More

    ಕೋಲಾರದ ಎಪಿಎಂಸಿಯಿಂದ ಬಿಹಾರಕ್ಕೆ ಟೊಮ್ಯಾಟೊ ಸಾಗಣೆಗೆ ಪ್ರತ್ಯೇಕ ರೈಲು ವ್ಯವಸ್ಥೆ

    ಕೋಲಾರ: ಕೋಲಾರದ ಎಪಿಎಂಸಿಯಿಂದ ಬಿಹಾರಕ್ಕೆ ಟೊಮ್ಯಾಟೊ ಸಾಗಣೆಗೆ ಪ್ರತ್ಯೇಕ ರೈಲು ವ್ಯವಸ್ಥೆ ಶೀಘ್ರ ಕಾರ್ಯರೂಪಕ್ಕೆ ಬರಲಿದೆ ಎಂದು ಸಂಸದ ಎಸ್. ಮುನಿಸ್ವಾಮಿ ಹೇಳಿದರು.

    ಡಾ.ಬಿ.ಆರ್.ಅಂಬೇಡ್ಕರ್ ಅವರ 64ನೇ ಪರಿನಿರ್ವಾಣ ದಿನದ ಅಂಗವಾಗಿ ಭಾನುವಾರ ನಗರದ ನಚಿಕೇತ ನಿಲಯದ ಆವರಣದಲ್ಲಿನ ಡಾ.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿ, ರೈಲಿನ ಮೂಲಕ ಟೊಮ್ಯಾಟೊಗಳನ್ನು ಹೊರ ರಾಜ್ಯಗಳಿಗೆ ಕಡಿಮೆ ಖರ್ಚಿನಲ್ಲಿ ಸಾಗಾಟ ಸಾಧ್ಯವಾಗಲಿದ್ದು, ಇದರಿಂದ ಜಿಲ್ಲೆಯ ರೈತರಿಗೆ ಹೆಚ್ಚಿನ ಅನುಕೂಲ ಆಗಲಿದೆ ಎಂದರು.

    ರೈಲು ಸಂಚಾರ ಆರಂಭ: ಕರೊನಾ ಕಾರಣದಿಂದ ಸಂಚಾರ ಸ್ಥಗಿತಗೊಂಡಿರುವ ಸ್ಥಳೀಯ ರೈಲುಗಳ ಆರಂಭಕ್ಕೂ ಚಿಂತಿಸಲಾಗಿದ್ದು, ಡಿ.7ರ ಬೆಳಗ್ಗೆ 6.30ಕ್ಕೆ ಮಾರಿಕುಪ್ಪಂನಿಂದ ಬೆಂಗಳೂರಿಗೆ ಹೋಗುತ್ತಿದ್ದ ರೈಲು ಸಂಚಾರ ಆರಂಭಗೊಳ್ಳುದೆ. ಈ ಸಂದರ್ಭದಲ್ಲಿ ಪ್ರಯಾಣಿಕರಿಗೆ ಮಾಸ್ಕ್ ವಿತರಿಸಿ ರೈಲು ಸಂಚಾರಕ್ಕೆ ಚಾಲನೆ ನೀಡಲಾಗುವುದು. ಸಂಜೆ 5ಕ್ಕೆ ಬಂಗಾರಪೇಟೆಯಿಂದ ಮೈಸೂರಿಗೆ ಹೋಗುತ್ತಿದ್ದ ರೈಲು ಸೇವೆ ಆರಂಭಗೊಳ್ಳಲಿದೆ. ಎರಡು ದಿನಗಳ ಬಳಿಕ ಕೋಲಾರದಿಂದ ಶ್ರೀನಿವಾಸಪುರ, ಚಿಂತಾಮಣಿ ಮಾರ್ಗದಲ್ಲಿ ರೈಲು ಸೇವೆ ಆರಂಭಿಸಲಾಗುವುದು. ಹಂತಹಂತವಾಗಿ ಎಲ್ಲ ಸೇವೆಗಳು ಆರಂಭಗೊಳ್ಳಲಿವೆ ಎಂದರು.

    ಗ್ರಾಪಂ ಚುನಾವಣೆ ಮುಗಿದ ಬಳಿಕ ಶ್ರೀನಿವಾಸಪುರ ತಾಲೂಕಿನಲ್ಲಿ ರೈಲ್ವೆ ಕಾರ್ಯಾಗಾರ ಕಾಮಗಾರಿ ಆರಂಭಿಸಲು ತೀರ್ಮಾನಿಸಲಾಗಿದ್ದು, ಈ ಬಗ್ಗೆ ರೈಲ್ವೆ ಸಚಿವರೊಂದಿಗೆ ಚರ್ಚಿಸಿರುವುದಾಗಿ ಹೇಳಿದರು.

    ನಚಿಕೇತ ನಿಲಯದ ಅಭಿವೃದ್ಧಿಗೆ ಸಂಸದರ ಅನುದಾನದಿಂದ ಸಾಧ್ಯವಾದಷ್ಟು ನೆರವು ನೀಡುವುದಾಗಿ ಪ್ರಕಟಿಸಿದ ಅವರು, ಸುಮಾರು 2000 ಮಂದಿ ಒಂದೆಡೆ ಸೇರಿ ಸಭೆ ನಡೆಸಲು ತೆರೆದ ಸಭಾಂಗಣ, ಪಾರ್ಕ್, ಅಂಬೇಡ್ಕರ್ ಜೀವನ ಚರಿತ್ರೆ ತಿಳಿಸುವ ಚಿತ್ರಗಳನ್ನು ಅಳವಡಿಸುವ ಯೋಚನೆ ಮಾಡಲಾಗಿದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts