಿ ಜೈನ ಸಮುದಾಯದವರಿಗೆ ಜೀವನಕ್ಕೆ ತೊಂದರೆಯಾಗದ ರೀತಿಯಲ್ಲಿ ಭದ್ರತೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

    ದಿಗಂಬರ ಜೈನ ಸಂಘದ ಗೌರವಾಧ್ಯಕ್ಷೆ ಶಾಂತಕ್ಕ ಅಂಗಡಿ, ಅಧ್ಯಕ್ಷ ಶಿವಪ್ಪ ಕಾನಣ್ಣನವರ, ಉಪಾಧ್ಯಕ್ಷ ಶಶಿಧರ ಗೌಡರ, ಕಾರ್ಯದರ್ಶಿ ರಮೇಶ ಕಳಸೂರ, ಆನಂದ ಹವಳಣ್ಣನವರ, ಶಂಕ್ರಣ್ಣ ಪಾಟೀಲ, ಅಶೋಕ ರಾಯಪ್ಪನವರ, ಸುಧೀರ ದೊಡ್ಡಸಂಕಣ್ಣನವರ, ಬಸನಗೌಡ ಪಾಟೀಲ, ವರ್ಧಮಾನ ಮಂತಗಿ, ನಾಗಪ್ಪ ನಡುವಿನಮನಿ, ಅಜೀತ ಕಂಚಿನಕೋಟಿ, ಧನಂಜಯ ಹಳ್ಳಿಯವರ, ಬಾಹುಬಲಿ ಅಡವಿ ಇತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts