ನವದೆಹಲಿ: ಕೋವಿಡ್-19 ವೈರಸ್ ತನ್ನಿಷ್ಟದಂತೆ ಜನರ ಜೀವನದೊಂದಿಗೆ ಬೇಕಾಬಿಟ್ಟಿ ಆಟ ಆಡುತ್ತಿರುವ ಈ ಸಂದರ್ಭದಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿ ತನ್ನ ಪತ್ನಿ ಅನುಷ್ಕಾ ಶರ್ಮಾ ಜೊತೆ ಕೋವಿಡ್ ವಿರುದ್ಧ ಫೀಲ್ಡ್ಗೆ ಇಳಿಯಲು ಸಜ್ಜಾಗಿದ್ದಾರಂತೆ. ಇಂಥದ್ದೊಂದು ಮಾಹಿತಿಯನ್ನು ಖುದ್ದು ಅನುಷ್ಕಾ ಹೊರಹಾಕಿದ್ದಾರೆ.
ಶನಿವಾರವಷ್ಟೇ ಜನ್ಮದಿನವನ್ನು ಆಚರಿಸಿಕೊಂಡಿರುವ ಖುಷಿಯಲ್ಲಿರುವ ಅನುಷ್ಕಾ ಶರ್ಮಾ, ಎಲ್ಲರೂ ಶುಭ ಹಾರೈಸಿರುವ ಕುರಿತ ಸಂತೋಷ ಹಂಚಿಕೊಂಡಿದ್ದಾರೆ. ಆದರೆ ಭಾರತ ಈಗ ಹೀಗೆ ಕೋವಿಡ್ ಸಂಕಷ್ಟದಲ್ಲಿ ಇರುವಾಗ ಜನ್ಮದಿನದ ಸಂಭ್ರಮ ಪಡುವುದು ಸರಿಯಲ್ಲ ಎಂದಿರುವ ಅನುಷ್ಕಾ, ಸದ್ಯದಲ್ಲೇ ಕೋವಿಡ್ ವಿರುದ್ಧ ಅಭಿಯಾನವೊಂದಕ್ಕೆ ಮುಂದಾಗುವುದಾಗಿ ಹೇಳಿದ್ದಾರೆ.
ನಿಮ್ಮೆಲ್ಲರ ಶುಭ ಹಾರೈಕೆಯಿಂದ ನನಗೆ ತುಂಬಾ ಖುಷಿಯಾಗಿದೆ. ಆದರೆ ದೇಶದಲ್ಲಿನ ಇಷ್ಟೆಲ್ಲ ಸಾವು-ನೋವುಗಳ ನಡುವೆ ಖುಷಿಪಡಲು ಆಗುತ್ತಿಲ್ಲ. ಇಂಥ ಸಂಕಷ್ಟದ ಸಂದರ್ಭದಲ್ಲಿ ಎಲ್ಲರೂ ನಮ್ಮ ದೇಶದೊಂದಿಗೆ ಜೊತೆಗೂಡಿ ನಿಲ್ಲವುದು ಅತ್ಯಗತ್ಯ. ನಾನು ಹಾಗೂ ವಿರಾಟ್ ಆ ನಿಟ್ಟಿನಲ್ಲಿ ಮುಂದೆ ಬರಲಿದ್ದು, ನಮ್ಮಿಂದಾದ ಕಾರ್ಯವನ್ನು ಮಾಡಲಿದ್ದೇವೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಮುಂದಿನ ದಿನಗಳಲ್ಲಿ ಹಂಚಿಕೊಳ್ಳಲಿದ್ದು ಅಭಿಮಾನಿಗಳಾದ ನೀವೂ ಕೈಜೋಡಿಸಿ ಎಂದು ಅವರು ಕೋರಿಕೊಂಡಿದ್ದಾರೆ.
ಡಿಸೆಂಬರ್‌ವರೆಗೂ ಇರುತ್ತೆ ಈ ಕರೊನಾ ಕಾಟ: ಎಚ್ಚರಿಕೆ ನೀಡಿದ ಡಾ. ಮಂಜುನಾಥ್